ತಣ್ಣ ನಟನೆ ಯಿಂದಲೇ ಸಿನಿ ಪ್ರಿಯರ ಮನಸ್ಸು ಕದ್ದಿದ ನಟಿ ಸೌಂದರ್ಯರವರ ಪತಿ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಗೊತ್ತಾ?

ಚಂದನವನದಲ್ಲಿ ಗುರುತಿಸಿಕೊಂಡ ನಟಿ ಸೌಂದರ್ಯ (Sowdarya) ಯಾರಿಗೆ ಗೊತ್ತಿಲ್ಲ ಹೇಳಿ. ದೈಹಿಕವಾಗಿ ನಮ್ಮ ಜೊತೆಗೆ ಇಲ್ಲವಾದರೂ ಸಿನಿಮಾದ ಮೂಲಕ ಹತ್ತಿರವಾಗಿದ್ದಾರೆ. ಸ್ಯಾಂಡಲ್ ವುಡ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸೌಂದರ್ಯರವರು ಪರಭಾಷೆಯ ಸಿನಿಮಾಗಳಲ್ಲಿ ಮಿಂಚಿದರು.

ತೆಲುಗು (Telugu), ತಮಿಳು (Tamil) ಹಾಗೂ ಮಲಯಾಳಂ (Malayalam) ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಪ್ರೀತಿ ಸಂಪಾದಿಸಿಕೊಂಡಿದ್ದ ಸಣ್ಣ ವಯಸ್ಸಿನಲ್ಲಿ ವಿಮಾನ ಅಪಘಾತದಲ್ಲಿ ಬದುಕಿನ ಯಾತ್ರೆಗೆ ಪೂರ್ಣವಿರಾಮ ಹಾಡಿದ್ದರು. ಆದರೆ ನಟಿ ಸೌಂದರ್ಯರವರ ಸಾ-ವಿನ ನಂತರ ಪತಿ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗಳು ಸಹಜವಾಗಿ ಹುಟ್ಟಬಹುದು.

ಅಂದು 2004 ಏಪ್ರಿಲ್ 14 ರಂದು ದಿನವದು. ಆ ದಿನ ಆಂಧ್ರಪ್ರದೇಶ (Andrapradesh) ದಲ್ಲಿ ಎಲ್ಲೆಡೆ ಚುನಾವಣಾ ಪ್ರಚಾರವು ನಡೆಯುತ್ತಿತ್ತು. ಈ ವೇಳೆಯಲ್ಲಿ ಟಿಆರ್‌ಎಸ್ (TRS) ಮತ್ತು ಕಾಂಗ್ರೆಸ್ (Congress) ಮೈತ್ರಿ ಮಾಡಿಕೊಂಡು ಚುನಾವಣಾ ಕಣಕ್ಕೆ ಇಳಿದಿದ್ದವು. ಅಧಿಕಾರವನ್ನು ಗಿಟ್ಟಿಸಿಕೊಳ್ಳಬೇಕೆಂದು ಎಲ್ಲಾ ಪಕ್ಷಗಳು ಸಿನಿಮಾ ತಾರೆಯರ ಜೊತೆ ಪ್ರಚಾರದಲ್ಲಿ ತೊಡಗಿಕೊಂಡಿತ್ತು.

ಕರೀಂನಗರದ ಸಂಸದ ಅಭ್ಯರ್ಥಿಯಾಗಿ ಸಿ.ಎಚ್.ವಿದ್ಯಾಸಾಗರ್ ರಾವ್ (CH Vidhyasagar Rao) ಸ್ಪರ್ಧಗೆ ನಿಂತಿದ್ದ ಸಮಯದಲ್ಲಿ ನಟಿ ಸೌಂದರ್ಯರವರನ್ನು ತಮ್ಮ ಪ್ರಚಾರ ಮಾಡಲು ಆಹ್ವಾನಿಸಿದ್ದರು. ಹೀಗಾಗಿ ಸೌಂದರ್ಯ, ಅವರ ಅಣ್ಣ ಅಮರ್ ನಾಥ್ (Amar nath) ಹಾಗೂ ಅವರ ಸ್ನೇಹಿತ ರಮೇಶ್ (Ramesh) ಚುನಾವಣಾ ಪ್ರಚಾರಕ್ಕೆಂದು ವಿಮಾನದಲ್ಲಿ ತೆರಳುತ್ತಿರುವ ವೇಳೆಯಲ್ಲಿ ಬಾರಿ ದು-ರಂತವೊಂದು ಸಂಭವಿಸಿತ್ತು.

ಈ ವೇಳೆಯಲ್ಲಿ ಪೈಲಟ್ ಹೆಲಿಕಾಪ್ಟರ್‌ ನ ವೇಗವನ್ನು ಹೆಚ್ಚಿಸುವ ವೇಳೆಯಲ್ಲಿ ಅದು ನಿಯಂತ್ರಣ ತಪ್ಪಿ ದು-ರಂತವೊಂದು ನಡೆದೇ ಹೋಯಿತು. ಈ ಅ-ಪಘಾತದ ವೇಳೆಯಲ್ಲಿ ಸೌಂದರ್ಯರವರು ಇಹಲೋಕವನ್ನು ತ್ಯಜಿಸಿಬಿಟ್ಟರು. ಸೌಂದರ್ಯ ಸಾ-ವನ್ನಪ್ಪಿದಾಗ ರಘು ಅವರ ಜೊತೆ ಮದುವೆಯಾಗಿ ವರ್ಷವೂ ತುಂಬಿರಲಿಲ್ಲ.

ರಘು ಪತ್ನಿಯ ನೆನಪಿನಲ್ಲಿ ಬಹಳಷ್ಟು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಸೌಂದರ್ಯ ಹೆಸರಲ್ಲಿ ಶಾಲೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ರಘು ಅವರು ಗೋವಾ ಮೂಲದ ಡಾಕ್ಟರ್ ಅರ್ಪಿತಾ (Dr Arpitha) ಅವರನ್ನು ಎರಡನೇ ಮದುವೆ ಆಗಿದ್ದು, ವಿದೇಶದಲ್ಲಿ ಇದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *