ಶ್ರೀರಾಮ ನ ಮೂರ್ತಿ ಕೆತ್ತನೆ ಮಾಡಿರುವ ಶಿಲ್ಪಿ ಅರುಣ್ ಯೋಗಿರಾಜ್ ಗೆ 7 ತಿಂಗಳಿಂದ ನೆಮ್ಮದಿ ನಿದ್ದೆ ಇಲ್ಲ ಅಂತೆ ಅವರು ಪಟ್ಟ ಕಷ್ಟ ಎಂತಹದ್ದು ಗೊತ್ತಾ? ಕೇಳಿದ್ರೆ ಶಾ ಕ್ ಆಗ್ತೀರಾ

ಕೋಟ್ಯಂತರ ಹಿಂದೂಗಳ ಕನಸು ಅಯೋಧ್ಯೆ (Ayodhye) ಯಲ್ಲಿ ರಾಮಮಂದಿರ (Ramamandira) ನಿರ್ಮಾಣವಾಗುವ ಮೂಲಕ ನನಸಾಗಿದೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿದ್ದು, ರಾಮಲಲ್ಲಾ ಪ್ರಾಣ ಪ್ರತಿಷ್ಟಾಪನೆ ಸಹ ಈಗಾಗಲೇ ಆಗಿದೆ. ಈ ಎಲ್ಲಾ ಕೆಲಸ ಕಾರ್ಯಗಳು ಸುಸೂತ್ರವಾಗಿದ್ದು, ಹಿಂದೂಗಳ ಮುಖದಲ್ಲಿ ಸಂತಸವು ಮನೆ ಮಾಡಿದೆ.

ಅದಲ್ಲದೇ ಇದೀಗ ಬಾಲ ರಾಮನ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರದ್ದೇ ಸುದ್ದಿ. ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ನಗುಮೊಗದ ಬಾಲ ರಾಮನ ಮೂರ್ತಿಯೂ ಎಲ್ಲರ ಗಮನ ಸೆಳೆದಿದೆ. ಎಲ್ಲರೂ ಕೂಡ ಅರುಣ್ ಯೋಗಿರಾಜ್ ಅವರಿಗೆ ಶಭಾಷ್ ಎನ್ನುತ್ತಿದ್ದಾರೆ.

ಆದರೆ ಇದೀಗ ಶಿಲ್ಪಿ ಅರುಣ್ ಯೋಗಿರಾಜ್ ಅವರು ಅಯೋಧ್ಯೆಯಿಂದ ಬೆಂಗಳೂರಿಗೆ (Banglore) ಆಗಮಿಸಿದ್ದು, ರಾಮಭಕ್ತರು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಸೇರಿ ಆರತಿ ಬೆಳಗಿ, ಹೂಗುಚ್ಛ ನೀಡಿ ಸ್ವಾಗತಿಸಿದ್ದಾರೆ. ಹೆಮ್ಮೆಯ ಪುತ್ರನನ್ನು ನೋಡಿದ ಅವರ ತಾಯಿ ಮತ್ತು ಪತ್ನಿ ಅಪ್ಪಿಕೊಂಡು ಸ್ವಾಗತಿಸಿದ್ದಾರೆ. ಇಬ್ಬರೂ ಮಕ್ಕಳನ್ನು ಎತ್ತಿ ಹಿಡಿದು ಅರುಣ್ ಯೋಗಿರಾಜ್ ಅವರು ಮುದ್ದಾಡಿದ್ದಾರೆ.

ಇದೇ ವೇಳೆಯಲ್ಲಿ ಅರುಣ್ ಯೋಗಿರಾಜ್ ಅವರು ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿ, ‘ಇಂತಹ ಭಾಗ್ಯ ಸಿಗುತ್ತೆ ಅಂತಾ ಕನಸಿನಲ್ಲಿಯೂ ಊಹಿಸಿರಲಿಲ್ಲ. ಬಹಳ ದಿನಗಳಿಂದ ನಾನು ಕೊಠಡಿಯಿಂದ ಈಚೆ ಬಂದಿರಲಿಲ್ಲ. ಹೊರಗಡೆ ಬಂದ ನಂತರ ಶಿಲ್ಪಿಗೆ ಇಂತಹ ಗೌರವ ಸಿಗುತ್ತೆ ಅನ್ಕೊಂಡಿರಲ್ಲಿಲ್ಲ. ನನ್ನ ಜೀವನದಲ್ಲಿ ಇಷ್ಟು ನಿರೀಕ್ಷೆ ಇಟ್ಟಿರಲಿಲ್ಲ. ನಮ್ಮ ದೇಶದ ಜನರಿಗೆ ರಾಮನ ಮೇಲೆ ಎಷ್ಟು ಪ್ರೀತಿ ಇದೆ ಅನ್ನೋದು ಗೊತ್ತಾಗ್ತಿದೆ’ ಎಂದಿದ್ದಾರೆ.

‘ಮೂವರು ಶಿಲ್ಪಿಗಳ ಪೈಕಿ ಒಬ್ಬರ ಮೂರ್ತಿ ಆಯ್ಕೆಯಾಗಬೇಕಿತ್ತು. ದೇವರ ದಯೆಯಿಂದ ಅಂತಹ ಭವ್ಯವಾದ ಮಂದಿರಕ್ಕೆ‌ ನನ್ನ ರಚನೆಯ ಮೂರ್ತಿ ಆಯ್ಕೆಯಾಗಿದೆ. ನಾನು 7 ತಿಂಗಳಿಂದ ಪ್ರಪಂಚಕ್ಕೆ ಕಾಣಿಸಿಕೊಂಡಿರಲಿಲ್ಲ. ಒಂದು ಸಣ್ಣ ಗೂಡಿನಲ್ಲಿದ್ದ. ಇಲ್ಲಿಗೆ ಬರಲು ತಡವಾಗಿದೆ. ನಿಮ್ಮ ಜೊತೆ ಸರಿಯಾಗಿ ಮಾತಾನಾಡಲು ಆಗಲಿಲ್ಲ, ಕ್ಷಮೆ ಇರಲಿ.

ರಾಮಮಂದಿರದ ನಿರ್ಮಾಣಕ್ಕೆ ಅನೇಕರ ಹೋರಾಟ ಇದೆ. ಅವರ ಕಷ್ಟದ ಮುಂದೆ ನಮ್ಮದೇನು ಕಷ್ಟವೇ ಅಲ್ಲ. ಅದರ ಮುಂದೆ ನಮ್ಮ ಕೆಲಸ ದೊಡ್ಡದಲ್ಲ. ನನ್ನ ಕೆಲಸವನ್ನ ಎಲ್ಲರೂ ಒಪ್ಪಿದ್ದಾರೆ. ಅದಕ್ಕಿಂತ ದೊಡ್ಡದು‌ ಬೇರೆಯೇನೂ ಇಲ್ಲ. ಜನರಿಗೆ ರಾಮನ ಮೇಲಿರುವ‌ ಪ್ರೀತಿ ದೊಡ್ಡದು’ ಎಂದು ಹೇಳಿದ್ದಾರೆ.

‘ನನ್ನ ಹೆಸರು ಫೈನಲ್ ಅದ್ಮೇಲೆ ವಿಗ್ರಹವನ್ನ ಗರ್ಭಗುಡಿ ಒಳಗೆ ತೆಗೆದುಕೊಂಡು‌ ಹೋಗುವುದು ದೊಡ್ಡ ಚಾಲೆಂಜ್ ಆಗಿತ್ತು. ಜನಕ್ಕೆ ಅದು‌ ಹೇಗೆ ಅನ್ನಿಸುತ್ತೆ ಅನ್ನೋ ಕುತೂಹಲ ‌ಇತ್ತು. ನಿನ್ನೆ ಜನರನ್ನ ನೋಡಿ‌ ಖುಷಿಯಾಯಿತು. ನಾನು‌ ನೆಮ್ಮದಿಯಾಗಿ ಮಲಗಿ‌ 7 ತಿಂಗಳಾಗಿತ್ತು. ಎಲ್ಲರ ಖುಷಿ ನೋಡಿ ನನಗೆ ನೆಮ್ಮದಿ ಆಯ್ತು.

ಶಿಲ್ಪಿಗೆ ಸಿಗಬೇಕಾದ ಗೌರವ ನೀಡಿದ್ದಾರೆ. ಭಗವಂತನ ಈ‌ ಕಾರ್ಯವನ್ನ ನಮ್ಮ‌ ರಾಜ್ಯದಿಂದ ಮಾಡಿಕೊಟ್ಟಿದ್ದು ಬಹಳ ಸಂತೋಷವಿದೆ. ನಾನು ಅಲ್ಲಿ ಬಂದಿದ್ದ ಜನರ ನಡುವೆ ಇದ್ದೆ. ಜನರ ಅಭಿಪ್ರಾಯಗಳು ಬಹಳ‌ ಸಂತೋಷ‌ ನೀಡಿದೆ’ ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *