ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಅವರ ಮುದ್ದಾದ ಕುಟುಂಬ ಹೇಗಿದೆ ಗೊತ್ತಾ? ಅಪರೂಪದ ಫೋಟೋವೊಂದು ವೈರಲ್

ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಂಡಿರುವ ಜೋಡಿಗಳಲ್ಲಿ ಒಂದು ಈ ನಿರ್ದೇಶಕ ಪವನ್ ಒಡೆಯರ್ (Pavan wadeyar) ಹಾಗೂ ನಟಿ ಅಪೇಕ್ಷಾ ಪುರೋಹಿತ್ (Apeksha Purohit). ನಿರ್ದೇಶಕ ಪವನ್ ಒಡೆಯರ್ ಅವರು, ರಣವಿಕ್ರಮ, ಗೂಗ್ಲಿ, ಡೊಳ್ಳು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದು ಖ್ಯಾತ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಈ ನಿರ್ದೇಶಕನ ಪತ್ನಿ ನಟಿ ಅಪೇಕ್ಷಾ ಒಡೆಯರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

‘ಶ್ರೀಮತಿ ಭಾಗ್ಯಲಕ್ಷ್ಮಿʼ (Shreemathi Bhagyalakshmi) ಸೀರಿಯಲ್‌ನಲ್ಲಿ ನಾಯಕಿಯಾಗಿ ಅಪೇಕ್ಷಾ (Apeksha Purohit) ನಟಿಸಿದ್ದರು. ಹೀಗೆ ನಟಿಯಾಗಿ ಗುರುತಿಸಿಕೊಂಡಿದ್ದ ಅಪೇಕ್ಷಾರವರಿಗೆ ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ಬಳಗವಿದೆ. ಕಳೆದ ಕೆಲವು ದಿನಗಳಹಿಂದೆ ಸ್ಯಾಂಡಲ್‌ವುಡ್‌ನ ಮುದ್ದಾದ ಜೋಡಿ ನಿರ್ದೇಶಕ ಪವನ್ ಒಡೆಯರ್(Pavan wadeyar) ಅಪೇಕ್ಷಾ ಪುರೋಹಿತ್ (Apeksha Purohit) ಅವರ ಮನೆಗೆ ಲಕ್ಷ್ಮಿಯ ಆಗಮನವಾಗಿತ್ತು.

ಎರಡನೇ ಮಗುವಾಗಿ ಪುಟಾಣಿ ಲಕ್ಷ್ಮಿ ತಮ್ಮ ಬದುಕಿಗೆ ಬಂದಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನಿರ್ದೇಶಕನೇ ಹೇಳಿಕೊಂಡಿದ್ದರು. ಆದರೆ ಇದೀಗ ಈ ಮುದ್ದಾದ ದಂಪತಿಗಳ ಫೋಟೋವೊಂದು ವೈರಲ್ ಆಗಿದ್ದು, ಅಪೇಕ್ಷಾರವರು ಪಿಂಕ್ (Pink) ಬಣ್ಣದ ಸೀರೆಯಲ್ಲಿ ಮಿಂಚಿದರೆ ಪವನ್ ಒಡೆಯರ್ ನೀಲಿ (Blue) ಬಣ್ಣದ ಉಡುಗೆ ತೊಟ್ಟು ಮಿಂಚಿದ್ದಾರೆ. ಒಂದು ಫೋಟೋದಲ್ಲಿ ಪವನ್ ಒಡೆಯರ್ ಮುದ್ದಿನ ಮಡದಿಯ ಕೆನ್ನೆಗೆ ಮುತ್ತಿಕ್ಕಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಗಳಿಂದ ಲೈಕ್ಸ್ ಗಳು ವ್ಯಕ್ತವಾಗಿವೆ.

ಅಪೇಕ್ಷಾ ಮತ್ತು ಪವನ್‌ ಒಡೆಯರ್‌ ಜೋಡಿ 2018ರ ಆಗಸ್ಟ್‌ನಲ್ಲಿ ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ಹೊಸ ಬದುಕಿಗೆ ಕಾಲಿಟ್ಟಿದ್ದರು. ಮದುವೆಯಾದ ಒಂದೆರಡು ವರ್ಷಗಳಲ್ಲಿಯೇ ಅಪೇಕ್ಷಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಸದ್ಯಕ್ಕೆ ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್ ದಂಪತಿಗಳು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಎರಡನೇ ಮಗುವಿಗೆ ತಾಯಿಯಾಗುತ್ತಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.

ಹೌದು, ಪವನ್ ಪತ್ನಿ ಅಪೇಕ್ಷಾ ಬೇಬಿ ಬಂಪ್ ಫೋಟೋಶೂಟ್ (Baby Bump Photoshoot) ಮಾಡಿಸಿಕೊಂಡಿದ್ದ ಈ ಅಪೇಕ್ಷಾರವರು ಸಿಹಿ ಸುದ್ದಿಯ ಬಗ್ಗೆ ತಿಳಿಸಿದ್ದರು. ಈ ಬೇಬಿ ಬಂಪ್ ಫೋಟೋಶೂಟ್ ನಲ್ಲಿ ಕಪ್ಪು ಬಣ್ಣದ ಉಡುಗೆಯಲ್ಲಿ ನಟಿಯು ಎಲ್ಲರ ಗಮನ ಸೆಳೆದಿದ್ದರು.

ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, “ನಮ್ಮ 2ನೇ ಮಗು ಜಗತ್ತಿಗೆ ಕಾಲಿಡುತ್ತಿದೆ. ನಿಮ್ಮ ಪ್ರೀತಿ ಮತ್ತು ಹಾರೈಕೆ ಇರಲಿ” ಎಂದು ಬರೆದುಕೊಂಡಿದ್ದರು. ಸದ್ಯಕ್ಕೆ ನಟಿ ಅಪೇಕ್ಷಾ ಪುರೋಹಿತ್ ಅವರು ಮಗುವಿನ ಲಾಲನೆಪಾಲನೆಯಲ್ಲಿ ಬ್ಯುಸಿಯಾಗಿದ್ದರೆ ಇತ್ತ ನಿರ್ದೇಶಕ ಪವನ್ ಒಡೆಯರ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *