ಬಿಗ್ ಬಾಸ್ ಮನೆಯ ಬೆಂಕಿ ತನಿಷಾ, ವಯಸ್ಸು 34 ಆದರೂ ಇನ್ನು ಮದುವೆಯಾಗಿಲ್ಲ ಯಾಕೆ ಗೊತ್ತಾ? ಇಲ್ಲಿದೆ ನೋಡಿ ಅಸಲಿ ಕಾರಣ

ಬಿಗ್ ಬಾಸ್ ಸೀಸನ್ 10 (Bigg Boss Sisan 10) ಕಳೆದ ಎಲ್ಲಾ ಸೀಸನ್ ಗಳಿಗಿಂತ ಈ ಬಾರಿಯ ಬಿಗ್ ಬಾಸ್ ವಿಶೇಷತೆಗಳಿಂದ ಕೂಡಿದೆ. ಹ್ಯಾಪಿ ಬಿಗ್ ಬಾಸ್ ಎನ್ನುವ ಟ್ಯಾಗ್ ಲೈನ್ ನೊಂದಿಗೆ ಶುರುವಾದ ಬಿಗ್ ಬಾಸ್ ಶೋನಲ್ಲಿ ಈ ಬಾರಿ ಜಗಳ, ಕಿರುಚಾಟ ಹೈಲೈಟ್ ಆಗಿತ್ತು. ಆದರೆ ಇದೀಗ ಬಿಗ್ ಬಾಸ್ ಶೋ ಕೊನೆಯ ಹಂತಕ್ಕೆ ಬಂದು ತಲುಪಿದೆ. ಇನ್ನೇನು ಕೆಲವೇ ವಾರದಲ್ಲಿ ಬಿಗ್ ಬಾಸ್ ಶೋ ಮುಕ್ತಾಯವಾಗಲಿದೆ.

ಅದಲ್ಲದೇ ಬಿಗ್ ಬಾಸ್ ಮನೆಯಲ್ಲಿ ತನ್ನ ಧ್ವನಿಯ ಮೂಲಕವೇ ಸೌಂಡ್ ಮಾಡಿದವರು ಬೆಂಕಿ ತನಿಷಾ (Tanisha). ಇದ್ದ ವಿಚಾರವನ್ನು ನೇರವಾಗಿ ಹೇಳಿಬಿಡುವ ವ್ಯಕ್ತಿತ್ವ. ತನ್ನ ಖಡಕ್ ಮಾತು, ನಾನು ಇರುವುದೇ ಹೀಗೆ ಎನ್ನುತ್ತಾ ಬಿಗ್ ಬಾಸ್ ಮನೆಯಲ್ಲಿ ಬೆಂಕಿ ಎಂದೇ ಖ್ಯಾತಿಯಾಗಿರುವ ತನಿಷಾರವರಿಗೆ ಇನ್ನು ಮದುವೆಯಾಗಿಲ್ಲ. ವಯಸ್ಸು 34 ದಾಟಿದರೂ ಕೂಡ ತನಿಷಾ ಮದುವೆಯಾಗದೇ ಇರಲು ಕಾರಣವೇನು ಎನ್ನುವುದರ ಕಂಪ್ಲೀಟ್ ಮಾಹಿತಿಯೂ ಈ ಲೇಖನದಲ್ಲಿದೆ.

ಉಳಿದ ಸ್ಪರ್ಧಿಗಳಿಗೆ ಸ್ಪರ್ಧೆ ನೀಡುತ್ತಿದ್ದ ತನಿಷಾರವರೇ ವಾರದ ಮಧ್ಯೆಯೇ ಎಲಿಮಿನೇಟ್ ಆಗಿದ್ದಾರೆ. ಕಳೆದ ವಾರ ಯಾವುದೇ ಎಲಿಮಿನೇಷನ್ ಪ್ರಕ್ರಿಯೆಯೂ ಇರಲಿಲ್ಲ. ʻʻಈ ವಾರ ಯಾರೂ ಮನೆಗೆ ಹೋಗ್ತಿಲ್ಲ. ಯಾಕೆ, ಏನು, ಏನು ವಿಷ್ಯ.. ಪ್ರತಿಯೊಂದೂ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ. ಎಲಿಮಿನೇಷನ್ ಓಪನ್ ಖಂಡಿತ ಇದೆ. ಸದ್ಯಕ್ಕೆ ಎಲಿಮಿನೇಷನ್ ಹೋಲ್ಡ್‌ ಅಲ್ಲಿ ಇದೆʼʼಎಂದಿದ್ದರು.

ಆದರೆ ‘ಬಿಗ್ ಬಾಸ್‌’ ಮನೆಯಲ್ಲಿ ಮಿಡ್‌ ವೀಕ್ ಎಲಿಮಿನೇಷನ್ ನಡೆದಿದೆ. ತನಿಷಾರವರ ಜರ್ನಿ ಮುಕ್ತಾಯವಾಗಿದ್ದು, ಈ ಬಗ್ಗೆ ಬಿಗ್ ಬಾಸ್ ಘೋಷಿಸುತ್ತಿದ್ದಂತೆ ತನಿಷಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಪ್ರೋಮೊದಲ್ಲಿ ಜೋರಾಗಿ ಅತ್ತಿರುವ ತನಿಷಾರವರು, ನನ್ನ ಧ್ವನಿ ನಿಮಗೆಲ್ಲ ಇನ್ನು ಇರಿಟೇಟ್‌ ಮಾಡುವುದಿಲ್ಲ ಎಂದು ಕಣ್ಣೀರು ಇಡುತ್ತಾ ಹೇಳಿದ್ದಾರೆ.

ಕಿರುತೆರೆಯಲ್ಲಿ ಮಂಗಳ ಗೌರಿ (Mangala Gowri) ಧಾರಾವಾಹಿಯಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಇವರು, ಕಿರುತೆರೆಯಲ್ಲಿ ಈಗಾಗಲೇ ಹಲವು ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅದಲ್ಲದೇ ದಂಡುಪಾಳ್ಯ (Dandupalya) ಸಿನಿಮಾದ ಮೂಲಕ ಬೆಳ್ಳಿತೆರೆಗೂ ಎಂಟ್ರಿ ಕೊಟ್ಟ ತನಿಷಾರವರು ಮದುವೆ ಯಾಕೆ ಆಗಿಲ್ಲ ಎನ್ನುವುದನ್ನು ಸಂದರ್ಶನವೊಂದರಲ್ಲಿ ಹೇಳಿದ್ದರು. ತನ್ನ ವೃತ್ತಿ ಹಾಗೂ ವೈಯಕ್ತಿಕ ಬದುಕಿಗೆ ಗೌರವ ನೀಡುವಂತಹ ಹುಡುಗ ಸಿಕ್ಕರೆ ಖಂಡಿತ ಮದುವೆಯಾಗುತ್ತೇನೆ ಎಂದಿದ್ದರು.

Leave a Reply

Your email address will not be published. Required fields are marked *