ರಾಮಲಲ್ಲಾ ಮೂರ್ತಿ ಕೆತ್ತುವಾಗ ಕಣ್ಣನ್ನೇ ಕಳೆದು ಕೊಳ್ಳುವ ಸ್ಥಿತಿಗೆ ತಲುಪಿದ್ದರು ಕನ್ನಡಿಗ ಅರುಣ್ ಯೋಗಿರಾಜ್!!?ನಿಜಕ್ಕೂ ಏನು ಆಗಿತ್ತು ಗೊತ್ತಾ ?

ಇಡೀ ದೇಶವೇ ಈಗ ಕಾತುರದಿಂದ ಕಾಯುವ ಕ್ಷಣ ಈಗ ಮತ್ತಷ್ಟು ಸನಿಹವಾಗುತ್ತಿದೆ. ಹಲವು ವರ್ಷಗಳ ಸತತ ಪರಿಶ್ರಮದ ಫಲವಾಗಿ ಈಗ ಅಯೋಧ್ಯೆ (Ayodhye) ಯಲ್ಲಿ ಭವ್ಯ ರಾಮಮಂದಿರ (Rama Mandira) ನಿರ್ಮಾಣವಾಗಿದ್ದು ಲೋಕಾರ್ಪಣೆಗೂ ಸಜ್ಜಾಗಿದೆ. ಈ ನಡುವೆ ಅಯ್ಯೋಧ್ಯೆಯ ಮೂರ್ತಿ ಒಂದೊಂದಾಗೇ ಅನಾವರಣ ಆಗುತ್ತಿದೆ. ಅದರಲ್ಲಿ ಇಡೀ ದೇಶವೇ ಅತ್ಯಾಕರ್ಷಕ ಗೊಂಡಿದ್ದು ರಾಮಲಲ್ಲ ಬಾಲ ಮೂರ್ತಿ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ.

ಈ ಬಾಲ ಮೂರ್ತಿಯೂ ಇಂದು ಇಡೀ ದೇಶದ ಗಮನವನ್ನು ತನ್ನತ್ತ ಸೆಳೆಯುತ್ತಿದ್ದು ಈ ಪ್ರಖ್ಯಾತಿ ಕರ್ನಾಟಕದ ಮೈಸೂರಿನ ಭಾಗಕ್ಕೂ ಕೂಡ ಸಲ್ಲುತ್ತಿದೆ ಅದಕ್ಕೆ ಮುಖ್ಯ ಕಾರಣ ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ (Arun yogiraj) ಅವರು, ರಾಮಲಲ್ಲಾ ಮೂರ್ತಿ ಮುಖ ಅನಾವರಣ ಗೊಂಡಿದ್ದು ಅರುಣ್ ಅವರ ಪರಿಶ್ರಮಕ್ಕೆ ರಾಷ್ಟ್ರದ ಜನತೆ ತಲೆ ಭಾಗಿದ್ದಾರೆ. ಅರುಣ್ ಅವರ ಪತ್ನಿ ಹೇಳುವ ಪ್ರಕಾರ ರಾಮನ ಮೂರ್ತಿ ಕೆತ್ತುವಾಗ 15 ದಿನಗಳ ಕಾಲ ಒಂದೇ ಕಣ್ಣಲ್ಲಿ ಕೆತ್ತನೆ ಮಾಡುತ್ತಿದ್ದರು.. ಕೊನೆ ಸಮಯದಲ್ಲಿ ಕಣ್ಣಿಗೆ ತೊಂದರೆ ಆಗಿ ಕಣ್ಣನ್ನು ಕಳೆದು ಕೊಳ್ಳುವ ಸ್ಥಿತಿ ತಲುಪಿದರು.. ಕೊನೆಗೆ ವಿಶ್ರಾಂತಿ ಪಡೆದು ಸುಧಾರಿಸಿ ಕೊಂಡರು…

ಮೊದಲೇ ರಾಮನ ಮೂರ್ತಿಗೆ ಕೆಲ ನಿಯಮವನ್ನು ಟ್ರಸ್ಟ್ ಹಾಕಿದ್ದು ಈ ಮೂಲಕ 5ವರ್ಷದ ಮಗುವಿನಂತೆ ಬಿಲ್ಲು ಬಾಣ ಹಿಡಿದ ರೂಪರದಲ್ಲಿ ರಾಮ ಮೂರ್ತಿ ಕಂಗೊಳಿಸುತ್ತಿದೆ. ಇದನ್ನು ಶ್ರೀ ರಾಮ ಟ್ರಸ್ಟ್ ನ ಜೊತೆಗೆ ರಾಮ ಭಕ್ತರು ಮನಸಾರೆ ಕೊಂಡಾಡಿದ್ದಾರೆ. ಅರುಣ್ ಅವರು ಎಂಬಿಎ ಪದವಿಧರರಾಗಿದ್ದು ಖಾಸಗಿ ಕಂಪೆನಿಯಲ್ಲಿ ಕೆಲಸದಲ್ಲಿದ್ದರು.

