ಶ್ರೀರಾಮ ರಾತ್ರಿ ಅಯೋಧ್ಯೆಯಲ್ಲಿ ಇದ್ದರೆ ಬೆಳಿಗ್ಗೆ ಎಲ್ಲಿ ನೆಲೆಸುತ್ತಾನೆ ಗೊತ್ತಾ ?ಇಲ್ಲಿದೆ ನೋಡಿ..

ಬಹಳ ವರ್ಷಗಳ ಭಾರತೀಯರ ಕನಸು ಕೊನೆಗೂ ನನಸಾಗಿದೆ. ಇಂದು ದೇಶದೆಲ್ಲೆಡೆ ಸಂಭ್ರಮ ಜೋರಾಗಿದ್ದು ರಾಮನ ಅರಾಧನೆಯನ್ನು ಮನೆ ಮನಗಳಲ್ಲಿ ಬೆಳಗಿಸಿದ್ದಾರೆ. ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಹೊಸದಾಗಿ ನಿರ್ಮಾಣವಾಗಿರುವ ರಾಮ ಮಂದಿರ (Rama Mandira) ದ ರಾಮ ಲಲ್ಲಾ ಪ್ರಾಣ ಪ್ರತಿಷ್ಠೆ ಇಂದು ನೆರವೇರಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಸಂಭ್ರಮ ಕಳೆ ಕಟ್ಟಿದ್ದು ಶ್ರೀರಾಮನ ಭವ್ಯ ಮೆರವಣಿಗೆ ಎಲ್ಲೆಡೆ ನೆರವೇರಿದೆ.

ಪ್ರಧಾನಿ ನರೇಂದ್ರ ಮೋದಿ (Pradhani Narendra Modi) ಅವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ‌ ಶ್ರೀ ರಾಮ ಜನ್ಮಭೂಮಿಯಲ್ಲಿನ ರಾಮ ಲಲ್ಲಾ ವಿಗ್ರಹವನ್ನು ಅನಾವರಣ ಮಾಡಿ ರಾಮನ ಭಕ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಆದ್ರೆ ಶ್ರೀರಾಮ ಅಯೋಧ್ಯೆಯಲ್ಲಿ ನೆಲೆಸಿರುವಂತೆ ಮಧ್ಯಪ್ರದೇಶ (Madhya Pradesh) ದ ಓರ್ಚಾ (Orcha) ದಲ್ಲಿರುವ ರಾಮ ರಾಜ ಮಂದಿರ (Rama Raja Mandira) ಕ್ಕೂ ವಿಶೇಷ ನಂಟಿದೆ ಎನ್ನಲಾಗಿದೆ.

ರಾತ್ರಿ ಸಮಯದಲ್ಲಿ ರಾಮ ಅಯೋಧ್ಯೆಗೆ ಬಂದರೆ ಹಗಲಿನ ಸಂದರ್ಭದಲ್ಲಿ ಓರ್ಚಾ ದೇವಾಲಯದಲ್ಲಿ ನೆಲೆಯುರುತ್ತಾನೆ ಎಂಬ ನಂಬಿಕೆಯು ಇದೆ. ಅಯೋಧ್ಯೆಯಂತೆಯೇ ಮಧ್ಯಪ್ರದೇಶದ ಓರ್ಚಾದಲ್ಲಿರುವ ರಾಮ ರಾಜ ಮಂದಿರವೂ ಬಹಳ ವಿಶೇಷವಾಗಿದ್ದು ಇದರ ಹಿಂದೆ ಐತಿಹಾಸಿಕ ಘಟನೆ ಇದೆ. ಹೌದು ಇಂದಿಗೂ ಈ ದೇವಾಲಯದ ಸಂಜೆಯ ಆರತಿಯ ನಂತರ, ಒಂದು ಬೆಳಕು ಹೊರಹೊಮ್ಮಿ ಭಕ್ತಾಧಿಗಳಿಗೆ ಕಾಣ ಸಿಗುತ್ತದೆ ಎನ್ನಲಾಗಿದೆ.

ಇದು ಭಗವಾನ್ ಶ್ರೀ ರಾಮನ ರೂಪದಲ್ಲಿ ಮತ್ತೆ ಅಯೋಧ್ಯೆಗೆ ಹೋಗುತ್ತದೆ ಎನ್ನುವ ಪ್ರತೀತಿ ಯು ಇದೆ‌‌.ಪ್ರತಿದಿನ ಭಗವಾನ್ ರಾಮನಿಗೆ ಇಲ್ಲಿ ಪೂಜೆ ಪುನಸ್ಕಾರ ಮಾಡಲಾಗುತ್ತದೆ.ಅದೇ ರೀತಿ ರಾಮನೊಂದಿಗೆ, ಪತ್ನಿ ಸೀತೆ, ಲಕ್ಷ್ಮಣ,‌ ಸುಗ್ರೀವನನ್ನು ಕೂಡ ಇಲ್ಲಿ ಪೂಜಿಸಲಾಗುತ್ತದೆ. ಇದರ ಐತಿಹ್ಯವೇನು ಎಂದು ನೋಡುವು ದಾದ್ರೆ ಓರ್ಚಾದ ಬುಂದೇಲಾ ರಾಜ ಕೃಷ್ಣನ ರಾಣಿ ಕುನ್ವಾರಿ, ರಾಮನ ಭಕ್ತರಾಗಿದ್ದರು.

ಒಂದೊಮ್ಮೆ ರಾಜನು ರಾಣಿಯನ್ನು ವೃಂದಾವನಕ್ಕೆ ತೆರಳಲು ಹೇಳಿದಾಗ ರಾಣಿ ಅಯೋಧ್ಯೆಗೆ ಹೋಗುವ ಆಸೆ ಯನ್ನು ನೆರವೇರಿಸಬೇಕು ಎಂದಳಂತೆ. ಆ ಸಂದರ್ಭದಲ್ಲಿ ರಾಜನು ನೀನು ರಾಮನನ್ನು ತುಂಬಾ ನಂಬುವುದಾದರೆ ಅಯೋಧ್ಯೆಯಿಂದ ಓರ್ಚಾಕ್ಕೆ ತಂದು ಕೂರಿಸು ಎಂದು ಹೇಳುತ್ತಾನೆ. ಆಗ ರಾಣಿ ಅಯೋಧ್ಯೆಗೆ ಹೋಗಿ ತಪಸ್ಸು ಮಾಡಿ ರಾಮನನ್ನು ಒಲಿಸಿಕೊಳ್ಳುತ್ತಾಳೆ ಎನ್ನುವ ನಂಬಿಕೆ ಇದೆ. ಹಾಗಾಗಿ ಈ ದೇವಾಲಯವು ಅಯೋಧ್ಯೆಯಷ್ಟೆ ಹೆಸರುವಾಸಿಯಾಗಿದೆ.

Leave a Reply

Your email address will not be published. Required fields are marked *