ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ತಂದೆ ತಾಯಿ ಯಾರು ಎಲ್ಲಿದ್ದಾರೆ ಗೊತ್ತಾ? ಕೊನೆಗೂ ಸಿಕ್ತು ಉತ್ತರ!

ಬಿಗ್ ಬಾಸ್ ಸೀಸನ್ 10 (Bigg Boss Sisan 10) ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿರುವ ವಿನಯ್ ಗೌಡ (Vinay Gowda) ಎಲ್ಲರಿಗೂ ಕೂಡ ಚಿರಪರಿಚಿತರು. ಬಿಗ್ ಬಾಸ್ ಮನೆಯಲ್ಲಿ ತನ್ನ ಮಾತು ಹಾಗೂ ಆಟದ ವೈಖರಿಯಿಂದಲೇ ಎಲ್ಲರ ಗಮನ ಸೆಳೆದವರು. ಆದರೆ ನಿಜ ಜೀವನದಲ್ಲಿ ಸಾಕಷ್ಟು ಏಳುಬೀಳುಗಳೊಂದಿಗೆ ನೋವನ್ನು ಅನುಭವಿಸಿದ್ದಾರೆ.

ವಿನಯ್ ಗೌಡರವರಿಗೆ ಪತ್ನಿ ಅಕ್ಷತಾರವರೇ ಪ್ರಪಂಚ. ಈ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಹೇಳಿರುವುದನ್ನು ನೋಡಿರಬಹುದು. ಹಾಗಾದ್ರೆ ವಿನಯ್ ಗೌಡರವರ ತಂದೆ ತಾಯಿಯೂ ಎಲ್ಲಿದ್ದಾರೆ ಎನ್ನುವ ಪ್ರಶ್ನೆಯೊಂದು ಸಹಜವಾಗಿ ಎಲ್ಲರಲ್ಲು ಮೂಡುತ್ತದೆ. ಆದರೆ ಇದೀಗ ಸ್ವತಃ ವಿನಯ್ ಗೌಡರವರೇ ಈ ಬಗ್ಗೆ ಮಾತನಾಡಿದ್ದಾರೆ.

ಹಲವು ವರ್ಷಗಳ ಹಿಂದೆ ವಿನಯ್ ಫೋಷಕರು ವಿ-ಚ್ಛೇದನ ಪಡೆದುಕೊಂಡರು. ಆ ಬಳಿಕ ವಿನಯ್ ಅವರೇ ಒಂಟಿಯಾಗಿ ಹೋರಾಡಿ ಕಿರುತೆರೆಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಪ್ರಾರಂಭದ ದಿನಗಳಲ್ಲಿ ವಿನಯ್ ಮುಂಬೈ (Mumbai) ಗೆ ಹೋಗಿ ಸಾಕಷ್ಟು ನೋವನ್ನು ಅನುಭವಿಸಿದ್ದಾರೆ. ಆದರೆ ಇದೀಗ ಬಿಗ್ ಬಾಸ್ ಸೀಸನ್ 10 ಅವರ ಜೀವನಕ್ಕೆ ಮತ್ತೊಂದು ತಿರುವನ್ನು ನೀಡಿದೆ.

ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ತನ್ನ ತಂದೆ ತಾಯಿಯ ಬಗ್ಗೆ ಮಾತನಾಡಿದ್ದಾರೆ. ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ, ‘ನನ್ನ ತಂದೆ ತಾಯಿ ವಿಚಾರದಲ್ಲಿ ನೋಡಿದ್ದೀನಿ ಮೂರನೇ ವ್ಯಕ್ತಿ ಬಂದು ಏನಾದರೂ ಹೇಳಿದರೆ ಅವರಿಬ್ಬರ ನಡುವೆ ಜಗಳ ಆಗುತ್ತಿತ್ತು. ನನ್ನ ಹೆಂಡತಿ ಮತ್ತು ನನ್ನ ನಡುವೆ ಮೂರನೇ ವ್ಯಕ್ತಿ ಬಂದು ಏನಾದರೂ ಹೇಳಿದರೆ ನಾವಿಬ್ಬರು ಅವರನ್ನು ದೂರ ಇಡುತ್ತೀವಿ ನಾವು ದೂರ ಆಗುವುದಿಲ್ಲ. ನಮ್ಮಿಬ್ಬರಲ್ಲಿ ಅಷ್ಟು ಅಂಡರ್‌ಸ್ಟಾಂಡಿಂಗ್ ಇದೆ. ನನ್ನ ತಂದೆ ತಾಯಿ ಬಗ್ಗೆ ಎಲ್ಲೂ ಮಾತನಾಡುವುದಿಲ್ಲ’ ಎಂದಿದ್ದಾರೆ.

