ಹೌದು, ಪಿತೃಪಕ್ಷ ಎನ್ನುವುದು ಅನಾದಿಕಾಲದಿಂದಲೂ ನಾವು ಆಚರಿಸಿಕೊಂಡು ಬಂದಿರುವಂತಹ ಒಂದು ಮಾಸ. ಈ ಮಾಸದಲ್ಲಿ ನಾವು ನಮ್ಮ ಹಿರಿಯರಿಗೆ ಅಂದರೆ ನಮ್ಮ ಪಿತೃಗಳಿಗೆ ಗೌರವವನ್ನು ಸಲ್ಲಿಸುವ ಒಂದು ಮಾಸವಾಗಿದೆ. ಈ ಮಾಸದಲ್ಲಿ ನಾವು ಕೆಲವೊಂದು ಕೆಲಸಗಳನ್ನು ಮಾಡಿದರೆ ನಮಗೆ ಮಿತ್ರಗಳ ಆಶೀರ್ವಾದ ದೊರೆಯುತ್ತದೆ. ಹಾಗಾದರೆ ಆ ಕೆಲಸವೇನು ಎಂಬುದನ್ನ ಪೂರ್ತಿ ಮಾಹಿತಿಯನ್ನು ಕೊಡ್ತೀವಿ. ಈ ಲೇಖನವನ್ನು ಪೂರ್ತಿಯಾಗಿ ಓದಿ.
ನಮ್ಮ ಹಿಂದೂ ಸಂಪ್ರದಾಯದಲ್ಲಿ ದೀಪಕ್ಕೆ ಬಹಳ ಪ್ರಾಮುಖ್ಯತೆಯನ್ನ ಕೊಡ್ತೀವಿ. ದೀಪ ಎಂದರೆ ಜ್ಯೋತಿ ಜೀವನದ ಬೆಳಕು ಅಂತ ಭಾವಿಸುತ್ತೇವೆ. ಪೂಜೆ ಪುನಸ್ಕಾರಗಳಲ್ಲಿ ಅಥವಾ ಪ್ರತಿಯೊಂದು ಕೆಲಸವನ್ನು ನಾವು ಮಾಡುವ ಮೊದಲು ದೀಪವನ್ನು ಬೆಳಕುವುದರ ಮೂಲಕ ಪ್ರಾರಂಭಿಸುತ್ತೇವೆ. ದೀಪವನ್ನು ಬೆಳಗುವುದು ನಮ್ಮ ಹಿಂದೂ ಧರ್ಮದ ಒಂದು ಸಂಪ್ರದಾಯ ಇದರಿಂದ ನಮಗೆ ಒಳ್ಳೆಯದಾಗುತ್ತದೆ ಎನ್ನುವ ಭಾವನೆಯಿಂದ ನಾವು ದೀಪವನ್ನು ಬೆಳಗುತ್ತೇವೆ.

ದೇವರ ಮುಂದೆ ಅಷ್ಟೇ ಅಲ್ಲದೆ ಹಿರಿಯರ ಫೋಟೋಗಳ ಮುಂದೆಯೂ ಕೂಡ ನಾವು ದೀಪವನ್ನು ಹಚ್ಚುತ್ತೇವೆ. ನಮಗೆ ಹಿರಿಯರ ಆಶೀರ್ವಾದ ಸದಾ ಇರಬೇಕು ನಮ್ಮ ಮೇಲೆ ಎಂದರೆ ನಾವು ಹಿರಿಯರ ಫೋಟೋವನ್ನು ಇಡುವಾಗ ಸರಿಯಾದ ದಿಕ್ಕಿನಲ್ಲಿ ಇಡಬೇಕು. ನಮಗೆ ಹಿರಿಯರ ಆಶೀರ್ವಾದವನ್ನು ಪಡೆಯುವುದಕ್ಕಾಗಿ ನಮ್ಮ ಪೂರ್ವಜರನ್ನ ನೆನೆಸಿಕೊಳ್ಳುವುದಕ್ಕಾಗಿ ವರ್ಷದಲ್ಲಿ ಒಂದು 16 ದಿನಗಳ ಕಾಲ ಒಂದು ಸಮಯವನ್ನು ನಾವು ಪಾಲಿಸುತ್ತೇವೆ. ಈ ಸಮಯದಲ್ಲಿ ನಾವು ಕೆಲವೊಂದು ನಿಯಮವನ್ನ ಪಾಲಿಸಿದರೆ ಪಿತೃಗಳ ಆಶೀರ್ವಾದ ನಮಗೆ ದೊರೆಯುತ್ತದೆ.
ಅದೇನೆಂದರೆ, ಈ ಪಿತೃಪಕ್ಷದಲ್ಲಿ ದೀಪವನ್ನು ನಾವು ದಕ್ಷಿಣ ದಿಕ್ಕಿಗೆ ಹಚ್ಚಬೇಕು. ಎಲ್ಲ ಕಾಲದಲ್ಲಿಯೂ ದಕ್ಷಿಣದ ದಿಕ್ಕಿಗೆ ದೀಪವನ್ನು ಹಚ್ಚುವುದಿಲ್ಲ. ಆದರೆ ಪಿತೃಪಕ್ಷದಲ್ಲಿ ಮಾತ್ರ ನಾವು ದೀಪವನ್ನು ದಕ್ಷಿಣದ ದಿಕ್ಕಿಗೆ ಹಚ್ಚುತ್ತೇವೆ. ಯಾಕೆಂದರೆ ನಮ್ಮ ಪಿತೃಗಳು ವಾಸವಾಗಿರುವುದು ದಕ್ಷಿಣದ ದಿಕ್ಕಿನಲ್ಲಿ. ನಾವು ತುಪ್ಪದ ದೀಪವನ್ನು ಕುಬೇರನ ಸ್ಥಾನದಲ್ಲಿ ಅಂದರೆ ಈಶಾನ್ಯ ದಿಕ್ಕಿನಲ್ಲಿ ಹಚ್ಚುವುದರಿಂದ ಲಕ್ಷ್ಮಿ ಕಟಾಕ್ಷಕ್ಕೆ ಪಾತ್ರರಾಗುತ್ತೇವೆ ಅದು ಈ ಪಿತೃ ಪಕ್ಷದಲ್ಲೇ ಆ ಕೆಲಸವನ್ನು ಕೂಡ ಮಾಡಬೇಕು.
ಇನ್ನೊಂದು ಮುಖ್ಯವಾದ ಕೆಲಸ ಎಂದರೆ ಅರಳಿ ಮರದ ಕೆಳಗಡೆ ದೀಪವನ್ನು ಹಚ್ಚಬೇಕು ಮುಸ್ಸಂಜೆಯಲ್ಲಿ ದೇವರ ಮುಂದೆ ಮನೆಯ ಹೊರಗೆ ಹಾಗು ತುಳಸಿ ಗಿಡಕ್ಕೆ ದೀಪವನ್ನು ಹಚ್ಚಿ ಅರಳಿ ಮರಕ್ಕೂ ದೀಪವನ್ನು ಹಚ್ಚುವುದರಿಂದ ಲಕ್ಷ್ಮಿಯು ಸದಾ ನಮ್ಮ ಮನೆಯಲ್ಲಿ ವಾಸವಾಗಿ ಇರುತ್ತಾಳೆ. ಸ್ನೇಹಿತರೆ ಮುಂದಿನ ಹೊಸ ವಿಚಾರದೊಂದಿಗೆ ಮತ್ತೆ ಭೇಟಿಯಾಗೋಣ ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.
