ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಸರಿಗಮಪ ಲಿಟಲ್ ಚಾಂಪ್ಸ್ ನ (SaRiGaMaPa little champs) ಮೂಲಕ ಕರ್ನಾಟಕದ ಜನಮನ ಸೇರಿರುವ ಪುಟ್ಟ ಬಾಲಕಿ, ದಿಯಾ ಹೆಗಡೆ (Diya Hegde) ಇತ್ತೀಚಿಗಷ್ಟೇ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಪ್ರತಿಭೆಯಾದರು, ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದಾಳೆ. ಮುದ್ದು ಮೊಗ, ಸುಂದರ ಹೂನಗೆಯನ್ನು ಬೀರುವ ದಿಯಾಳನ್ನು ವೇದಿಕೆಯಲ್ಲಿ ನೋಡುವುದೇ ಖುಷಿ ಎಂದು ನಾಡಿನ ಜನರೀಗ ಹೇಳುತ್ತಿದ್ದಾರೆ.
ಸರಿಗಮಪ ಪ್ರಾರಂಭವಾದ ಮೊದಲ ಸಂಚಿಕೆಯಲ್ಲಿಯೇ ತನ್ನ ಸುಮಧುರ ಕಂಠದ ಮೂಲಕ ಗಾಯನವನ್ನು ಹಾಡಿ, ಹಾವಭಾವಗಳನ್ನು ವ್ಯಕ್ತಪಡಿಸುತ್ತಾ, ಎಲ್ಲರ ಗಮನ ಸೆಳೆದಿದ್ದು ನೋಡುಗರಿಗೆ ಮೆಚ್ಚುಗೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ದಿಯಾ ಇದೀಗ ಕರ್ನಾಟಕದ ಮೂಲೆ ಮೂಲೆಯ ಮಂದಿಗೆಲ್ಲರಿಗೂ ಪರಿಚಿತಳಾಗಿ ಹೆಚ್ಚೆಚ್ಚು ವೀವ್ಸ್ (views) ಹಾಗೂ ಲೈಕ್ಸ್ (likes) ಗಳನ್ನು ಪಡೆಯಲು ಕಾರಣವಾಗಿದೆ.
ದಿಯಾ ಹೆಗಡೆ ಮೂಲತಃ ಸಾಗರದವಳಾಗಿದ್ದು, ವೆಂಕಟೇಶ್ ಹಾಗೂ ಅಪರ್ಣ ಅವರ ಪುತ್ರಿ. ಈಕೆಯ ಸಹೋದರಿ ದಿಶಾ. ವಯಸ್ಸಿಗೆ ಮೀರಿದ talent ಅನ್ನು ಹೊಂದಿರುವ ದಿಯಾ ಹೆಗಡೆ, ಸರಿಗಮಪ ವೇದಿಕೆಯಲ್ಲಿ ಅದನ್ನು ಅನಾವರಣಗೊಳಿಸಿದ್ದಾಳೆ.
‘ನಾ ಮುದುಕಿ ಆದರೇನಂತೆ ಇನ್ನೂ ಇರಾಕಿ’ ಎಂಬ ಹಾಡನ್ನು ಹೆಜ್ಜೆ ಇಡುತ್ತಾ ಹಾಡಿ, ಧ್ವನಿಯಲ್ಲಿ modulation ಮಾಡಿರುವುದು ಕಾರ್ಯಕ್ರಮದ ನಿರೂಪಕಿ ಅನುಶ್ರೀ, ಸಂಗೀತ ಬ್ರಹ್ಮ ಹೌಂಸಲೇಖ, ತೀರ್ಪುಗಾರರಾದ ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯ ಸೇರಿದಂತೆ ಎಲ್ಲರಿಗೂ ಅಚ್ಚರಿ ಮೂಡಿಸಿತು.

Diya hegde saregamapa contestant remuneration
ಇಂಪಾದ ಧ್ವನಿಯಲ್ಲಿ ಹಾಡನ್ನು ಹಾಡುವ ಪರಿ, ಹಾಡಿಗೆ ತಕ್ಕನಾದ ಹಾವಭಾವ, ಅಭಿನಯ, ತುಂಟ ಮಾತಿನ ಮೂಲಕ ಪ್ರಚಾರಗೊಂಡ ದಿಯಾ ಹೆಗಡೆ ಈಗ ಸರಿಗಮಪ ಶೋ ದ ‘most attractive contestant’ ಎನ್ನಬಹುದು.
ಕಳೆದ ವಾರ ಶಿವಣ್ಣನ ಹಾಡುಗಳನ್ನು ಹಾಡುವುದಿತ್ತು; ದಿಯಾ ಇದನ್ನು ಹಾಡುವುದರೊಂದಿಗೆ ಶಿವಣ್ಣನ ಕುರಿತೆ ಹಾಡನ್ನು ಬರೆದು ಹಾಡಿರುವುದು ವಿಶೇಷವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗುತ್ತಿರುವ ದಿಯಾ ಹೆಗಡೆ ಇದೀಗ ವಾರದ ಸಂಭಾವನೆಯಾಗಿ ಬರೋಬ್ಬರಿ 35,000 ರೂಪಾಯಿಗಳನ್ನು ಪಡೆಯುತ್ತಿದ್ದಾಳೆ ಎನ್ನಲಾಗುತ್ತಿದೆ.