Ashwini Puneeth ಪುನೀತ್ ಪತ್ನಿ ಅಶ್ವಿನಿ ಅವರು SSLC ಪರೀಕ್ಷೆಯಲ್ಲಿ ಪಡೆದ ಮಾರ್ಕ್ಸ್ ಎಷ್ಟು ಗೊತ್ತಾ? ಅಬ್ಬಬ್ಬಾ ಇದು ನಿಜವಾಗ್ಲೂ ಗ್ರೇಟ್ ಕಣ್ರೀ ನೋಡಿ!!

ಚಂದನವನದ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ನೆನಪಿಸಿಕೊಳ್ಳದವರು ಇಲ್ಲ. ಎಲ್ಲರ ನೆನಪಿನಲ್ಲಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಏನು ಹೇಳಿದರೂ ಕಡಿಮೆಯೇ ಎಂದೇನಿಸುತ್ತದೆ. (Ashwini Puneeth) ಅಭಿಮಾನಿಗಳು ಅಪ್ಪುವನ್ನು ದೇವರಸ್ಥಾನದಲ್ಲಿಟ್ಟು ಪೂಜಿಸುತ್ತಿದ್ದಾರೆ. ಅಪ್ಪು ಇಲ್ಲದೇನೆ ಒಂದು ವರ್ಷವಾಗಿದೆ. ಅಪ್ಪುವಿನ ಎಲ್ಲಾ ಕನಸನ್ನ ಅಶ್ವಿನಿಯವರು ಈಡೇರಿಸುತ್ತಿದ್ದಾರೆ.

ಇನ್ನು ಅಪ್ಪುವನ್ನು ಮದುವೆಯಾಗುವ ಮೊದಲು ಅಶ್ವಿನಿಯವರು ವಾಸ ಮಾಡುತ್ತಿದ್ದದ್ದು ಬೆಂಗಳೂರಿನಲ್ಲಿ. ಅಂದಹಾಗೆ, ಮೂಲತಃ ಇವರ ಕುಟುಂಬದವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾಗದ ಮನೆಯ ಗ್ರಾಮದವರು. ಅಶ್ವಿನಿ ಅವರ ತಂದೆ ಹೆಸರು ರೇವನಾಥ್ ರವರು ಬೆಂಗಳೂರಿನ ಮಹಾನಗರಪಾಲಿಕೆಯಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಯಾಗಿ ಕೆಲಸ ಮಾಡುತ್ತಿದ್ದರು Ashwini Puneeth.

ಇನ್ನು ಅಶ್ವಿನಿ ಅವರ ತಾಯಿ ಬೆಂಗಳೂರಿನ ವಿಜಯ ಕಾಲೇಜಿನ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದರು. ಅಶ್ವಿನಿಯವರು ಓದಿದ್ದು ಪದವಿ, ಕಸ್ಟಂಮ್ ಡಿಸೈನರ್. ಆದರೆ ಅಪ್ಪುವನ್ನು ಮದುವೆಯಾದ ಬಳಿಕ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡವರು. ಇನ್ನು ಅಶ್ವಿನಿಯವರು ತನ್ನ ಹತ್ತನೇ ತರಗತಿಯಲ್ಲಿ ಪರೀಕ್ಷೆಯಲ್ಲಿ ಪಡೆದ ಅಂಕವೊಂದು ಗಮನ ಸೆಳೆಯುತ್ತಿದೆ.

ಹೌದು ಅಶ್ವಿನಿಯವರು ಹತ್ತನೇ ತರಗತಿಯಲ್ಲಿ ಶೇಕಡಾ 83 ರಷ್ಟು ಅಂಕ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಅಪ್ಪು ಹಾಗೂ ಅಶ್ವಿನಿಯವರದ್ದು ಲವ್ ಮ್ಯಾರೇಜ್. ಪುನೀತ್​ ರಾಜ್​ಕುಮಾರ್​ ಅವರು 1999 ಡಿಸೆಂಬರ್​ ಒಂದರಂದು ಮದುವೆ ಆದರು. ಚಿಕ್ಕಮಗಳೂರಿನ ಅಶ್ವಿನಿ ರೇವಂತ್​ ಅವರನ್ನು ವರಿಸಿದರು. ಗೆಳೆಯರ ಮೂಲಕ ಒಬ್ಬರಿಗೊಬ್ಬರು ಪರಿಚಯವಾಗಿದ್ದರು. ನಂತರ ಗೆಳೆತನ ಪ್ರೀತಿಗೆ ತಿರುಗಿತ್ತು.

