ಮಕರ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ದರ್ಶನ ಮಡದಿ ವಿಜಯಲಕ್ಷ್ಮಿ ಧರಿಸಿದ ಚಿನ್ನದ ಸರದ ಬೆಲೆ ಎಷ್ಟು ಗ್ರಾಂ ಮತ್ತು ಅದರ ಬೆಲೆ ಎಷ್ಟು ಗೊತ್ತಾ? ತಿಳಿದರೆ ಯಪ್ಪಾ ಎನ್ನುತ್ತೀರಾ!

ಸೆಲೆಬ್ರಿಟಿಗಳು ಪ್ರತಿಯೊಂದು ಹಬ್ಬವನ್ನು ಸಡಗರ ಸಂಭ್ರಮದಿಂದಲೇ ಆಚರಿಸುತ್ತಾರೆ. ಅದಲ್ಲದೇ ಈ ಸಮಯದಲ್ಲಿ ತನ್ನ ಕುಟುಂಬ ಹಾಗೂ ಮಕ್ಕಳಿಗೆ ಟೈಮ್ ನೀಡಿ, ಅಭಿಮಾನಿಗಳಿಗೆ ಶುಭಾಶಯಗಳನ್ನು ಕೋರುವುದು ಇದೆ. ಈ ಬಾರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಅವರ ಮನೆಯಲ್ಲಿ ಸಂಕ್ರಾಂತಿ ಹಬ್ಬದ ಸೆಲೆಬ್ರೇಶನ್ ಭಾರಿ ಜೋರಾಗಿಯೇ ಇತ್ತು.

ಕಾಟೇರ (Katera) ಚಿತ್ರದ ಯಶಸ್ಸು ಕಂಡ ಖುಷಿಯಲ್ಲಿರುವ ನಟ ದರ್ಶನ್ ಅವರು ಈ ಬಾರಿ ಅದ್ದೂರಿಯಾಗಿ ಸಂಕ್ರಾಂತಿ ಹಬ್ಬ (Sankranti Festival) ವನ್ನು ಆಚರಿಸಿಕೊಂಡಿದ್ದಾರೆ. ತೋಟದ ಮನೆಯಲ್ಲಿ ಮಡದಿ ಹಾಗೂ ಮಕ್ಕಳ ಜೊತೆಗೆ ಮಕರ ಸಂಕ್ರಾಂತಿ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಇತ್ತ ಹಬ್ಬದ ಸೆಲೆಬ್ರೇಶನ್ ವೇಳೆ ನಟ ದರ್ಶನ್ ಅವರ ಮುದ್ದಿನ ಮಡದಿ ವಿಜಯಲಕ್ಷ್ಮಿ (Vijayalakshmi) ಟ್ರಡಿಷನಲ್ ಲುಕ್ ನಲ್ಲಿ ಗಮನ ಸೆಳೆದಿದ್ದಾರೆ.

ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾ ತಮ್ಮ ವೈಯುಕ್ತಿಕ ಬದುಕಿನ ಬಗ್ಗೆ ಅಪ್ಡೇಟ್ ನೀಡುತ್ತಿರುತ್ತಾರೆ. ಆದರೆ ಇದೀಗ ವಿಜಯ ಲಕ್ಷ್ಮಿ ಕೆಂಪು ಬಣ್ಣದ ಸೀರೆಗೆ ಚಿನ್ನದ ಹಾರ ಧರಿಸಿ ಮಿಂಚಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಈ ಫೋಟೋಗಳ ಜೊತೆಗೆ ಅಭಿಮಾನಿಗಳಿಗೆ ಶುಭಾಶಯಗಳನ್ನು ಕೋರಿದ್ದಾರೆ. ಫೋಟೋಗಳನ್ನು ಹಂಚಿಕೊಂಡಿರುವ ವಿಜಯಲಕ್ಷ್ಮಿ, ‘ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಈ ಸುದ್ದಿಯ ಹಬ್ಬ ಎಲ್ಲರ ಬಾಳಲ್ಲಿ ಸಂತಸ, ಸಾಮರಸ್ಯ, ಸಮೃದ್ಧಿ ಮತ್ತು ಆರೋಗ್ಯವನ್ನು ನೀಡಲಿ ಎಂದು ಬರೆದುಕೊಂಡಿದ್ದಾರೆ. ಇತ್ತ ಫೋಟೋ ನೋಡಿದ ನೆಟ್ಟಿಗರ ಕಣ್ಣು ವಿಜಯಲಕ್ಷ್ಮಿ ಹಾಕಿರುವ ಚಿನ್ನದ ಸರದ ಮೇಲೆ ಬಿದ್ದಿದೆ.

ಅಕ್ಕ ನೀವು ಧರಿಸಿರುವ ಹಾರದ ಬೆಲೆ ಎಷ್ಟು? ಚಿನ್ನದ ಹಾರ ಎಷ್ಟು ಗ್ರಾಂ ಇದೆ? ಅದು ನಿಜವಾದ ಚಿನ್ನನಾ? ಎಂದು ಪ್ರಶ್ನೆ ಕೇಳುತ್ತಿದ್ದಾರೆ. ಹೌದು, ನಟ ದರ್ಶನ್ ಮಡದಿ ವಿಜಯಲಕ್ಷ್ಮಿ ಧರಿಸಿರುವ ಚಿನ್ನದ ಸರದ ಬೆಲೆಯೂ ಐದು ಲಕ್ಷಕ್ಕೂ ಅಧಿಕ ಎನ್ನಲಾಗುತ್ತಿದ್ದು, ಸದ್ಯಕ್ಕಂತೂ ದರ್ಶನ್ ಮಡದಿಯ ಚಿನ್ನದ ಸರದ ಬೆಲೆಯ ಚರ್ಚೆಯೂ ಜೋರಾಗಿಯೇ ಇದೆ.

Leave a Reply

Your email address will not be published. Required fields are marked *