ಮೊದಲನೇ ಗಂಡನಿಂದ ದೂರವಾದ ಮೇಲೆ ಸದ್ದಿಲ್ಲದೇ ತೆಲುಗು ನಿರ್ದೇಶಕ ಸುಕು ಪೂರ್ವಜ್ ರನ್ನು ಮದುವೆಯಾದ್ರಾ ನಟಿ ಜ್ಯೋತಿ ರೈ? ಇಲ್ಲಿದೆ ನೋಡಿ ಸತ್ಯ!!!

ಕನ್ನಡದ ಅನೇಕ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿರುವ ನಟಿ ಜ್ಯೋತಿ ರೈ (Jyothi Rai) ಯವರು ಸದ್ಯಕ್ಕೆ ಸುದ್ದಿಯಲ್ಲಿದ್ದಾರೆ. ಈಗಾಗಲೇ 20 ಕ್ಕೂ ಹೆಚ್ಚು ಕನ್ನಡ ಧಾರವಾಹಿ (Kannada Serials) ಗಳಲ್ಲಿ ಹಾಗೂ ಸಿನಿಮಾ (Films) ಗಳಲ್ಲಿ ನಟಿಸಿರುವ ಈ ನಟಿ ಜ್ಯೋತಿ ರೈಯವರು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ.

ಕನ್ನಡ (Kannada) ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಜ್ಯೋತಿ ರೈ (Jyothi Rai) ಯವರು, ತೆಲುಗು (Telugu) ಹಾಗೂ ತಮಿಳು (Tamil) ಕಿರುತೆರೆಯಲ್ಲಿಯು ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೇ ಜ್ಯೋತಿ ಮತ್ತೊಂದು ಮದುವೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ವಿಚಾರ ವೊಂದು ಕಳೆದ ಕೆಲವು ತಿಂಗಳಿನಿಂದ ಕೇಳಿ ಬರುತ್ತಲೇ ಇದೆ.

ಟ್ರಡಿಷನಲ್ ಉಡುಗೆ (Traditional Dress) ಯಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಜ್ಯೋತಿ ರೈಯವರು ಸದ್ಯಕ್ಕೆ ಮಾಡ್ರನ್ ಉಡುಗೆ (Modren Dress) ಯಲ್ಲಿ ಮಿಂಚುತ್ತಿದ್ದಾರೆ. ಅದಲ್ಲದೇ ಸೋಷಿಯಲ್ ಮೀಡಿಯಾಗಳಲ್ಲಿ ಒಂದಾದ ಮೇಲೆ ಒಂದರಂತೆ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ ಜ್ಯೋತಿ ರೈ. ತುಂಬಾನೆ ಬೋಲ್ಡ್ ಆಗಿರುವ ಫೋಟೋಸ್ ಅಪ್ಲೋಡ್ ಮಾಡಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ.

ಮೊದಲ ಗಂಡನಿಂದ ದೂರಾದ ಬಳಿಕ ನಟಿ ಜ್ಯೋತಿ ರೈಯವರು ಸುಕು ಪೂರ್ವಜ್ (Suku Poorvaj) ಅಲಿಯಾಸ್ ಸುರೇಶ್ ಕುಮಾರ್‌ (Suresh Kumar) ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಅನ್ನುವಂತಹ ಟಾಕ್ಸ್ ಇದೀಗ ಹರಿದಾಡುತ್ತಿವೆ. ತೆಲುಗು ನಿರ್ದೇಶಕ ಸುಕು ಪೂರ್ವಜ್‌ (Suku Poorvaj) ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುವ ನಟಿ ಜ್ಯೋತಿ ರೈಯವರು ಕೆಲ ದಿನಗಳ ಹಿಂದೆಯಷ್ಟೇ ತಮ್ಮ ಹೆಸರಿನ ಪಕ್ಕದಲ್ಲಿ ಪೂರ್ವಜ್‌ ಎಂದೂ ಜ್ಯೋತಿ ಬದಲಾಯಿಸಿಕೊಂಡಿದ್ದರು.

ನಟಿಯ ಈ ಹೆಸರು ಬದಲಾವಣೆಯ ಪೋಸ್ಟ್ ಎಲ್ಲರಿಗೂ ಕೂಡ ಶಾಕ್ ನೀಡಿತ್ತು. ಆದರೆ ಇದೀಗ ಪೂರ್ವಜ್‌ ಜತೆಗಿನ ಫೋಟೋ ಹಂಚಿಕೊಂಡು, ಶೀಘ್ರದಲ್ಲಿ ಸಿಹಿ ಸುದ್ದಿ ನೀಡಲಿದ್ದೇನೆ ಎಂದು ಬರೆದುಕೊಂಡಿದ್ದರು. ಆದರೆ ಇದೀಗ ತೆಲುಗು ನಿರ್ದೇಶಕ ಸುಕು ಪೂರ್ವಜ್ (Suku Poorvaj) ಜೊತೆಗಿನ ಪೋಟೋಗಳನ್ನು ಹಂಚಿಕೊಂಡು ಶಾಕ್ ನೀಡಿದ್ದು, ಈಗಾಗಲೇ ಹಲವು ಫೊಟೋಗಳು ಇಬ್ಬರ ಖಾತೆಯಲ್ಲೂ ಶೇರ್ ಆಗಿವೆ. ಹೀಗಾಗಿ ಇವರಿಬ್ಬರು ಮದುವೆಯಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ನಟಿ ಜ್ಯೋತಿ ರೈಯವರು ತಮ್ಮ ಮದುವೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.

Leave a Reply

Your email address will not be published. Required fields are marked *