ಹೆಂಡತಿ ಮಕ್ಕಳನ್ನು ಬಿಟ್ಟು ರೊಟ್ಟಿ ಮಾರುವ ಹೆಂಗಸಿನ ಹಿಂದೆ ಬಿದ್ದ ಅಂಕಲ್, ಕೊನೆಗೆ ರೊಟ್ಟಿ ಮಾರುವ ಆಂಟಿ ಮಾಡಿದ್ದೇನು ನೋಡಿ?.. ಪಾಪ ಅಂಕಲ್

ಪ್ರೀತಿ ಗೆ ಕಣ್ಣಿಲ್ಲ ಪ್ರೀತಿ ಕುರುಡು ಎನ್ನುವ ಮಾತಿದೆ. ಆ ಮಾತಿನಂತೆಪ್ರೀತಿಯೂ ಏನು ಬೇಕಾದರೂ ಮಾಡಿಸುತ್ತದೆ. ಹೀಗಾಗಿ ಇಲ್ಲೋರ್ವ ಅಂಕಲ್​ಗೆ ರೊಟ್ಟಿ ತರಲು ಹೋಗಿದ್ದಾಗ ರೊಟ್ಟಿ ಮಾರುತ್ತಿದ್ದ ಆಂಟಿ ಮೇಲೆಯೇ ಪ್ರೀತಿಯಾಗಿದೆ. ಕೊನೆಗೆ ಈ ಲವ್ ಸ್ಟೋರಿಯ ಅಂತ್ಯ ಎಲ್ಲಿದೆ ಬಂದು ತಲುಪಿದೆ ಎಂದು ಕೇಳಿದರೆ ನಿಜಕ್ಕೂ ಶಾ- ಕ್ ಆಗುವುದಂತೂ ಪಕ್ಕಾ.

ರೊಟ್ಟಿ ತರಲು ಹೋದ ಎರಡು ಮಕ್ಕಳ ಅಂಕಲ್‌ಗೆ ಈಗಾಗಲೇ ಒಂದು ಮಗುವಿನ ತಾಯಿಯಾಗಿರುವ ಆಂಟಿ ಮೇಲೆ ಪ್ರೀತಿ ಆಗಿದೆ. ಈಕೆಯ ಹೆಸರು ಸುಜಾತಾ. ಮಹಾರಾಷ್ಟ್ರದಲ್ಲಿ ರೊಟ್ಟಿ ಮಾರುತ್ತಿದ್ದಳು ಆದರೆ ಈ ವ್ಯಕ್ತಿಯೂ ಮಹಾರಾಷ್ಟ್ರದ ಸಾಂಗ್ಲಿ (Maharastra Sangli) ಯ ಜತ್ತ ತಾಲೂಕಿನ ಮುಚ್ಚಂಡಿ ಗ್ರಾಮದ ಸಿದ್ದಗೊಂಡ (Siddagowda) ಸೌದತ್ತಿ ಲಾರಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು.

ಇಬ್ಬರಿಗೂ ಕೂಡ ಈಗಾಗಲೇ ಮದುವೆಯಾಗಿದ್ದು ಮಕ್ಕಳಿದ್ದಾರೆ. ಆದರೆ ಮದುವೆಯಾಗಿದ್ದ ವ್ಯಕ್ತಿಗೆ ಪರಸ್ತ್ರೀ ಮೇಲೆ ಪ್ರೀತಿಯಾಗಿದೆ.ಈ ಸಿದ್ಧಗೊಂಡ ರೊಟ್ಟಿ ಮಾರುತ್ತಿದ್ದ ಈ ಮಹಿಳೆಯ ಜೊತೆಗೆ ಮಹಾರಾಷ್ಟ್ರದಿಂದ ಬಳ್ಳಾರಿ (Ballari) ಗೆ ಬಂದಿದ್ದಾನೆ. ಈ ಇಬ್ಬರೂ ಕೂಡ ಬಳ್ಳಾರಿಯಲ್ಲಿ ತಾವು ಗಂಡ-ಹೆಂಡತಿ ಎಂದು ಹೇಳಿಕೊಂಡು 6 ತಿಂಗಳ ಕಾಲ ಸಂಸಾರವನ್ನೂ ಮಾಡಿದ್ದಾರೆ.

ಹೀಗಿರುವಾಗ ಈ ಸುಜಾತಾ (Sujata) ಳ ಪತಿ ಮಹೇಶ್ (Mahesh) ಹೆಂಡತಿ ಕಾಣೆಯಾಗಿರುವ ಮಹಾರಾಷ್ಟ್ರ ಸಾಂಗ್ಲಿ ಪೊಲೀಸ್ ಠಾಣೆ (Sangli Police Station) ಯಲ್ಲಿ ಬಗ್ಗೆ ದೂರು ನೀಡಿದ್ದಾನೆ. ದೂರಿನ ಮುಖೇನ ಹುಡುಕಾಟ ನಡೆಸಿದ ಪೊಲೀಸರಿಗೆ ಸುಜಾತಾ ಬಳ್ಳಾರಿಯಲ್ಲಿ ಡ್ರೈವರ್‌ ಜೊತೆಗೆ ಇರುವುದನ್ನು ತಿಳಿದಿದೆ.

