ಬಿಗ್ ಬಾಸ್ ಸೀಸನ್ 10 ರ ರನ್ನರ್ ಅಪ್ ಡ್ರೋನ್ ಪ್ರತಾಪ್ ಅವರಿಗೆ ಬಹುಮಾನವಾಗಿ ಸಿಕ್ಕ ಹಣವೆಷ್ಟು ಗೊತ್ತಾ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 (Bigg Boss Sisan 10) ರ ಗ್ರ್ಯಾಂಡ್‌ ಫಿನಾಲೆ ಮುಗಿದಿದ್ದು ಬಿಗ್ ಬಾಸ್ ಮನೆಯ ವಿನ್ನರ್, ರನ್ನರ್ ಆಪ್ ಆಗಿ ಯಾರು ಹೊರಹೊಮ್ಮಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಬಿಗ್ ಬಾಸ್ ಮನೆಯಲ್ಲಿ ಸಂಗೀತಾ (Sangeetha), ಕಾರ್ತಿಕ್ (Karthik) , ವರ್ತೂರು ಸಂತೋಷ್ (Varthur Santhosh), ತುಕಾಲಿ ಸಂತೋಷ್ (Tukali Santhosh) , ವಿನಯ್ (Vinay) ಹಾಗೂ ಪ್ರತಾಪ್ (Prathap) ಫಿನಾಲೆವರೆಗೆ ಬಂದಿದ್ದರು.

ಆದರೆ ಬಿಗ್ ಬಾಸ್ ವಿನ್ನರ್ ಆಗಿ ಕಾರ್ತಿಕ್ ಮಹೇಶ್ (Karthik Mahesh) ಹೊರಹೊಮ್ಮಿದ್ದಾರೆ. ಆದರೆ ಮೊದಲ ರನ್ ಅಪ್ ಆಗಿ ಡ್ರೋನ್ ಪ್ರತಾಪ್, 2 ರನ್ನರ್ ಅಪ್ ಸಂಗೀತಾ ಶೃಂಗೇರಿ ಹಾಗೂ 3 ರನ್ನರ್ ಅಪ್ ಆಗಿ ವಿನಯ್ ಗೌಡ ಹೊರಹೊಮ್ಮಿದ್ದಾರೆ. ಬಿಗ್ ಬಾಸ್ ಮನೆಗೆ ಬರುವಾಗಲೇ ಸಾಕಷ್ಟು ಆರೋಪಗಳನ್ನು ಹೊತ್ತು ಬಿಗ್ ಬಾಸ್ ಮನೆಗೆ ಬಂದವರು. ಆದರೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಬಳಿಕ ಡ್ರೋನ್ ಪ್ರತಾಪ್ ಅವರ ಬಗ್ಗೆ ಜನರಿಗಿದ್ದ ಅಭಿಪ್ರಾಯವೇ ಬದಲಾಗಿ ಹೋಯಿತು.

ಹೌದು, ಹೊರ ಜಗತ್ತಿನಲ್ಲಿ ಕಾಂಟ್ರವರ್ಸಿ, ಟ್ರೋಲ್‌ಗೆ ಗುರಿಯಾಗಿದ್ದ ಪ್ರತಾಪ್ ಜನರಿಂದ ಸಕತ್ ಟೀಕೆಗೆ ಗುರಿಯಾಗಿದ್ದ ಪ್ರತಾಪ್ ದೊಡ್ಡ ಮಟ್ಟದಲ್ಲಿ ಜನರ ಪ್ರೀತಿಯನ್ನು ಸಂಪಾದಿಸಿದ್ದಾರೆ. ದೊಡ್ಮನೆಯಲ್ಲಿ ಉಳಿದ ಸ್ಪರ್ಧಿಗಳಿಗೆ ಪೈಪೋಟಿ ನೀಡಿದ ಡ್ರೋನ್ ಪ್ರತಾಪ್ ಅವರು ಫಿನಾಲೆಗೆ ಹೋಗುವ ಮೂಲಕ ಶಾಕ್ ನೀಡಿದ್ದರು. ಆದರೆ ಇದೀಗ ಬಿಗ್ ಬಾಸ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.

ಡ್ರೋನ್ ಪ್ರತಾಪ್ ಅವರಿಗೆ ಫಸ್ಟ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಕ್ಕೆ ದೊಡ್ಡ ಮೊತ್ತದ ಬಹುಮಾನವು ಸಿಕ್ಕಿದೆ. ಡ್ರೋನ್‌ ಪ್ರತಾಪ್‌ ಅವರು ರನ್ನರ್ ಅಪ್ ಆಗಿದ್ದು, ಅವರಿಗೆ ಹತ್ತು ಲಕ್ಷ ರೂಪಾಯಿಗಳ ಬಹುಮಾನ ಸಿಕ್ಕಿದೆ. ಒಂದು ವಾರಕ್ಕೆ 2 ಲಕ್ಷ ಸಂಭಾವನೆಯಾಗಿ ಪಡೆದಿದ್ದು, ಸುಮಾರು 50 ಲಕ್ಷ ರೂಪಾಯಿ ಸಂಭಾವನೆಯಾಗಿ ಪಡೆದಿದ್ದಾರೆ. ರನ್ನರ್ ಅಪ್ ಆಗಿ ಹೊರ ಬಂದಿದ್ದಕ್ಕೆ ಎಲೆಕ್ಟ್ರಿಕ್ ಬೌನ್ಸ್ ಸ್ಕೂಟರ್ ಅನ್ನು ಬಹುಮಾನವಾಗಿ ಪಡೆದುಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಿಂದ ರನ್ನರ್ ಅಪ್ ಆಗಿ ಹೊರಹೊಮ್ಮಿದ ಡ್ರೋನ್ ಪ್ರತಾಪ್ ಅವರು ಫಸ್ಟ್ ರಿಯಾಕ್ಷನ್ ಕೊಟ್ಟಿದ್ದು, “ಎಲ್ಲರಿಗೂ ಒಳಿತಾಗಲಿ. ರನ್ನರ್ ಆಫ್ ಆಗಿರೋದು ಖುಷಿ ತಂದಿದೆ. ನನಗೆ ಎರಡೂವರೆ ಕೋಟಿಯಷ್ಟು ವೋಟ್ ಬಂದಿದೆ. ಗೆದ್ದಿದ್ದೇನೆ ಅನಿಸುತ್ತಿದೆ. ನನಗೆ ವಿನ್ನರ್ ಆಗಬೇಕು ಎಂಬ ಆಸೆ ಇತ್ತು ಆದ್ರೂ ರನ್ನರ್ ಆಫ್ ಆಗಿರೋದು ಕೂಡ ಬಹಳ ಖುಷಿ ಕೊಟ್ಟಿದೆ.

ಬಂದಿರೋ ಹಣವನ್ನು ಬಡವರಿಗೆ ಕೊಡ್ತಿನಿ. ಮಕ್ಕಳ ಆಪರೇಷನ್ ಗೆ ಕೊಡ್ತಿನಿ. ಫುಡ್ ಡೆಲಿವರಿ ಮಾಡೋರು ಯಾರು ಕಷ್ಟದಲ್ಲಿದ್ದಾರೆ ಅಂಥವರಿಗೆ ಬೈಕ್ ಕೊಡಿಸ್ತಿನಿ ಅಂತಾ ಹೇಳಿರುವ ಪ್ರತಾಪ್. ನಾನು ಬಿಗ್ ಬಾಸ್ ರನ್ನರ್ ಆಫ್ ಜೊತೆಗೆ ನಿಮ್ಮೆಲ್ಲರ ಮನಸನ್ನು ಗೆದ್ದಿದ್ದೇನೆ” ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *