ಗಂಡ ಹೆಂಡತಿ (Husband and Wife) ಜಗಳ ಉಂಡು ಮಲಗುವ ತನಕ ಎನ್ನುವ ಮಾತಿದೆ. ಆದರೆ ಈ ಮಾತು ಈಗೀಗ ಅರ್ಥವನ್ನು ಕಳೆದುಕೊಳ್ಳುತ್ತಿದೆ. ಇತ್ತೀಚೆಗಿನ ದಿನಗಳಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ಜಗಳವು ಆರಂಭವಾಗಿ ಆ ಜಗಳವು ದೊಡ್ಡದಾಗಿ ಕಹಿ ಘಟನೆಗಳು ನಡೆಯುತ್ತವೆ. ಅಷ್ಟೇ ಅಲ್ಲದೇ, ಗಂಡ ಹೆಂಡಿರ ಜಗಳವು ಡೈವೋರ್ಸ್ ವರೆಗೂ ತಲುಪುವ ಸಾಧ್ಯತೆಯಿರುತ್ತದೆ. ಆದರೆ ಈ ಘಟನೆಯೊಂದು ಎಲ್ಲರನ್ನು ಬೆಚ್ಚಿ ಬೀಳಿಸಿದೆ.
ಪತಿಯೊಂದಿಗೆ ಜಗಳವಾಡಿ ವೈದ್ಯೆಯೊಬ್ಬಳು ಅನುಮಾನಾಸ್ಪದವಾಗಿ ಸಾ-ವನ್ನಪ್ಪಿದ ಘಟನೆ ಗದಗ ತಾಲೂಕಿನ (Gadag) ಹುಲಕೋಟಿ (Hulkoti) ಗ್ರಾಮದಲ್ಲಿ ನಡೆದಿದ್ದು, ಸ್ಥಳೀಯರನ್ನು ಬೆ-ಚ್ಚಿ ಬೀಳಿಸಿದೆ. ಹೌದು, ಹುಲಕೋಟಿ ಗ್ರಾಮದ ಮನೆಯಲ್ಲಿ ಸರ್ಕಾರಿ ವೈದ್ಯೆ ಡಾ. ಗೀತಾ ಕೋರಿ (Dr. Geetha Kori) ಯವರು ಜೀ-ವ ಕಳೆದುಕೊಂಡಿದ್ದಾರೆ.
ಈ ಡಾ. ಗೀತಾರವರು ಡಾ. ಕುಶಾಲ್ (Dr.Kushal) ಎಂಬುವವರನ್ನು ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದು, ಸುಖವಾಗಿ ಸಂಸಾರ ಮಾಡುತ್ತಿದ್ದ ಈ ದಂಪತಿಗಳ ನಡುವೆ ಜಗಳವು ಆರಂಭವಾಗಿದೆ. ಸಣ್ಣ ಪುಟ್ಟ ವಿಚಾರಕ್ಕೂ ಡಾ. ಗೀತಾರವರು ಜ-ಗಳ ಮಾಡುತ್ತಿದ್ದರು.
ಹೀಗಿರುವಾಗ ನಿನ್ನೆ ರಾತ್ರಿಯ ವೇಳೆ ಎಂದಿನಂತೆ ಗಂಡ ಹೆಂಡಿರ ನಡುವೆ ಜಗಳವು ಶುರುವಾಗಿದೆ. ಕೊನೆಗೆ ಈ ಜಗಳವು ತಾರಕಕ್ಕೇರಿದ್ದು, ವೈದ್ಯೆ ಆ-ತ್ಮಹತ್ಯೆ (Suicide) ಮಾಡಿಕೊಂಡಿದ್ದಾಳೆ. ಆದರೆ ಇತ್ತ ಪತಿ ಕುಶಾಲ್ ಗೀತಾಳನ್ನು ಕೊಂ-ದಿದ್ದಾನೆ ಎಂದು ಆಕೆಯ ಕುಟುಂಬದವರು ಆರೋಪ ಮಾಡುತ್ತಿದ್ದಾರೆ. ಆದರೆ ಇತ್ತ ಮನೆಯ ಗೋಡೆಯ ಮೇಲೆ ಸಾ-ವಿನ ಬಗ್ಗೆ ಬರಹವೊಂದು ಪೊಲೀಸರಿಗೆ ಶಾ-ಕ್ ನೀಡಿದೆ.
ಗೋಡೆಯ ಮೇಲೆ ಈ ರೀತಿಯಾಗಿ ಬರೆದವರು ಯಾರು ಎನ್ನುವುದು ಮಾತ್ರ ತಿಳಿದಿಲ್ಲ. ಆದರೆ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಗದಗ ಗ್ರಾಮೀಣ ಪೊಲೀಸರು (Gadaga Gramin Police) ಪ್ರಕರಣ ದಾಖಲಿಸಿಕೊಂಡು ಎಲ್ಲಾ ರೀತಿಯಿಂದಲೂ ಪೊಲೀಸರು ತ-ನಿಖೆ ನಡೆಸುತ್ತಿದ್ದು, ನಿಜವಾದ ಆ-ರೋಪಿ ಯಾರು ಎನ್ನುವುದು ತ-ನಿಖೆಯ ಬಳಿಕವಷ್ಟೇ ತಿಳಿದುಬರಬೇಕಾಗಿದೆ.