ಕೊನೆಗೆ ಈ ಇಬ್ಬರನ್ನು ಮಹಾರಾಷ್ಟ್ರದ ಪೊಲೀಸ್‌ ಠಾಣೆಗೆ ಕರೆದೊಯ್ದು ವಿಚಾರಣೆ ಮಾಡಿದ್ದು, ಸುಜಾತಾ ಅಂಟಿ ನನಗೆ ಗಂಡ-ಮಗು ಬೇಡ, ಡ್ರೈವರ್ ಸಿದ್ದಗೊಂಡನ ಜೊತೆಗೆ ಹೋಗುತ್ತೇನೆ ಎಂದು ಹೇಳಿದ್ದಾಳೆ. ಆಗ, ಸಾಂಗ್ಲಿ ಪೋಲಿಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದುಕೊಟ್ಟು ಸುಜಾತಾ-ಸಿದ್ದಗೊಂಡ ಇಬ್ಬರೂ ಬಳ್ಳಾರಿಗೆ ಬಂದಿದ್ದಾರೆ. ಬಳ್ಳಾರಿಗೆ ಬಂದ ಸುಜಾತಾ ತನ್ನ ಪ್ರಿಯಕರ ಸಿದ್ಧಗೊಂಡನ ಮುಂದೆ ತನ್ನ ಬೇಡಿಕೆಯನ್ನು ಮುಂದೆ ಇಟ್ಟಿದ್ದಾಳೆ.

ತನಗೆ ದೇಶ ಸುತ್ತಾಡಬೇಕು ಎನಿಸುತ್ತಿದೆ. ಕಾರು, ಸ್ಲೀಪರ್ ಬಸ್ಸು, ರೈಲು, ವಿಮಾನದಲ್ಲಿ ಪ್ರಯಾಣ ಮಾಡಬೇಕು ಎಂದಿದ್ದಾರೆ. ಪ್ರೇಯಸಿಯ ಆಸೆಯನ್ನು ಈಡೇರಿಸಲು ಮುಂದಾದ ಈ ಸಿದ್ಧಗೊಂಡ, ಆಕೆಯನ್ನು ವಿಮಾನ, ರೈಲಿನಲ್ಲಿ ವಿವಿಧ ಪ್ರವಾಸಿ ಮತ್ತು ಧಾರ್ಮಿಕ ಸ್ಥಳಿಗೆ ಕರೆದುಕೊಂಡು ಸುತ್ತಾಡಿಸಿದ್ದಾನೆ. ಆದರೆ ತನ್ನ ಪ್ರವಾಸ ಬೇಡಿಕೆಯನ್ನು ಮುಂದೆ ಇಟ್ಟಾಗ ತನ್ನ ಬಳಿ ಹಣವಿಲ್ಲ ಎಂದು ಜೋರಾಗಿಯೇ ಹೇಳಿದ್ದಾನೆ.

ಪ್ರಿಯಕರ ಮಾತಿನಿಂದ ತನ್ನ ನಿರ್ಧಾರವನ್ನು ಬದಲಾಯಿಸಿಕೊಂಡ ಸುಜಾತಾ, ತನ್ನ ಹಳೆಯ ಗಂಡನಿಗೆ ಕರೆ ಮಾಡಿ, ತನ್ನಿಂದ ತಪ್ಪಾಗಿದೆ ನಿನ್ನೊಂದಿಗೆ ಬಂದು ಜೀವನ ಮಾಡುತ್ತೇನೆ ಎಂದು ಹೇಳುತ್ತಿದ್ದಂತೆ, ಆಕೆಯ ಗಂಡ ಮಹೇಶ್ ಬರಲು ಹೇಳಿದ್ದಾನೆ. ಇತ್ತ ಪ್ರಿಯಕರ ಸಿದ್ದಗೊಂಡನನ್ನು ಬಳ್ಳಾರಿಯಲ್ಲಿಯೇ ಬಿಟ್ಟು ತನ್ನ ಪತಿಯಿರುವ ಮಹಾರಾಷ್ಟ್ರಕ್ಕೆ ತೆರಳಿದ್ದಾಳೆ.

ಪ್ರೇಯಸಿ ಕೈ ಕೊಟ್ಟ ಕಾರಣ ಡ್ರೈವರ್ ಸಿದ್ದಗೊಂಡ ಬಳ್ಳಾರಿ ಪೋಲಿಸ್ ಠಾಣೆ ಮೆಟ್ಟಿಲೇರಿದ್ದಾನೆ.ಪ್ರೇಯಸಿಗಾಗಿ ಇಷ್ಟೆಲ್ಲಾ ಕಳೆದುಕೊಂಡಿದ್ದರೂ ನನ್ನನ್ನು ಹೇಗೆ ಬಿಟ್ಟು ಹೋದಳು? ನನಗೆ ತನ್ನ ಪ್ರೇಯಸಿ ಬೇಕು ಎಂದಿದ್ದಾನೆ. ಇದೀಗ ಪೊಲೀಸರು ಕೂಡ ತನಿಖೆ ಕೈಗೊಂಡಿದ್ದಾರೆ. ಆದರೆ ಮುತ್ತಿನಂತಹ ಹೆಂಡತಿ ಮಕ್ಕಳನ್ನು ಬಿಟ್ಟು ಪರಸ್ತ್ರೀ ಹಿಂದೆ ಹೋದ ಈತನು ಬೀದಿ ಬಿ-ಕಾರಿಯಾಗಿರುವುದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *