ಅಯೋಧ್ಯೆಗೆ ಪ್ರಧಾನ ಅರ್ಚಕರಾಗಿ ಮೋಹಿತ್ ಪಾಂಡೆ ಅವರನ್ನು ಆಯ್ಕೆ ಮಾಡಿದ್ದು ಯಾಕೆ ಇದರ ಹಿಂದಿನ ಕಾರಣ ಏನು ಗೊತ್ತಾ?

ಅಯೋಧ್ಯೆ (Ayodhye) ಯಲ್ಲಿ ರಾಮ ಮಂದಿರ (Rama Mandir) ಉದ್ಘಾಟನೆಯ ದಿನದಲ್ಲಿ ನಾವೆಲ್ಲಾ ಇದ್ದೇವೆ. ಬಹಳ ವರ್ಷಗಳಿಂದ ಕಾಯುತ್ತಿದ್ದ ಹಿಂದೂಗಳ ಕನಸು ಕೊನೆಗೂ ಇಂದು ನನಸಾಗುತ್ತಿದೆ. ಇಂದು ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವು ನಡೆಯಲಿದ್ದು ಆ ಕ್ಷಣವನ್ನು ಕಣ್ತುಂಬಿಸಿಕೊಳ್ಳಲು ಇಡೀ ದೇಶದ ಜನರು ಕಾತುರರಾಗಿದ್ದಾರೆ.

ಗಾಜಿಯಾಬಾದ್ ವಿದ್ಯಾರ್ಥಿ ಮೋಹಿತ್ ಪಾಂಡೆ (Gajiyabad Student Mohit Pandey) ಅಯೋಧ್ಯೆ ರಾಮ ಮಂದಿರದ ಮುಖ್ಯ ಅರ್ಚಕರಾಗಿ ಆಯ್ಕೆ ಮಾಡಲಾಗಿದೆ. ಆದರೆ ಮೋಹಿತ್ ಪಾಂಡೆ ಯಾರು ಹಾಗೂ ಇವರ ಹಿನ್ನಲೆಯೇನು ಹೀಗೆ ನಾನಾ ರೀತಿಯ ಪ್ರಶ್ನೆಗಳು ಎಲ್ಲರ ಮನಸ್ಸಲ್ಲಿಯೂ ಹುಟ್ಟಿಕೊಳ್ಳಬಹುದು. ಮೋಹಿತ್‌ ಪಾಂಡೆ ಗಜಿಯಾಬಾದ್‌ ಮೂಲದ ವಿದ್ಯಾರ್ಥಿಯಾಗಿದ್ದಾರೆ.

ದೂಧೇಶ್ವರ ವೇದ ವಿದ್ಯಾಪೀಠದ ವಿದ್ಯಾರ್ಥಿಯಾಗಿರುವ ಮೋಹಿತ್‌ ಪಾಂಡೆ ರಾಮಮಂದಿರಕ್ಕೆ ಅರ್ಚಕರಾಗಿ ಆಯ್ಕೆಯಾಗಿದ್ದಾರೆ. ದೂಧೇಶ್ವರ ವೇದ ವಿದ್ಯಾಪೀಠದಲ್ಲಿ ಸರಿಸುಮಾರು 70 ವಿದ್ಯಾರ್ಥಿಗಳು ಅರ್ಚಕರು ಹಾಗೂ ಆಚಾರ್ಯರಾಗಿ ಸೇವೆ ಸಲ್ಲಿಸಲು ತರಬೇತಿ ಪಡೆಯುತ್ತಿದ್ದಾರೆ.