ಮತ್ತೊಂದು ರಿಯಾಲಿಟಿ ಶೋನಲ್ಲಿ ನಾನು ಸ್ಪರ್ಧಿಸುವಾಗ ನನ್ನ ತಂದೆ ತೀರಿಕೊಂಡರು. ಮನೆಯಿಂದ ಹೊರ ಬಂದು 16 ವರ್ಷಗಳ ಕಾಲ ಅವರನ್ನು ನೋಡಿಲ್ಲ. ಕೊನೆ ದಿನಗಳಲ್ಲಿ ನನ್ನನ್ನು ತುಂಬಾ ನೆನಪಿಸಿಕೊಂಡಿದ್ದರಂತೆ. ತಂದೆ ಆರೋಗ್ಯ ಕೆಟ್ಟಾಗ ಅವರ ಜೊತೆಗಿದ್ದವರು ಆಸ್ಪತ್ರೆಗೂ ಸೇರಿಸಿಲ್ಲ ರಿಸೆಪ್ಶನ್‌ನಲ್ಲಿ ಬಿಟ್ಟು ಹೋಗಿದ್ದರು. ನನ್ನ ಹೆಂಡತಿ ಅಕ್ಕ ಅವರಿಗೆ ವಿಚಾರ ತಿಳಿದು ಆಸ್ಪತ್ರೆಗೆ ಹೋಗುವಷ್ಟರಲ್ಲಿ ಅಲ್ಲಿ ಅರ್ಧ ಜೀವ ಹೋಗಿಬಿಟ್ಟಿತ್ತು’ ಎಂದು ಹೇಳಿದ್ದಾರೆ ವಿನಯ್.

‘ರಿಯಾಲಿಟಿ ಶೋ ಮುಗಿಸಿಕೊಂಡು ಬಂದು ಒಂದು ಸಾರಿ ಕೇಳಬೇಕಿತ್ತು ಮಾತನಾಡಬೇಕಿತ್ತು ಅಂದುಕೊಂಡೆ ಅಷ್ಟರಲ್ಲಿ ಅವರು ಇರಲಿಲ್ಲ. ಈ ವಿಚಾರದಲ್ಲಿ ನನಗೆ ಬೇಸರನೂ ಇದೆ ಕೋಪನೂ ಇದೆ.ತಾಯಿ ಮತ್ತೊಂದು ಮದುವೆ ಮಾಡಿಕೊಂಡು ಖುಷಿಯಾಗಿದ್ದಾರೆ, ಅವರಿಗೂ ಮಕ್ಕಳಿದ್ದಾರೆ. ಅವರ ಫ್ಯಾಮಿಲಿಗೆ ತೊಂದರೆ ಕೊಡಲು ನನಗೆ ಇಷ್ಟವಿಲ್ಲ.ಎಲ್ಲೇ ಇದ್ರೂ ಚೆನ್ನಾಗಿರಲಿ, ನಾನು ಚೆನ್ನಾಗಿರಲಿ ಎಂದು ಅವರು ಭಾವಿಸುತ್ತಿರುತ್ತಾರೆ. ನನಗೆ ಅಪ್ಪ ಅಮ್ಮ ತಂದೆ ತಾಯಿ ಎಲ್ಲವೂ ನನ್ನ ಹೆಂಡತಿನೇ’ ಎಂದಿದ್ದಾರೆ ವಿನಯ್.

Leave a Reply

Your email address will not be published. Required fields are marked *