ದುಡ್ಡಿಗೋಸ್ಕರನೇ ಸಿನೆಮಾ ಮಾಡೋದು ನಾನು ಅಂತ ಹೇಳುವ ಪ್ರಶಾಂತ್ ನೀಲ್ ಸಲಾರ್ ಗೆ ಪಡೆದ ಸಂಭಾವನೆ ಎಷ್ಟು ಗೊತ್ತಾ? ತಿಳಿದರೆ ಬಾಯಿ ಮೇಲೆ ಕೈ ಇಡ್ತೀರಾ!!

ನಟ ಪ್ರಭಾಸ್ ಅವರು ‘ಸಲಾರ್’ ಸಿನಿಮಾದಿಂದ (Salaar Movie) ದೊಡ್ಡ ಗೆಲುವು ಕಂಡಿದ್ದು, ಇದು ನಟನ ವೃತ್ತಿ ಜೀವನಕ್ಕೆ ಬ್ರೇಕ್ ನೀಡಿದೆ. ಇದೇ ಡಿ.22ರಂದು ವಿಶ್ವದಾದ್ಯಂತ ಬಿಡುಗಡೆಯಾದ ಸಲಾರ್ (Salaar) ಆಕ್ಸನ್​ ಥ್ರಿಲ್ಲರ್​ ಸಿನಿಮಾಕ್ಕೆ ಒಳ್ಳೆಯ ರೆಸ್ಪಾನ್ಸ್ ಬರುತ್ತಿವೆ. ನಟ ಪ್ರಭಾಸ್​ ಮತ್ತು ಪೃಥ್ವಿರಾಜ್​ (Pruthviraj) ನಟಿಸಿರುವ, ಕೆಜಿಎಫ್​ ಖ್ಯಾತಿಯ ಪ್ರಶಾಂತ್​ ನೀಲ್​ (Prashanth Neel) ಆಕ್ಷನ್ ಕಟ್ ಹೇಳಿರುವ ಸಲಾರ್​ ​ ಬಾಕ್ಸ್​ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿವೆ.

ಈಗಾಗಲೇ ಹಳೆಯ ದಾಖಲೆಗಳನ್ನು ಉಡೀಸ್ ಮಾಡಿದ್ದು, ಗಲ್ಲಾಪೆಟ್ಟಿಗೆಯು ತುಂಬುತ್ತಿದೆ. ಬಿಡುಗಡೆ ಕೆಲವೇ ದಿನಕ್ಕೆ ಸಲಾರ್ ಚಿತ್ರದ ನಿರ್ಮಾಪಕರು ಬಾಕ್ಸ್​ಆಫೀಸ್​ ಕಲೆಕ್ಷನ್​ ಬಗ್ಗೆ ರಿವೀಲ್ ಮಾಡಿದ್ದು, ಇತ್ತೀಚೆಗಷ್ಟೇ ಬಂದ ಮಾಹಿತಿ ಪ್ರಕಾರವಾಗಿ ಚಿತ್ರವು ನಾಲ್ಕು ದಿನದಲ್ಲಿ 400 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದೆ ಎಂದಿದ್ದಾರೆ.

400 ಕೋಟಿ ರೂಪಾಯಿಯಲ್ಲಿ ನಿರ್ಮಾಣವಾದ ಈ ಸಿನಿಮಾದಲ್ಲಿ ನಟ, ನಟಿ ಹಾಗೂ ನಿರ್ದೇಶಕ ಹಾಗೂ ಕಲಾವಿದರು ಪಡೆದ ಸಂಭಾವನೆಯ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಬಲ್ಲ ಮೂಲಗಳಿಂದ ಬಂದ ಮೂಲಗಳ ಪ್ರಕಾರವಾಗಿ ಪ್ರಶಾಂತ್ ನೀಲ್​ ಅವರು ಸಲಾರ್​ ಚಿತ್ರಕ್ಕೆ ಲಾಭದ ಜೊತೆಗೆ ಸುಮಾರು 100 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಇದೇ ಮೊದಲ ಬಾರಿಗೆ ಕೋಟಿಗಟ್ಟಲೇ ಸಂಭಾವನೆ ಪಡೆದ ಕನ್ನಡದ ಮೊದಲ ನಿರ್ದೇಶಕ ಪ್ರಶಾಂತ್ ನೀಲ್ ಎನ್ನುವ ಖ್ಯಾತಿಗೆ ಪಾತ್ರವಾಗಿದ್ದಾರೆ. ಅದಲ್ಲದೇ ನಟ ಪ್ರಭಾಸ್ ಅವರು ಕೂಡ 100 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಅದಲ್ಲದೇ ಮಲಯಾಳಂ ಸ್ಟಾರ್ ಪೃಥ್ವಿರಾಜ್ ಅವರು ಕೂಡ ನಾಲ್ಕು ಕೋಟಿ ರೂ. ಸಂಭಾವನೆಯಾಗಿ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಸಂಭಾವನೆ ಜೊತೆ ಜೊತೆಗೆ ಬಾಕ್ಸ್ ಆಫೀಸಿನ ಕಲೆಕ್ಷನ್ ವಿಚಾರವಾಗಿ ಸುದ್ದಿಯಾಗುತ್ತಿದೆ. ಸಲಾರ್’ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದ್ದು, ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಭಾಸ್, ಪೃಥ್ವಿರಾಜ್​ ಸುಕುಮಾರನ್ ಮೊದಲಾದವರು ನಟಿಸಿದ್ದು, ಸಿನಿಮಾವನ್ನು ಕೆಲವರು ಮೆಚ್ಚಿಕೊಂಡರೆ, ಇನ್ನು ಕೆಲವರು ಈ ಚಿತ್ರದದ ಬಗ್ಗೆ ಟೀಕೆಗಳುಗಳು ವ್ಯಕ್ತವಾಗಿವೆ.

Leave a Reply

Your email address will not be published. Required fields are marked *