ಬಡವ ಎಂದು ಸುಳ್ಳು ಹೇಳುತ್ತಿದ್ದಾನೆ ಡ್ರೋನ್ ಪ್ರತಾಪ್ ಮೇಲೆ ಆರೋಪ ಮಾಡಿದ ಡಾ. ಪ್ರಯಾಗ್, ಅಷ್ಟಕ್ಕೂ ಏನು ಹೇಳಿದ್ರು ಗೊತ್ತಾ?

ಸಖತ್ ಟ್ರೋ-ಲ್ ಆಗಿದ್ದ ಡ್ರೋನ್ ಪ್ರತಾಪ್ (Drone Prathap) ಅವರಿಗೆ ತನ್ನನ್ನು ಪ್ರೂವ್ ಮಾಡಿಕೊಳ್ಳಲು ಸಿಕ್ಕಂತಹ ವೇದಿಕೆಯೇ ಬಿಗ್ ಬಾಸ್ ಸೀಸನ್ 10 (Bigg Boss Sisan 10). ಈ ಬಿಗ್ ಬಾಸ್ ಸೀಸನ್ 10 ರಲ್ಲಿ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟ ಡ್ರೋನ್ ಪ್ರತಾಪ್ ಅವರು ತಮ್ಮ ಮೇಲಿದ್ದ ಜನರ ಅಭಿಪ್ರಾಯವನ್ನೇ ಬದಲಾಯಿಸಿಬಿಟ್ಟರು. ಇದೀಗ ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಅವರು ಓಪನ್ ಅಪ್ ಆಗಿ ಚೆನ್ನಾಗಿಯೇ ಆಟ ಆಡುತ್ತಿದ್ದಾರೆ.

ಅದಲ್ಲದೇ ದೊಡ್ಮನೆ ಮನೆಯಲ್ಲಿ ಸಮಾಜದಲ್ಲಿ ತಾನು ಅನುಭವಿಸಿದ ನೋ-ವನ್ನು ಹೊರ ಹಾಕಿ ಜೋರಾಗಿ ಅ-ತ್ತಿದ್ದರು. ಅದಲ್ಲದೇ ವಿವಾದದಲ್ಲಿ ಸಿಲುಕಿದಾಗ ಏನೆಲ್ಲ ಕಷ್ಟಗಳನ್ನು ಎದುರಿಸಿದೆ. ಹಾಗೇ ʻಮೆಂಟಲಿ ಅನ್‌ಸ್ಟೇಬಲ್‌ ಎಂದು ಬರೆದುಕೊಡು’ ತಲೆ ಮೇಲೆ ಹೊ-ಡೆದುಕೊಂಡು ಜೋರಾಗಿಯೇ ಅ-ತ್ತು ಬಿಟ್ಟಿದ್ದರು. ಆದರೆ ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಬಿಬಿಎಂಪಿ ನೋಡಲ್ ಅಧಿಕಾರಿಯಾಗಿದ್ದ ಡಾ. ಪ್ರಯಾಗ್ (Dr.Prayag) ಅವರು ಡ್ರೋನ್ ಪ್ರತಾಪ್ ಸುಳ್ಳುಗಾರ ಎಂದಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಬಿಬಿಎಂಪಿ ನೋಡಲ್ ಅಧಿಕಾರಿಯಾಗಿದ್ದ ಡಾ. ಪ್ರಯಾಗ್ ಅವರು, ʼʼಕೊರೊನಾ ಸಂದರ್ಭದಲ್ಲಿ ಕ್ವಾರಂಟೈನ್‌ ನಿಯಮವನ್ನೂ ಮೀರಿ ಡ್ರೋನ್‌ ಪ್ರತಾಪ್‌ ಹೋಟೆಲ್‌ಗೆ ನವೀನ್‌ (Naveen) ಎಂಬ ವ್ಯಕ್ತಿಯನ್ನು ಕರೆಯಿಸಿಕೊಂಡಿದ್ದರು. ಒಮ್ಮೆ ಕ್ವಾರಂಟೈನ್‌ ಆದರೆ ಯಾರನ್ನೂ ಭೇಟಿಯಾಗಬಾರದು ಎಂಬ ನಿಯಮ ಆಗ ಜಾರಿಯಲ್ಲಿತ್ತು. ಈ ಬಗ್ಗೆ ಹೋಟೆಲ್‌ ಮ್ಯಾನೇಜರ್‌ ಮೇಲ್‌ ಮೂಲಕ ನನಗೆ ಮಾಹಿತಿ ನೀಡಿದ್ದರು.

