ಲೈಫ್ ಇಸ್ ಬ್ಯೂಟಿಫುಲ್ ಎನ್ನುವುದಿದೆ. ಆದರೆ ಕೆಲವೊಮ್ಮೆ ಬದುಕಿನಲ್ಲಿ ಊಹೆ ಮಾಡಲು ಸಾಧ್ಯವಾಗದಂತಹ ಘಟನೆಗಳು ಘಟಿಸಿ ಬಿಡುತ್ತವೆ. ಇತ್ತೀಚೆಗಿನ ದಿನಗಳಲ್ಲಿ ಕೆ-ಟ್ಟ ನಿರ್ಧಾರ (Bad Decision) ದಿಂದ ಬದುಕನ್ನು ಅಂತ್ಯಗೊಳಿಸಿಕೊಳ್ಳುವರನ್ನು ಕಾಣಬಹುದು. ಇಂತಹದ್ದೇ ಘಟನೆಯೊಂದು ನಡೆದಿದ್ದು, ಇವರದ್ದು ಗಂಡ ಹೆಂಡತಿ ಹಾಗೂ ಮಗನಿರುವ ಸುಂದರವಾಗಿದ್ದ ಕುಟುಂಬವಾಗಿತ್ತು
.ಆದರೆ ಒಂದು ದಿನ ಮಲಗಿದ್ದ ಹೆಂಡತಿ ಮೇಲೆ ಏಳಲೇ ಇಲ್ಲ. ಹೆಂಡತಿಯ ಅಣ್ಣ ಕೂಡ ಅವಳ ಪಕ್ಕದಲ್ಲಿಯೇ ಹೆ-ಣವಾಗಿ ಬಿದ್ದದನು. ಆದರೆ ಈ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಸತ್ಯವು ಬೆಳಕಿಗೆ ಬಂದಿತ್ತು. ಅಂದಹಾಗೆ, ಹೆಂಡತಿ ಸತ್ತು ಮಲಗಿರುವುದನ್ನು ನೋಡಿದ ಗಂಡ ಸೂ-ಸೈಡ್ ಎಂದು ಪೊಲೀಸರಿಗೆ(police) ದೂರು ನೀಡಿದ್ದನು.
ಆದರೆ ಈ ಪ್ರಕರಣವನ್ನು ನೋಡಿದಾಗ ಪೊಲೀಸರಿಗೆ ಇದು ಆ-ತ್ಮಹತ್ಯೆನಾ ಎನ್ನುವ ಅನುಮಾನವೊಂದು ಕಾಡಿತ್ತು. ಕೊನೆಗೆ ಈ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ..ಪ್ರಾರಂಭದಲ್ಲಿ ಇದೊಂದು ಅ-ನೈತಿಕ ಸಂಬಂಧದಿಂದ ಕೊ-ಲೆಯಾಗಿದೆ ಎನ್ನಲಾಗಿದೆ. ಆದರೆ ಅ-ನೈತಿಕ ಸಂಬಂಧದ ಕಥೆಯನ್ನ ಕಟ್ಟುತ್ತಿದ್ದಾರೆ ಎಂದು ಕಾವ್ಯ ಮತ್ತು ಕೊಟ್ರೇಶ್ (Kavya and Kotresh) ಆಪ್ತರು ಆರೋಪ ಮಾಡಿದ್ದಾರೆ.
ಹೀಗಾಗಿ ಮತ್ತೆ ನಂದೀಶ (Nandish) ನನ್ನು ವಿಚಾರಣೆಗೆಂದು ಒಳಪಡಿಸಿದಾಗ ಡಬಲ್ ಮರ್ಡರ್(Double murder) ಯಾವ ಕಾರಣಕ್ಕಾಗಿ ಆಯಿತು ಎನ್ನುವುದು ರಿವೀಲ್ ಆಗಿದೆ ಈ ಪ್ರಕರಣದಲ್ಲಿ ಆಸ್ತಿಯ ಆಸೆಗೆ ಬಿದ್ದದ್ದೇ ಈ ಕೊ-ಲೆಗೆ ಕಾರಣವಾಯಿತು ಎಂದರೆ ಅಚ್ಚರಿಯಾಗಬಹುದು. ಹೌದು, ನಂದೀಶನ ತಂದೆಯ ಹೆಸರಲ್ಲಿ 38 ಎಕರೆ ಜಮೀನು ಇತ್ತು. ಆ ಜಮೀನಿನ ಮೇಲೆ ನಂದೀಶನ ಹೆಂಡತಿಯು ಕಣ್ಣು ಇಟ್ಟಿದ್ದಳು.
ಆ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಸಿಕೊಳ್ಳಬೇಕು ದುರಾಸೆಯಿಂದಾಗಿಯೇ ಲಾಯರ್ ನನ್ನು ಸಂಪರ್ಕ ಮಾಡಿದ್ದಳು.ಈ ವಿಚಾರವು ಮಾವ ಜಾತಪ್ಪ (Jatappa) ನಿಗೆ ತಿಳಿಯುತ್ತಿದ್ದಂತೆ ಅವಳನ್ನು ಮು-ಗಿಸಲು ಪ್ಲಾನ್ ಮಾಡಿದ್ದನು. ಆಕೆಯನ್ನು ಮುಗಿಸಿ ಮಗನಿಗೆ ಬೇರೆ ಮದುವೆ ಮಾಡಲು ಕೂಡ ನಿರ್ಧರಿಸಿದ್ದನು. ತನಿಖೆ ವೇಳೆಯಲ್ಲಿ ಮೊಮ್ಮಗನೇ ಸತ್ಯ ಬಾಯಿ ಬಿಟ್ಟಿದ್ದು, ಇದೀಗ ಆರೋಪಿಯು ಜೈ-ಲು ಪಾಲು ಆಗಿದ್ದಾನೆ.