Disha patani remuneration : ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ದಿಶಾ ಪಟಾನಿ ಅವರ ಪರಿಚಯ ನಿಮಗೆಲ್ಲಾ ಇದ್ದೇ ಇರುತ್ತದೆ. ದಿಶಾ ಪಟಾನಿ ಅವರು ಹುಟ್ಟಿದ್ದು ಉತ್ತರ ಪ್ರದೇಶದಲ್ಲಿ. ಈಕೆ ತನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದು ತೆಲುಗು ಚಿತ್ರರಂಗದಿಂದ. ತೆಲುಗು ಚಿತ್ರರಂಗದಲ್ಲಿ ಮೊದಲ ಸಿನಿಮಾ ಮಾಡಿ ನಂತರ ಈಕೆ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟಳು.. ಬಾಲಿವುಡ್ನಲ್ಲಿ ಅಭಿನಯಿಸಿದ ಮೊದಲ ಚಿತ್ರವೇ ಎಂ ಎಸ್ ಧೋನಿ ಅವರ ಬಯೋಪಿಕ್ ಸಿನಿಮಾ. ಈ ಸಿನಿಮಾ ಬಾಲಿವುಡ್ ಇತಿಹಾಸದಲ್ಲಿ ದೊಡ್ಡ ರೆಕಾರ್ಡ್ ಸೃಷ್ಟಿ ಮಾಡಿದೆ.
ಎಂ ಎಸ್ ಧೋನಿ ಚಿತ್ರದಲ್ಲಿ ಅಭಿನಯಿಸಿದ ನಂತರ ದಿಶಾ ಪಟಾನಿಯವರಿಗೆ ಒಂದರ ಮೇಲೊಂದು ಸರಣಿಗಳಂತೆ ಸಿನೆಮಾಗಳ ಅವಕಾಶಗಳು ಸಿಗಲು ಪ್ರಾರಂಭವಾಯಿತು. ಇದೀಗ ದಿಶಾ ಪಟಾನಿಯವರು ಬಾಲಿವುಡ್ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಡಿಶಾ ಪಟಾನಿಯವರು ನಟಿಯಾಗಿ ಒಂದು ಸಿನಿಮಾಗೆ ಎರಡರಿಂದ ನಾಲ್ಕು ಕೋಟಿ ರೂಪಾಯಿಗಳ ಸಂಭಾವನೆ ಪಡೆಯುತ್ತಾರೆ.

ಅಷ್ಟೇ ಅಲ್ಲದೆ ಒಂದು ಐಟಂ ಸಾಂಗ್ ಗೆ ಇವರು 50 ಲಕ್ಷದಿಂದ ಒಂದು ಕೋಟಿ ರೂಪಾಯಿಗಳ ಬೇಡಿಕೆ ಇಡುತ್ತಾರೆ. ಇತ್ತೀಚಿಗೆ ಬಿಡುಗಡೆಯಾದ ಏಕ್ ವಿಲನ್ ರಿಟರ್ನ್ಸ್ ಸಿನಿಮಾಗೆ ದಿಶಾ ಪಟಾನಿಯವರು ಎರಡುವರೆ ಕೋಟಿ ರೂಪಾಯಿಗಳ ಸಂಭಾವನೆ ಪಡೆದಿದ್ದರು.ಈ ನಟಿಯದ್ದು ಸಿನಿಮಾಗಳಿಗಂತೂ ಕೋಟಿ ಲೆಕ್ಕಾಚಾರವೇ ಬಿಡಿ. ಇನ್ನು ಪ್ರಚಾರ ಅಥವಾ ಅಡ್ವಟೈಸ್ಮೆಂಟ್ ವಿಷಯಕ್ಕೆ ಬಂದರೆ ದಿಶಾ ಪಟಾನಿಯವರು ಈ ಕ್ಷೇತ್ರದಲ್ಲೂ ಕೂಡ ಮಿಂಚುತ್ತಿದ್ದಾರೆ. ಬ್ರಾಂಡೆಡ್ ಕಂಪನಿಯ ಬಟ್ಟೆಗಳನ್ನು ಪ್ರಮೋಟ್ ಮಾಡಲು ದಿಶಾ ಪಟಾನಿಯವರು ಬೇಡಿಕೆ ಇಡುವ ಹಣಗಳನ್ನು ಕೇಳಿದರೆ ನೀವು ಒಂದು ಸೆಕೆಂಡ್ ಬೆಳಗಾಗುತ್ತೀರಿ.
ಈಗಲೂ 18 ವರ್ಷದ ಹರೆಯದ ಯುವತಿಯ ಹಾಗೆ ಎದ್ದು ಕಾಣುವ ನಟಿ ಪ್ರಿಯಾಮಣಿ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ? ಅಯ್ಯೋ ಇಷ್ಟೇನಾ ನೋಡಿ!!
Disha patani remuneration :
ದಿಶಾ ಪಟಾನಿಯವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಕೆಲ್ವಿನ್ ಕ್ಲೇನ್ ಎಂಬ ಬ್ರಾಂಡೆಡ್ ಕಂಪನಿಯ ಪ್ರಾಡಕ್ಟ್ ಗಳನ್ನ ಪ್ರಮೋಟ್ ಮಾಡುತ್ತಾರೆ.. ಕೆಲ್ವಿನ್ ಕ್ಲೇನ್ ಎಂಬ ದೊಡ್ಡ ಕಂಪನಿಯ ಬಟ್ಟೆಗಳನ್ನು ಪ್ರಮೋಟ್ ಮಾಡಲು ಪ್ರತಿ ಪೋಸ್ಟಿಗೆ disha ಪಟಾಣಿಯವರು ಚಾರ್ಜ್ ಮಾಡುತ್ತಾರೆ ತಮ್ಮ ಪ್ರತಿ ಇನ್ಸ್ಟಾಗ್ರಾಮ್ ಪೋಸ್ಟಿಗೆ ದಿಶಾ ಪಟಾನಿ (disha patani) ಯವರು ಪ್ರಮೋಟ್ ಮಾಡಲು ಪ್ರತಿ ಪೋಸ್ಟ್ ಗೆ ಪ್ರತಿ ಬಾರಿ 50 ಲಕ್ಷ ರೂಪಾಯಿಗಳಿಂದ 80 ಲಕ್ಷ ರೂಪಾಯಿಗಳ ಬೇಡಿಕೆ ಇಡುತ್ತಾರೆ.
View this post on Instagram
ಆಗಾಗ ಕೆಲ್ವಿನ್ ಕ್ಲೀನ್ ಕಂಪನಿಯ ಬಟ್ಟೆಗಳನ್ನು ಧರಿಸಿಕೊಂಡು ಡಿಶಾ ಪಟಾನಿಯವರು ಬೋಲ್ಟ್ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಹಾಕುತ್ತಾರೆ.. ಈ ಎಲ್ಲಾ ಫೋಟೋ ಅಥವಾ ಪೋಸ್ಟ್ ಗಳಿಗೆ ಕೆಲ್ವಿನ್ ಕ್ಲೇನ್ ಕಂಪನಿಯವರು ಡಿಶಾ ಬಟಾಣಿಯ ಅವರಿಗೆ ಲಕ್ಷಗಟ್ಟಲೆ ಹಣವನ್ನು ಕೊಡುತ್ತಾರೆ.ಕೆಲ್ವಿನ್ ಕ್ಲೇನ್ ಕಂಪನಿಯವರು ಒಳ ಉಡುಪುಗಳನ್ನ ತಯಾರಿಸುವುದರಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ.
ಡಿಶಾ ಪಟಾನಿಯವರು ಈ ಕಂಪನಿಯ ಒಳಉಡುಪುಗಳನ್ನ ಧರಿಸಿಕೊಂಡು ತಮ್ಮ instagram ನಲ್ಲಿ ಪೋಸ್ಟ್ ಮಾಡುತ್ತಾರೆ ಇದಕ್ಕೆ ಲಕ್ಷಾನುಗಟ್ಟಲೆ ಜನ ಲೈಕ್ ಕಮೆಂಟ್ ಮಾಡುತ್ತಾರೆ. ಲಕ್ಷ ಲಕ್ಷ ಜನರು ಮಾಡುವ ಈ ಲೈಕ್ ಕಮೆಂಟ್ ಗಳಿಂದಲೇ ದಿಶಾ ಪಟಾನಿ, ಲಕ್ಷ ಲಕ್ಷ ಹಣ ಸಂಪಾದನೆ ಮಾಡುತ್ತಿದ್ದಾಳೆ ಎಂದರೆ ನೀವೆಲ್ಲ ನಂಬಲೇಬೇಕು. ಸೆಲೆಬ್ರಿಟಿಗಳ ಜೀವನವೇ ಹಾಗೆ ಒಂದು ಸಲ ಪ್ರಸಿದ್ಧಿ ಪಡೆದರೆ ನಂತರ ಅವರು ಏನೇ ಕೆಲಸ ಮಾಡಿದರೂ ಅದಕ್ಕೆ ಹಣ ಸಿಗುತ್ತೆ, ಅದಕ್ಕೆ ಈ ಸೆಲೆಬ್ರಿಟಿಗಳು ಯಾವಾಗಲೂ ಟ್ರೆಂಡಿಂಗ್ ನಲ್ಲಿ ಇರೋಕೆ ಬಯಸುತ್ತಾರೆ.