ರಾಮಮಂದಿರದಲ್ಲಿ ನಡೆಯುವ ಪೂಜಾ ಕಾರ್ಯಕ್ರಮಗಳ ವೇಳೆ ಪೇಜಾವರ ಮಠದ ತೀರ್ಥರು ಮುಖಕ್ಕೆ ಬಟ್ಟೆ ಹೊದ್ದುಕೊಂಡದ್ದು ಯಾಕೆ ಗೊತ್ತಾ? ಅಸಲಿ ಕಾರಣ ಬೇರೇನೇ ಇದೆ

ಕೋಟ್ಯಂತರ ಹಿಂದೂಗಳ ಕನಸಾಗಿದದ್ದು ಈ ರಾಮ ಮಂದಿರ (Rama Mandira) ನಿರ್ಮಾಣ. ಈಗಾಗಲೇ ಜನವರಿ 22 ರಂದು ಬಾಲರಾಮನ ಪ್ರಾಣ ಪ್ರತಿಷ್ಠೆಯೂ ಆಗಿದ್ದು ಸಂಭ್ರಮದ ಕ್ಷಣಕ್ಕೆ ನೂರಾರು ಮಂದಿ ಸಾಕ್ಷಿಯಾಗಿದ್ದಾರೆ.

ಈ ಸಮಯದಲ್ಲಿ ಎಲ್ಲರ ಗಮನ ಸೆಳೆದ ಘಟನೆಯೆಂದರೆ ಅದುವೇ ರಾಮಮಂದಿರದಲ್ಲಿ ನಡೆಯುವ ಪೂಜಾ ಕಾರ್ಯಕ್ರಮಗಳ ವೇಳೆ ಉಡುಪಿಯ ಪೇಜಾವರ ಮಠಾಧೀಶರಾದ ಸ್ವಾಮಿ ವಿಶ್ವಪ್ರಸನ್ನ ತೀರ್ಥ (Swami Vishwaprasanna Teertharu) ರು ಮುಖಕ್ಕೆ ಬಟ್ಟೆಯನ್ನು ಹೊದ್ದುಕೊಂಡದ್ದು.

ದೇಶದ ಪ್ರಧಾನಿ ಮೋದಿ (Modi) ಯವರು ರಾಮಲಲ್ಲಾನಿಗೆ ಭಕ್ಷ್ಯ ಮತ್ತು ಫ‌ಲಗಳನ್ನು ನೈವೇದ್ಯ ಮಾಡುತ್ತಿದ್ದರು. ಈ ವೇಳೆಯಲ್ಲಿ ಅಲ್ಲೇ ಇದ್ದ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಮ್ಮ ಅಂಗವಸ್ತ್ರದಿಂದ ಮುಖ ಮುಚ್ಚಿಕೊಂಡಿದ್ದರು. ಅದಲ್ಲದೇ, ವಿಧಿವಿಧಾನಗಳು ನಡೆಯುತ್ತಿದ್ದ ವೇಳೆ ಅವರು, ಮಂತ್ರೋಚ್ಛಾರಣೆ ಮಾಡುತ್ತಿದ್ದರು. ಮೋದಿಯವರಿಗೆ ಸಲಹೆಗಳನ್ನು ನೀಡುವುದು ಕಂಡು ಬಂದಿತ್ತು.

ಆದರೆ ಸ್ವಾಮೀಜಿಯವರು ಬಟ್ಟೆ ಹೊದಿಸಿದ್ದು ಯಾಕೆ ಎನ್ನುವ ಪ್ರಶ್ನೆಯೊಂದು ಎಲ್ಲರಲ್ಲಿಯೂ ಮೂಡಿತ್ತು, ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಹಿಂದೂ ಪೂಜಾ ವಿಧಿ ವಿಧಾನಗಳ ಪ್ರಕಾರ ದೇವರಿಗೆ ನೈವೇದ್ಯ ಅರ್ಪಿಸುವಾಗ ಯಾರೂ ನೋಡಬಾರದು ಎಂಬ ನಂಬಿಕೆಯೊಂದಿದೆ.

ಈ ಸಂಪ್ರದಾಯವನ್ನು ಮಾಧ್ವ ಪಂಥದ ಸಾಧುಗಳು ಹೆಚ್ಚಾಗಿ ಅನುಸರಿಸುತ್ತಾರೆ. ಹೀಗಾಗಿ ಸ್ವಾಮೀಜಿಯವರು ಕೂಡ ನೈವೇದ್ಯದ ಸಮಯದಲ್ಲಿ ಮುಖ ಮುಚ್ಚಿ ಕೊಂಡಿದ್ದರು. ಅದಲ್ಲದೆ ಈ ಬಗ್ಗೆ ಖಾಸಗಿವಾಹಿನಿ (Private Channel) ಯೊಂದರಲ್ಲಿ ಇದು ದಕ್ಷಿಣ ಭಾರತದ ಪದ್ಧತಿಯೇ ಎಂದು ಸ್ವಾಮೀಜಿಯವರರ ಬಳಿ ಪ್ರಶ್ನೆ ಕೇಳಲಾಗಿತ್ತು.

ಈ ಸಮಯದಲ್ಲಿ ಉತ್ತರ ನೀಡಿದ್ದ ಸ್ವಾಮೀಜಿಯವರು, ‘ಇಲ್ಲ, ಇದನ್ನು ಎಲ್ಲೆಡೆ ಅನುಸರಿಸಬೇಕು . ನೈವೇದ್ಯವನ್ನು ಅರ್ಪಿಸುವಾಗ ಕಣ್ಣು ಮುಚ್ಚಬೇಕು. ಪೂಜಿಸುವುದರಲ್ಲಿ ಹಲವು ಸೂಕ್ಷ್ಮ ಅಂಶಗಳಿವೆ. ಪುರಿ ಜಗನ್ನಾಥ ದೇವಾಲಯದಲ್ಲಿ ಭಗವಂತನಿಗೆ ಆಹಾರವನ್ನು ಅರ್ಪಿಸುವಾಗ ಅದೇ ವಿಧಾನವನ್ನು ಅನುಸರಿಸಲಾಗುತ್ತದೆ. ಮಾನವನ ಬಯಕೆಗಳಿಂದ ಭಗವಂತನಿಗೆ ನೈವೇದ್ಯವನ್ನು ಕಲುಷಿತಗೊಳಿಸಬಾರದು ಎಂಬ ಉದ್ದೇಶದಿಂದ ಈ ವಸ್ತ್ರವನ್ನು ಧರಿಸಲಾಗುತ್ತದೆ ಎಂದು ಹೇಳಲಾಗುತ್ತದೆ’ ಎಂದಿದ್ದಾರೆ.

Leave a Reply

Your email address will not be published. Required fields are marked *