ಇನ್ನು, ನೇಮಕಾತಿಗೂ ಮೊದಲು ಅರ್ಚಕರಾಗಿರಾಗಿ ಸೇವೆ ಸಲ್ಲಿಸಲು ಆರು ತಿಂಗಳಗಳು ತರಬೇತಿ ನೀಡಲಾಗುತ್ತದೆ. ಅದಲ್ಲದೇ ಅಯೋಧ್ಯೆ ರಾಮಮಂದಿರ ಅರ್ಚಕ ಹುದ್ದೆಗೆ ಭಾರತದಾದ್ಯಂತ ಸುಮಾರು 3000 ಜನರನ್ನು ಸಂದರ್ಶನ ಮಾಡಲಾಗಿದೆ. ಆದರೆ ಇದರಲ್ಲಿ 50 ಜನರನ್ನು ಆಯ್ಕೆ ಮಾಡಲಾಗಿದೆ. ಈ ಐವತ್ತು ಜನರಲ್ಲಿ ಮೋಹಿತ್‌ ಪಾಂಡೆ ಕೂಡ ಸೇರಿದ್ದಾರೆ.

ಈ ಬಗ್ಗೆ ಪೀಠಾದೀಶ್ವರ ಶ್ರೀ ಮಹಾಂತ್‌ ನಾರಾಯಣ ಗಿರಿ ( Shree Mahanth Narayana Giri) ಮಾತನಾಡಿ, ‘ದೂಧೇಶ್ವರ ದೇವರ ಕೃಪೆಯಿಂದ ಶ್ರೀರಾಮನ ಸೇವೆಗೆ ಮೋಹಿತ್‌ ಆಯ್ಕೆಯಾಗಿದ್ದಾರೆ. ಇಲ್ಲಿಯವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಇಲ್ಲಿ ವೇದ, ಸಂಸ್ಕಾರ ಕಲಿಸಲಾಗಿದೆ. 23 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಇಲ್ಲಿ ತರಬೇತಿ ನೀಡುತ್ತಿದ್ದೇವೆ’ ಎಂದಿದ್ದಾರೆ.

ಸಂಸ್ಥೆಯಲ್ಲಿ ಆಚಾರ್ಯರಾಗಿ ಕಾರ್ಯನಿರ್ವಹಿಸುತ್ತಿರುವ ನಿತ್ಯಾನಂದ ಪ್ರತಿಕ್ರಿಯೆ ನೀಡಿದ್ದು, ‘ಮೋಹಿತ್‌ ಪಾಂಡೆ ಅವರು ದೂದೇಶ್ವರ ವೇದ ವಿದ್ಯಾಪೀಠದಲ್ಲಿ ಏಳು ವರ್ಷಗಳ ಕಾಲ ಅಧ್ಯಯನ ಮಾಡಿದ ನಂತರ ತಿರುಪತಿಯ ವೆಂಕಟೇಶ್ವರ ವೇದಿಕ್‌ ವಿಶ್ವವಿದ್ಯಾಲಯಕ್ಕೆ ತೆರಳಿದರು. ವಿದ್ಯಾರ್ಥಿಗಳಿಗೆ ಧರ್ಮ, ಸಂಸ್ಕಾರಗಳ ಬಗ್ಗೆ ತಿಳುವಳಿಕೆ ನೀಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದು ನಮ್ಮ ಉದ್ದೇಶವಾಗಿದೆ’ ಎಂದಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಮೋಹಿತ್ ಪಾಂಡೆಯವರ ಖಾಸಗಿ ವಿಡಿಯೋವನ್ನು ವೈರಲ್ ಮಾಡಿ ಅವರ ಘನತೆಗೆ ಕುತ್ತು ತರುವ ಕೆಲಸವನ್ನು ಮಾಡಲು ಮುಂದಾಗಿದ್ದರು. ಕೊನೆಗೆ ಆ ವಿಡಿಯೋ ಮೋಹಿತ್ ಪಾಂಡೆಯವರದ್ದು ಅಲ್ಲ, ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಎನ್ನುವ ಸತ್ಯಾಂಶವು ಹೊರಬಿದ್ದಿತ್ತು.

Leave a Reply

Your email address will not be published. Required fields are marked *