ಕಾಟೇರ ಸಿನಿಮಾದ ಶೂಟಿಂಗ್ ವೇಳೆಯಲ್ಲಿ ಓಲ್ಡ್ ಗೆಟಪ್ ನಲ್ಲಿರುತ್ತಿದ್ದ ಡಿ ಬಾಸ್ ಊಟ ಮಾಡುತ್ತಿರಲಿಲ್ಲ ಯಾಕೆ ಗೊತ್ತಾ? ಇಲ್ಲಿದೆ ನೋಡಿ ಅಸಲಿ ವಿಚಾರ!!

ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ‘ಕಾಟೇರ’ ಸಿನಿಮಾವು ಯಶಸ್ಸು ಕಂಡಿದೆ. ಡಿಸೆಂಬರ್ ತಿಂಗಳಲ್ಲಿ ತೆರೆಗೆ ಬಂದ ಸಿನಿಮಾವು ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂಪಾಯಿಗೂ ಅಧಿಕಕಲೆಕ್ಷನ್ ಮಾಡಿವೆ. ಕಾಟೇರ (Katera) ಸಿನಿಮಾದ ಬಳಿಕ ಯಶಸ್ಸಿನಲ್ಲಿ ಚಿತ್ರ ತಂಡವು ತೇಲಾಡುತ್ತಿದೆ.

ನಟ ದರ್ಶನ್ ಅವರ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ವಯಸ್ಸಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತೆರೆ ಮೇಲೆ ಡಿ ಬಾಸ್ ಗೆಟಪ್ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಆದರೆ ದರ್ಶನ್ ಅವರು ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅದಕ್ಕಾಗಿ ದರ್ಶನ್ ಅವರು ಮಾಡಿದ ತ್ಯಾಗವನ್ನು ನೆನಪಿಸಿಕೊಂಡಿದ್ದಾರೆ.

ಈ ಬಗ್ಗೆ ರಿವೀಲ್ ಮಾಡಿರುವ ನಿರ್ದೇಶಕ ತರುಣ್ ಸುಧೀರ್ (Trun Sudheer), “ಇನ್ನೊಂದು ವಯಸ್ಸಾಗಿರೊ ಗೆಟಪ್ ಬೇಕಿತ್ತು. ಅದಕ್ಕಾಗಿ ಒಂದಿಷ್ಟು ಬೇರೆ ಬೇರೆ ಲುಕ್‌ಗಳನ್ನು ಟ್ರೈ ಮಾಡಿದ್ವಿ ನಾವು. ಕೊನೆಗೆ ಒಂದು ಫೈನಲ್ ಲುಕ್ ಲಾಕ್ ಆಯ್ತು. ಅವರಿಗೆ ಈ ಲುಕ್ ಸಖತ್ ಚಾಲೆಂಜಿಂಗ್ ಆಗಿತ್ತು. ಮೇಕಪ್ ಹಾಕಿಕೊಳ್ಳುವುದಕ್ಕೆ ಎರಡು ಗಂಟೆ ಆಗೋದು. ತೆಗೆಯೋದಕ್ಕೆ 45 ನಿಮಿಷ ಬೇಕಿತ್ತು.” ಎಂದಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಈ ಓಲ್ಡ್ ಗೆಟಪ್ ಮಾತನಾಡಿದ್ದು, “ಲುಕ್ ಅಂದಾಗ, ಒಂದು ಯಂಗ್ ಗೆಟಪ್ ಇದೆ. ಇನ್ನೊಂದು ಓಲ್ಡ್ ಗೆಟಪ್ ಇದೆ. ಯಂಗ್ ಗೆಟಪ್‌ಗೆ ಪಟ ಪಟ ಅಂತ ಆಗೋಯ್ತು. ಆದರೆ, ಓಲ್ಡ್ ಗೆಟಪ್ ಹಾಕಬೇಕಿದ್ದರೆ, ಒಂದೂ ಒಂದೂವರೆ ಗಂಟೆ ತೆಗೆದುಕೊಳ್ಳುತ್ತಿದ್ದೆ. ಯಾಕಂದ್ರೆ, ಮುಖವೆಲ್ಲ ಸುಕ್ಕು ಮಾಡಬೇಕು. ಒಂದು ಲೋಷನ್ ಬರುತ್ತೆ ಅದನ್ನು ಹಾಕಿ ಹಿಸುಕಿದರೆ ಮಾತ್ರ ರಿಂಕಲ್ ಬರುತ್ತೆ.” ಎಂದಿದ್ದಾರೆ.

ಅಷ್ಟೇ ಅಲ್ಲದೇ ಓಲ್ಡ್ ಗೆಟಪ್ ಹಾಕಿದಾಗ, ಮಧ್ಯಾಹ್ನದ ಊಟವನ್ನೇ ಮಾಡುತ್ತಿರಲಿಲ್ಲ ಎನ್ನುವ ಬಗ್ಗೆ ಮಾತನಾಡಿರುವ ನಿರ್ದೇಶಕ,”ಓಲ್ಡ್ ಗೆಟಪ್‌ನಲ್ಲಿ ಇದ್ದಾಗ ಅವರು ಊಟ ಮಾಡುತ್ತಿರಲಿಲ್ಲ. ಕಾರಣ ಏನಂದ್ರೆ, ಊಟ ಮಾಡುವುದಕ್ಕೆ ಆಗುತ್ತಿರಲಿಲ್ಲ. ಗಡ್ಡ, ಮೀಸೆ ಎಲ್ಲಾ ಇರುತ್ತೆ. ಸರಿಯಾಗಿ ಊಟ ಮಾಡುವುದಕ್ಕೆ ಆಗುತ್ತಿರಲಿಲ್ಲ. ಅವರು ಯಾವಾಗಲೂ ಮಧ್ಯಾಹ್ನ ಊಟ ಬಿಟ್ಟೇ ಶೂಟಿಂಗ್ ಮಾಡೋರು.” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *