ಇಂದಿನ ಕಾಲದಲ್ಲಿ ನಂಬಿಕೆಗಳಿಗೆ ಯಾವುದೇ ಅರ್ಥವೇ ಇಲ್ಲ. ದಾಂಪತ್ಯ ಜೀವನದಲ್ಲಿ ಗಂಡ ಹೆಂಡಿರು ಅನ್ನೋನ್ಯವಾಗಿ ಬದುಕಲು ಬೇಕಾಗಿರುವುದು ನಂಬಿಕೆ ಹಾಗೂ ಪ್ರೀತಿ. ಆದರೆ ಇತ್ತೀಚೆಗಿನ ದಿನಗಳಲ್ಲಿ ಪ್ರೀತಿ ಹಾಗೂ ಹಣಕ್ಕಾಗಿ ಮೂರನೇ ವ್ಯಕ್ತಿಯತ್ತ ಆಕರ್ಷಿತರಾಗುತ್ತಿರುವುದು ನಿಜಕ್ಕೂ ವಿಪರ್ಯಾಸ ಎನ್ನಬಹುದು. ಇವರಿಬ್ಬರ ಸಂಸಾರದಲ್ಲಿ ಮೂರನೇ ವ್ಯಕ್ತಿಯ ಪ್ರವೇಶವಾಗಿತ್ತು.
ಇದನ್ನು ಸಹಿಸಲಾಗದ ಪತಿರಾಯ ಮಾಡಿದ ಕೆಲಸ ಕೇಳಿದರೆ ಶಾಕ್ ಆಗುವುದು ಪಕ್ಕಾ. ಹೌದು, ಚಿರಯಂಕೀಝು ಸಮೀಪದ ನಾಗರಕಾವು ಎಂಬಲ್ಲಿ ತನ್ನ ಸ್ನೇಹಿತನ ಕಥೆ ಮು-ಗಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಅಟ್ಟಿಂಗಲ್ ಪೊಲೀಸರು ಬಂಧಿಸಿದ್ದರು. ಕಿಝುವಿಲ್ಲಂನ ನೈನಂಕೋಣಂನ ಆರೋಪಿ ಮುರುಕನ್ (41) ಎಂಬಾತನು ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ ಹಲವಾರು ಎ-ಚ್ಚರಿಕೆಗಳನ್ನು ನೀಡಿದ್ದನು.
ಆದರೆ ನಡುವೆಯೂ ತನ್ನ ಹೆಂಡತಿಯೊಂದಿಗೆ ಸಂಬಂಧವನ್ನು ಮುಂದುವರೆಸಿದ್ದಕ್ಕಾಗಿ ದಿಲೀಪ್ (32) ಎಂಬಾತನ ಜೀವ ತೆಗೆದಿದ್ದನು. ಪೇಂಟರ್ ಆಗಿದ್ದ ದಿಲೀಪ್‌ನ ನೆರೆಮನೆಯ ಮಹಿಳೆ ಮದುವೆಗೂ ಮುನ್ನವೇ ಆತನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಳು. ಆದರೆ, ಕೆಲ ವರ್ಷಗಳ ಹಿಂದೆ ದಿಲೀಪ್ ಕೊಲ್ಲಿ ದೇಶಕ್ಕೆ ತೆರಳಿದ್ದು, ಆ ವೇಳೆ ಈ ಮಹಿಳೆಯೂ ಮುರುಕನ್ ಅವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಇವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಒಂದು ಹೆಣ್ಣು ಮಗುವಿತ್ತು. ಇತ್ತ ದಿಲೀಪ್ ಫೋನ್ ಮೂಲಕ ಮಹಿಳೆಯೊಂದಿಗೆ ಪ್ರೀತಿ ಸಲ್ಲಾಪವನ್ನು ಪ್ರಾರಂಭ ಮಾಡಿದ್ದನು. ಗಲ್ಫ್ ದೇಶದ ಬೇರೊಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮುರುಕನ್ ಜೊತೆಗೂ ಸ್ನೇಹ ಬೆಳೆಸಿದ್ದನು.
ಈ ವಿಚಾರ ತಿಳಿಯುತ್ತಿದ್ದಂತೆ ಮುರುಕನ್ ಮೂರು ತಿಂಗಳ ಹಿಂದಷ್ಟೇ ಕೇರಳಕ್ಕೆ ವಾಪಸಾಗಿದ್ದನು. ಕಳೆದ ತಿಂಗಳು ರಜೆ ಮೇಲೆ ಬಂದಿದ್ದ ದಿಲೀಪ್ ಗೆ ಎಚ್ಚರಿಕೆ ನೀಡಿದರೂ ಮುರುಕನ್ ಮನೆಗೆ ಭೇಟಿ ನೀಡಲಾರಂಭಿಸಿದ್ದನು. “ಭಾನುವಾರ, ಮುರುಕನ್ ತನ್ನ ಬೈಕನ್ನು ಬೇಕಂತಲೇ ದಿಲೀಪ್ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಮಾಡಿದ್ದನು.
ಇಬ್ಬರ ನಡುವೆ ವಾಗ್ವಾದ ನಡೆದು ರಸ್ತೆಯಲ್ಲಿ ಬಿದ್ದಿದ್ದ ಬೈಕ್ ಅನ್ನು ದಿಲೀಪ್ ಎತ್ತಿಕೊಂಡು ಹೋಗುತ್ತಿದ್ದಾಗ ಮುರುಕನ್ ಮ-ಚ್ಚಿನಿಂದ ಕ-ತ್ತು ಕೊ-ಯ್ದಿದ್ದನು. ಈ ವೇಳೆಯಲ್ಲಿ ಸ್ಥಳದಿಂದ ಪರಾರಿಯಾಗುತ್ತಿದ್ದಂತೆ ಮುರುಕನ್ ನನ್ನು ನಂತರ ಬಂಧಿಸಲಾಯಿತು’ ಎಂದು ಪೊಲೀಸರು ತಿಳಿಸಿದ್ದರು. ಇತ್ತ ತೀ-ವ್ರ ಗಾ-ಯಗೊಂಡ ದಿಲೀಪ್ ಅವರನ್ನು ಚಿರಾಯಂಕಿಝು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃ-ತಪಟ್ಟಿದ್ದನು.
ರ-ಕ್ತದ ಕಲೆ ಇರುವ ಅಂಗಿಯೊಂದಿಗೆ ಮುರುಕನ್ ಓಡಿಹೋಗುವುದನ್ನು ಕಂಡ ಇಬ್ಬರು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಹೇಳಿಕೆ ನೀಡಿದ್ದರು. ಆ-ರೋಪಿಗಳು ಸ್ಥಳದಲ್ಲಿ ಬಿಟ್ಟು ಹೋಗಿದ್ದ ಬೈಕ್ ವ-ಶ ಪಡಿಸಿಕೊಂಡಿದ್ದು, ಅತ್ತಿಂಗಲ್ ಡಿವೈಎಸ್ಪಿ ಆರ್.ಚಂದ್ರಶೇಖರನ್ ಪಿಳ್ಳೈ ನೇತೃತ್ವದ ತಂಡ ಅವರನ್ನು ಬಂಧಿಸಿದ್ದರು.