ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ವಿನ್ನರ್ ಪ್ರತಾಪ್ ಆಗುತ್ತಾರೆ ಎಂದು ಚಾಲೆಂಜ್ ಮಾಡಿದ್ದ ಯುವಕ , ಯುವಕ ಸ್ಥಿತಿ ಏನಾಗಿದೆ ಗೊತ್ತಾ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 (Bigg Boss Sisan 10) ರ ಗ್ರ್ಯಾಂಡ್‌ ಫಿನಾಲೆ ಮುಗಿದಿದ್ದು, ಈ ಬಾರಿ 10 ರ ಸೀಸನ್ ನಲ್ಲಿ ಮೊದಲ ರನ್ ಅಪ್ ಆಗಿ ಡ್ರೋನ್ ಪ್ರತಾಪ್, 2 ರನ್ನರ್ ಅಪ್ ಸಂಗೀತಾ ಶೃಂಗೇರಿ ಹಾಗೂ 3 ರನ್ನರ್ ಅಪ್ ಆಗಿ ವಿನಯ್ ಗೌಡ ಹೊರಹೊಮ್ಮಿದ್ದಾರೆ. ಆದರೆ ಇಲ್ಲೊಬ್ಬನು ಪ್ರತಾಪ್ ಅವರ ಅಭಿಮಾನಿಯು ಪ್ರತಾಪ್ ಸೋತಿದ್ದಕ್ಕೆ ಮಾಡಿದ ಕೆಲಸ ಕೇಳಿದರೆ ಶಾಕ್ ಆಗುತ್ತದೆ.

ಈ ಹಿಂದೆ ಕಾಂ-ಟ್ರವರ್ಸಿ, ಟ್ರೋಲ್‌ಗೆ ಗುರಿಯಾಗಿದ್ದ ಪ್ರತಾಪ್ ಜನರಿಂದ ಸಕತ್ ಟೀಕೆಗೆ ಗುರಿಯಾಗಿದ್ದರು. ಆದರೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಬಳಿಕ ಅವರ ಅದೃಷ್ಟವೇ ಬದಲಾಗಿ ಹೋಗಿದೆ. ದೊಡ್ಮನೆಯಲ್ಲಿ ಉಳಿದ ಸ್ಪರ್ಧಿಗಳಿಗೆ ಪೈಪೋಟಿ ನೀಡಿದ ಡ್ರೋನ್ ಪ್ರತಾಪ್ ಅವರು ಫಿನಾಲೆಗೆ ಹೋಗಿದ್ದು ಬಿಗ್ ಬಾಸ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.

ಆದರೆ ಬಿಗ್ ಬಾಸ್ ಸೀಸನ್ 10 ರಲ್ಲಿ ಡ್ರೋನ್ ಪ್ರತಾಪ್ ಸೋತಿದ್ದಕ್ಕೆ ಅರ್ಧ ಗಡ್ಡ, ಮೀಸೆ ತೆಗೆದು ಕಡಬದ ಯುವಕನೋರ್ವ ವಿಡಿಯೋವೊಂದು ಸದ್ಯಕ್ಕೆ ವೈರಲ್ ಆಗುತ್ತಿವೆ. ಕಡಬ ತಾಲೂಕಿನ ಬಂಟ್ರ ಗ್ರಾಮದ ಪಾಲೆತ್ತಡ್ಕ (Palettadka of Bantra village of Kadaba taluk) ನಿವಾಸಿ ಝೈನುಲ್ ಆಬಿದ್ (Zainul Abid) ಎನ್ನುವ ಯುವಕನು ಈ ಸಲದ ಬಿಗ್ ಬಾಸ್ ಸೀಸನ್ ನಲ್ಲಿ ಡ್ರೋನ್ಪ್ರ ತಾಪ್ ವಿನ್ನರ್ ಆಗಲಿದ್ದಾರೆ.

ಪ್ರತಾಪ್ ಸೋತರೆ ಅರ್ಧ ಗಡ್ಡ, ಮೀಸೆ ತೆಗೆಯುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದನು. ಅದರೊಂದಿಗೆ ಹಸಿ ಮೆಣಸಿನಕಾಯಿ ತಿನ್ನುವುದಾಗಿ ಹೇಳಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದನು. ಈ ಬಾರಿಯ ವಿನ್ನರ್ ಆಗಿ ಕಾರ್ತಿಕ್ ಮಹೇಶ್ ಹೊರಹೊಮ್ಮಿದ್ದರೆ, ಪ್ರತಾಪ್ ರನ್ನರ್ ಅಪ್ ಗೆ ಆಗಿದ್ದಾರೆ.

ವಿನ್ನರ್ ಯಾರೆಂದು ಘೋಷಣೆಯಾಗುತ್ತಿದ್ದಂತೆ ಆಬಿದ್ ಅರ್ಧ ಗಡ್ಡ ಮೀಸೆ ಬೋಳಿಸಿಕೊಂಡು ಹಸಿ ಮೆಣಸಿನಕಾಯಿ ತಿಂದು ವಿಡಿಯೋ ಮಾಡಿದ್ದು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಬಿಗ್ ಬಾಸ್ ಮನೆಯಿಂದ ರನ್ನರ್ ಅಪ್ ಆಗಿ ಹೊರಹೊಮ್ಮಿದ ಡ್ರೋನ್ ಪ್ರತಾಪ್ ಅವರು ಫಸ್ಟ್ ರಿಯಾಕ್ಷನ್ ಕೊಟ್ಟಿದ್ದು, “ಎಲ್ಲರಿಗೂ ಒಳಿತಾಗಲಿ. ರನ್ನರ್ ಆಫ್ ಆಗಿರೋದು ಖುಷಿ ತಂದಿದೆ. ನನಗೆ ಎರಡೂವರೆ ಕೋಟಿಯಷ್ಟು ವೋಟ್ ಬಂದಿದೆ. ಗೆದ್ದಿದ್ದೇನೆ ಅನಿಸುತ್ತಿದೆ.

ನನಗೆ ವಿನ್ನರ್ ಆಗಬೇಕು ಎಂಬ ಆಸೆ ಇತ್ತು ಆದ್ರೂ ರನ್ನರ್ ಆಫ್ ಆಗಿರೋದು ಕೂಡ ಬಹಳ ಖುಷಿ ಕೊಟ್ಟಿದೆ.ಬಂದಿರೋ ಹಣವನ್ನು ಬಡವರಿಗೆ ಕೊಡ್ತಿನಿ. ಮಕ್ಕಳ ಆಪರೇಷನ್ ಗೆ ಕೊಡ್ತಿನಿ. ಫುಡ್ ಡೆಲಿವರಿ ಮಾಡೋರು ಯಾರು ಕಷ್ಟದಲ್ಲಿದ್ದಾರೆ ಅಂಥವರಿಗೆ ಬೈಕ್ ಕೊಡಿಸ್ತಿನಿ ಅಂತಾ ಹೇಳಿರುವ ಪ್ರತಾಪ್. ನಾನು ಬಿಗ್ ಬಾಸ್ ರನ್ನರ್ ಆಫ್ ಜೊತೆಗೆ ನಿಮ್ಮೆಲ್ಲರ ಮನಸನ್ನು ಗೆದ್ದಿದ್ದೇನೆ” ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *