ಬಾಲಿವುಡ್ ನಲ್ಲಿ ಇಂದು ಸಾಕಷ್ಟು ಹೊಸ ಹೊಸ ಕಲಾವಿದರನ್ನ ಕಾಣಬಹುದು. ಅದರಲ್ಲಿ ಬಹುತೇಕ ಹೀರೋಯಿನ್ ಗಳು ಸ್ಟಾರ್ ಕಿಡ್ಸ್ ಇದೇ ಗರಿಮೆ ಇಟ್ಟುಕೊಂಡು ಸಿನಿಮಾ (Film)ದಲ್ಲಿ ಸಾಕಷ್ಟು ಅವಕಾಶಗಳನ್ನು ಕೂಡ ಗಳಿಸಿಕೊಂಡಿದ್ದಾರೆ ಆದರೆ ಕೆಲವರಿಗೆ ಸಿನಿಮಾ ದೊಡ್ಡ ಬ್ರೇಕ್ ಅಂತೂ ನೀಡಿಲ್ಲ. ಸದ್ಯ ದಿಶಾ ಪಟಾನಿ ಸಿನಿಮಾದಲ್ಲಿ ತಮ್ಮನ್ನ ತಾವು ಗುರುತಿಸಿಕೊಳ್ಳುವುದಕ್ಕೆ ಪರದಾಡುತ್ತಿದ್ದಾರೆ. ಎಷ್ಟು ಸಿನಿಮಾ ಮಾಡಿದರು ಯಾವ ಸಿನಿಮಾದಲ್ಲಿಯೂ ಕೂಡ ಅವರಿಗೆ ದೊಡ್ಡ ಬ್ರೇಕ್ ಸಿಗುತ್ತಿಲ್ಲ, ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ದಿಶಾ ಪಟಾನಿ ಸಾಕಷ್ಟು ಬೋಲ್ಡ್ ಹಾಗೂ ಹಾಟ್ (Bold-hot) ಆಗಿ ಫೋಟೋ (Photos)ಗಳನ್ನ ತೆಗೆಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ದಿಶಾ ಪಟಾನಿ ಸಾಕಷ್ಟು ಫಾಲೋವರ್ಸ್ ಅನ್ನು ಕೂಡ ಹೊಂದಿದ್ದಾರೆ. ಬಾಲಿವುಡ್ ನಲ್ಲಿ ಈಗಾಗಲೇ ತೆರೆಕಂಡ ಭಾಘಿ 2, ಭಾಘಿ 3, (Bhagi 2,3) ಸಲ್ಮಾನ್ ಖಾನ್ (Sakman Khan) ಜೊತೆ ರಾಧೆ (Radhe), ಎನ್ ಎಸ್ ಧೋನಿ ಮೊದಲದ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಎಂ ಎಸ್ ಧೋನಿ (M.S.Dhoni) ಸಿನಿಮಾ ಹಿಟ್ ಆಗಿದ್ದರು ದಿಶಾ ಪಟಾನಿ ಮಾತ್ರ ಅದರಿಂದ ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ಸದ್ಯ ಸೋಶಿಯಲ್ ಮೀಡಿಯಾ (Social Media) ದಲ್ಲಿ ದಿಶಾ ಪಟಾನಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎನಿಸುತ್ತಿದೆ. ಇತ್ತೀಚೆಗೆ ನೇರಳೆ ಬಣ್ಣದ ಡ್ರೆಸ್ (Purple Dress) ಒಂದನ್ನು ಧರಿಸಿ ದಿಶಾ ಪಟಾನಿ ಹೊಸ ಫೋಟೋ ಮಾಡಿಸಿದ್ದರು. ಕಣ್ಣು ಕುಕ್ಕುವಂತಹ ಅವರ ಹಾಟ್ ಲುಕ್ ಕೆಲವು ಅಭಿಮಾನಿಗಳಿಗೆ ಇಷ್ಟವಾದರೆ ಇನ್ನೂ ಕೆಲವು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಯಾವಾಗಲೂ ಇತರ ಫೋಟೋಶೂಟ್ (Photoshoot) ಮಾಡುವುದೇ ಆಯಿತು ಸಿನಿಮಾದಲ್ಲಿ ನಟಿಸೋದು ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ ಜೊತೆಗೆ ಪ್ರತಿಭೆ ಚೆನ್ನಾಗಿ ಇದ್ರೆ ಈ ರೀತಿ ಮೈ ತೋರಿಸಿಕೊಂಡು ಓಡಾಡುವ ಅಗತ್ಯ ಇರಲಿಲ್ಲ ಎಂಬುದಾಗಿಯೂ ಕಮೆಂಟ್ ಮಾಡಿದ್ದಾರೆ. ಇನ್ನು ಈ ರೀತಿ ಎಲ್ಲಾ ಫೋಟೋ ತೆಗೆಸಿಕೊಳ್ಳುವ ಬದಲು ಸಿನಿಮಾದ ಕಡೆಗೆ ಸ್ವಲ್ಪ ಗಮನ ಕೊಡಿ ಎಂಬುದಾಗಿಯೂ ಸಲಹೆಯನ್ನು ನೀಡಿದ್ದಾರೆ. ದಿಶಾ ಪಟಾನಿ ಫೋಟೋಗೆ ಸಾವಿರಾರು ಲೈಕ್ಸ್ ಬರ್ತಾ ಇತ್ತು. ಆದರೆ ಇದೀಗ ಈ ಒಂದು ಫೋಟೋ ಜನರ ಕೆಂಗಣ್ಣಿಗೆ ಗುರಿಯಾಗಿದೆ.
ದಿಶಾ ಪಟಾನಿ ಅವರ ಸಿನಿಮಾದಲ್ಲಿ ಅದೃಷ್ಟದ ಪರೀಕ್ಷೆ ಅಂತೂ ಮುಂದುವರೆದಿದೆ. ಯೋಧ ಸಿನಿಮಾದಲ್ಲಿ ಸಿದ್ಧಾರ್ಥ ಮಲ್ಹೋತ್ರ (Siddharth Malhotra) ಅವರಿಗೆ ಜೋಡಿಯಾಗಿ ದಿಶಾ ಪಟಾನಿ ಅಭಿನಯಿಸಲಿದ್ದಾರೆ. ಅದೇ ರೀತಿ ನಟ ಪ್ರಭಾಸ್ (Prabhas) ಜೊತೆಗೆ ಪ್ರಾಜೆಕ್ಟ್ ಕೆ ಸಿನಿಮಾದಲ್ಲಿಯೂ ಕೂಡ ತೆರೆ ಹಂಚಿಕೊಂಡಿದ್ದಾರೆ ದಿಶಾ ಪಟಾನಿ. ಈ ಸಿನಿಮಾಗಳಾದರೂ ದಿಶಾ ಗೆ ಒಂದು ದಿಕ್ಕನ್ನ ತೋರಿಸುತ್ತಾ ಕಾದು ನೋಡಬೇಕು.