Ashwini Puneeth

ಇಬ್ಬರೂ ಹಿರಿಯರ ಸಮ್ಮುಖದಲ್ಲಿ ಮದುವೆ ಆದರು. ಈ ದಂಪತಿಗೆ ಧೃತಿ ಹಾಗೂ ವಂದಿತಾ ಮಕ್ಕಳಿದ್ದಾರೆ ಪುನೀತ್​ ಪಕ್ಕಾ ಫ್ಯಾಮಿಲಿ ಮ್ಯಾನ್​, ಹೀಗಾಗಿ ಸಿನಿಮಾ ಕೆಲಸಗಳ ಮಧ್ಯೆಯೂ ಕುಟುಂಬಕ್ಕೆ ಸಮಯ ನೀಡುತ್ತಿದ್ದರು. ಆದರೆ ಅಶ್ವಿನಿ ಪತಿಯ ಪ್ರತಿಯೊಂದು ಕೆಲಸಕ್ಕೂ ಸಾಥ್ ನೀಡುತ್ತಿದ್ದರು. ಪ್ರತಿ ವರ್ಷ ಅಶ್ವಿನಿ ಅವರನ್ನು ಹಾಗೂ ಮಕ್ಕಳನ್ನು ವಿದೇಶ ಪ್ರವಾಸಗಳಿಗೆ ಕರೆದುಕೊಂಡು ಹೋಗುತ್ತಿದ್ದ ಪುನೀತ್ ಅವರು ಅಲ್ಲಿಯೇ ಮದುವೆಯ ದಿನ ಆಚರಿಸಿಕೊಳ್ಳುತ್ತಿದ್ದರು.

ಇನ್ನು ಕೆಲವು ಸಲ ಪ್ರವಾಸ ಕೈಗೊಂಡಿಲ್ಲವೆಂದರೆ ಮನೆಯಲ್ಲಿಯೇ ಸರಳವಾಗಿ ಕೇಕ್ ಕಟ್ ಮಾಡುವ ಮೂಲಕ ಆಚರಿಸಿಕೊಳ್ಳುತ್ತಿದ್ದರು. ದೊಡ್ಮನೆ ಕುಟುಂಬದ ಸೊಸೆಯಾಗಿ ಹಾಗೂ ಅಪ್ಪು ಮಡದಿಯಾಗಿ ಅಶ್ವಿನಿಯವರ ನಡೆ ನುಡಿ ಉತ್ತಮವಾಗಿತ್ತು. ಇದಲ್ಲೆವನ್ನೂ ನೋಡುವಾಗ ಅಪ್ಪು ತಮ್ಮ ಬಾಳ ಸಂಗಾತಿಯ ವಿಚಾರದಲ್ಲೂ ತುಂಬಾನೇ ಪರ್ಫೆಕ್ಟ್ ಆಗಿದ್ದರು. Ashwini Puneeth ಆದರೆ ಇದೀಗ ಅಪ್ಪುವಿನ ಎಲ್ಲಾ ಜವಾಬ್ದಾರಿಗಳನ್ನು ತನ್ನ ಹೆಗಲ ಮೇಲೆ ಹೊತ್ತು ಕೊಟ್ಟು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.

ಹೀಗಾಗಿ ಅಪ್ಪುವಿನ ಕನಸಿನ ಪ್ರಾಜೆಕ್ಟ್ ಗಂಧದ ಗುಡಿಯನ್ನು ತೆರೆಗೆ ತರುವಲ್ಲಿ ಯಶಸ್ವಿಯಾಗಿದ್ದರು. ಬಹು ನಿರೀಕ್ಷಿತ ಗಂಧದ ಗುಡಿ ಸಿನಿಮಾ ಅಕ್ಟೋಬರ್ 28 ರಂದು ತೆರೆಕಂಡಿತ್ತು. ಕ್ವಿನ್ಸ್ ರೋಡ್‌ನಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ತಂಡ ಕೇಕ್ ಕಟ್ ಮಾಡಿದ್ದು, ನಿರ್ದೇಶಕ ಸಂತೋಷ್ ಆನಂದ್‌ರಾಮ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಪುತ್ರ ಯುವರಾಜ್‌ಕುಮಾರ್ ಗಂಧದ ಗುಡಿ ಸಕ್ಸಸ್ ಸೆಲೆಬ್ರೇಷನ್‌ ನಲ್ಲಿ ಭಾಗಿಯಾಗಿದ್ದರು. ಹೀಗೆ ತನ್ನ ಪತಿಯ ಕನಸನ್ನು ಈಡೇರಿಸುವಲ್ಲಿಯೇ ಅದರಲ್ಲಿ ಖುಷಿ ಕಾಣುತ್ತಿದ್ದಾರೆ. ಇನ್ನೊಂದೆಡೆ ದೊಡ್ಮನೆ ಕುಟುಂಬದ ಕಿರಿಯ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಎಲ್ಲರಿಗೂ ಮಾದರಿಯಾಗಿದ್ದಾರೆ.

Leave a Reply

Your email address will not be published. Required fields are marked *