ಔಷಧ ಕೊಡುವ ನೆಪದಲ್ಲಿ ನವೀನ್‌ ಅವರನ್ನು ಕರೆಸಿಕೊಳ್ಳಲಾಗಿತ್ತು. ಚರ್ಮದ ಕಾ-ಯಿಲೆ ಇರುವ ಕಾರಣ ವಿಶೇಷ ಔಷಧ ತರಿಸಿಕೊಂಡಿದ್ದೇನೆ ಎಂದು ಪ್ರತಾಪ್‌ ತಿಳಿಸಿದ್ದರು. ಇದನ್ನೇ ನಂಬಿದ ಹೋಟೆಲ್‌ನವರು ನವೀನ್‌ ಅವರನ್ನು ರೂಮ್‌ಗೆ ಕಳುಹಿಸಿದ್ದರು. ಮಧ್ಯಾಹ್ನ 1.06 ಒಳಗೆ ಹೋಗಿದ್ದ ನವೀನ್‌ ಮರಳಿದ್ದು ಸುಮಾರು 3.50ಕ್ಕೆ. ಇದರಿಂದ ಅನುಮಾನಗೊಂಡ ಮ್ಯಾನೇಜರ್‌ ಫೋನ್‌ ಮಾಡಿ ಈ ಬಗ್ಗೆ ತಿಳಿಸಿದ್ದರು.

ಅದರಂತೆ ನಾನು ತೆರಳಿ ವಿಚಾರಣೆ ನಡೆಸಿದ್ದೆ. ಆಗ ಪ್ರತಾಪ್‌ ಸುಳ್ಳು ಮಾಹಿತಿ ನೀಡಿ, ಬಂದಿದ್ದು ತನ್ನ ಸಂಬಂಧಿ ಎಂದು ಹೇಳಿದ್ದರು. ಔಷಧ ನೀಡಲು ಬಂದವರು ಅಷ್ಟು ಹೊತ್ತು ರೂಮ್‌ನಲ್ಲಿ ಏನು ಮಾಡುತ್ತಿದ್ದರು? ಬಳಿಕ ವಿಚಾರಣೆ ನಡೆಸಿದಾಗ ನವೀನ್‌ ಲಾಯರ್‌ ಎನ್ನುವುದು ತಿಳಿದು ಬಂದಿತ್ತು. ನವೀನ್‌ಗೆ ಫೋನ್‌ ಮಾಡಿ ಈ ಬಗ್ಗೆ ಎಚ್ಚರಿಸಿದ್ದೆವು. ಕೇಸ್‌ ಸಂಬಂಧ ಚರ್ಚೆಗಾಗಿ ಪ್ರತಾಪ್‌ ತನ್ನನ್ನು ಕರೆಯಿಸಿಕೊಂಡಿದ್ದರು ಎಂದು ನವೀನ್‌ ಒಪ್ಪಿಕೊಂಡಿದ್ದಾರೆ.

ಪ್ರತಾಪ್‌ ಹೇಳಿರುವಂತೆ ಅವರು ಬಡ ಕುಟುಂಬದಿಂದ ಬಂದಿಲ್ಲ. ಅವರ ಅಜ್ಜ ಅಮೆರಿಕ (America) ದಲ್ಲಿದ್ದಾರೆ. ಜನರ ಗಮನ ಸೆಳೆಯಲು ಬಡವ ಎಂದು ಸುಳ್ಳು ಹೇಳುತ್ತಿದ್ದಾರೆ. 84 ದೇಶಗಳಿಗೆ ಬಡವರ ಮಕ್ಕಳು ಹೋಗಲು ಸಾಧ್ಯವಿಲ್ಲ. ಟೋಕಿಯೋ (Tokia) ದಲ್ಲಿ ಪ್ರಾತ್ಯಕ್ಷಿಕೆ ಕೊಟ್ಟಿದ್ದೇನೆ ಎಂದಿರುವುದು ಕೂಡ ಸುಳ್ಳು’ ಎಂದಿದ್ದಾರೆ. ಆದರೆ ಯಾರು ಹೇಳುತ್ತಿರುವುದು ನಿಜ ಯಾರದ್ದು ಸುಳ್ಳು ಎನ್ನುವುದು ನೆಟ್ಟಿಗರ ತಲೆಗೆ ಹುಳ ಬಿಡುವಂತೆ ಮಾಡಿದೆ.

Leave a Reply

Your email address will not be published. Required fields are marked *