ಹಾಗಿದ್ದರೂ ಕುಟುಂಬದತ್ತವಾದ ಈ ಶಿಲ್ಪಕಲೆ ಪರಂಪರೆಯನ್ನು ಬದಿಗೊತ್ತಲು ಮನಸ್ಸು ಬಾರದೇ ಉದ್ಯೋಗಸ್ಥರಾದರೂ ಈ ವೃತ್ತಿ ಕೂಡ ಬಿಡುವಿನ ಅವಧಿಯಲ್ಲಿ ಮಾಡುತ್ತಿದ್ದರು. 2008ರ ಬಳಿಕ ಉದ್ಯೋಗಕ್ಕೆ ವಿದಾಯವಿಟ್ಟು ಪೂರ್ಣ ಪ್ರಮಾಣದಲ್ಲಿ ಶಿಲ್ಪ ಕಾಯಕ ಮಾಡಿದ್ದು, ಈಗಲೂ ಇದೇ ಪರಂಪರೆ ಮುನ್ನಡೆಸಿದ್ದಾರೆ. ಈ ಶಿಲ್ಪದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮೈಸೂರಿನ ಶಿಲ್ಪಿಯ ಸಂದರ್ಶನದ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅರುಣ್ ಯೋಗಿರಾಜ್ ಅವರು ಈ ಬಗ್ಗೆ ಮಾತನಾಡಿದ್ದು, ‘ನಾನು ಶಿಲ್ಪಿಯಾದ ವಿಚಾರದಲ್ಲಿ ಕುಟುಂಬ ಪರಿಶ್ರಮ ನೆನೆಯುತ್ತೇನೆ.ನನ್ನ ಅಜ್ಜನವರು ನಾನು ಮಗುವಾಗಿದ್ದಾಗಲೇ ಭವಿಷ್ಯವಾಣಿ ನುಡಿದಿದ್ದರು. ನಾನು ಅಂಬೆಗಾಲಿಡುವಾಗಲೇ ಶಿಲ್ಪ ಕೆತ್ತನೆ ಉಪಕರಣ ಕೈಗೆತ್ತಿಕೊಂಡಾಗ ನಾನು ಪರಂಪರೆ ಮುಂದುವರಿಸುತ್ತೇನೆ ಮತ್ತು ಕೀರ್ತಿ ತರುತ್ತೇನೆ ಎಂದು ನಂಬಿದ್ದರು.

ಈಗ ಆ ವಿಚಾರ 37ವರ್ಷದ ಬಳಿಕ ಸತ್ಯವಾಗಿದೆ. ನನ್ನ ಅಜ್ಜನವರು ಗಾಯತ್ರಿ ದೇವಸ್ಥಾನ ,ಭುವನೇಶ್ವರಿ ದೇವಸ್ಥಾನ, ಮೈಸೂರು ಅರಮನೆಯಿಂದ ನಿಯೋಜನೆಯಾಗಲ್ಪಟ್ಟ ಅನೇಕ ಶಿಲ್ಪ ಕೆಲಸವನ್ನು ಮಾಡಿದ್ದು ಕೃಷ್ಣರಾಜ ಸಾಗರದ ಮೇಲಿರು ಕಾವೇರಿ ಶಿಲ್ಪ ಕೂಡ ಅವರ ರಚನೆಯೇ ಆಗಿದೆ ‘ ಎಂದಿದ್ದಾರೆ. ‘ಅವರೆ ನಮಗೆಲ್ಲ ಮಾರ್ಗದರ್ಶಕರಂತೆ ಇದೇ ಪ್ರೇರಣೆಯಿಂದ ಮೈಸೂರಿನಲ್ಲಿ ಅನೇಕ ಶಿಲ್ಪವನ್ನು ಅಮೃತ ಶಿಲೆಯಲ್ಲಿ ಮಾಡಿದ್ದೇನೆ.

ಇಂಡಿಯಾ ಗೇಟ್ ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅನ್ನು ನನಗೆ ರಚಿಸುವಂತೆ ಪ್ರೇರೆಪಿಸಿದೆ. 2021ರಲ್ಲಿ ಉತ್ತರ ಖಂಡದ ಶ್ರೀ ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆ ಸಹ ಕೆತ್ತಲಾಗಿದೆ ವಿಗ್ರಹವೂ ದೈವಿಕವಾಗಿದ್ದು ಮಗುವಿನಂತೆ ಇರಬೇಕು ಎಂದು ಶ್ರೀ ರಾಮ ಟ್ರಸ್ಟ್ ನಿಂದ ತಿಳಿಸಿದ್ದರು. ಅದೇ ರೀತಿ ಈ ಪ್ರತಿಮೆ ಮಾಡುವ ಸಲುವಾಗಿಯೇ ಸಾಕಷ್ಟು ಅಧ್ಯಯನ ಮಾಡಿದ್ದೇನೆ. ಈ ಕೆಲಸಕ್ಕೆ ನನ್ನ ಆಯ್ಕೆ ಮಾಡಿದ್ದಕ್ಕೆ ಪುಣ್ಯವಂತನೆಂಬ ಭಾವ ಸದಾ ಇರಲಿದೆ’ ಎಂದಿದ್ದಾರೆ.

Leave a Reply

Your email address will not be published. Required fields are marked *