ಧ್ರುವ ಸರ್ಜಾ ಮಗನ ಜನನ. ಲಕ್ಷಕ್ಕೆ ಒಬ್ಬರು ಮಾತ್ರ ಈ ಯೋಗದಲ್ಲಿ ಹುಟ್ಟಕ್ಕೆ ಸಾಧ್ಯ!! ಎಂಥ ಯೋಗ ಇದು ನೋಡಿ ಶಾಕ್ ಆಗುತ್ತೀರಾ !!

ಸ್ಯಾಂಡಲ್‌ವುಡ್‌ ನಟ ಆಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ (Action Prince Dhruva Sarja) ಕುಟುಂಬದಲ್ಲೀಗ ಗೌರಿ ಗಣೇಶ ಹಬ್ಬದಂದು ಸಂಭ್ರಮ ಮನೆ ಮಾಡಿದೆ. ಹಬ್ಬದ ಸಂಭ್ರಮದ ನಡುವೆಯೇ ಈ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಧ್ರುವ ಅವರ ಪತ್ನಿ ಪ್ರೇರಣಾ (Dhruva wife Prerana) ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ನಿನ್ನೆ ಮುಂಜಾನೆ ಪ್ರೇರಣಾ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆ (Banglore Private Hospital) ಗೆ ದಾಖಲು ಮಾಡಲಾಗಿತ್ತು. ಆದರೆ ಇದೀಗ ಎಲ್ಲರೂ ಅಂದುಕೊಂಡಂತೆ ದಂಪತಿಗಳು ಗಂಡು ಮಗುವಿಗೆ ತಂದೆ ತಾಯಿಯಾಗಿಯಾಗಿದ್ದು ಕುಟುಂಬದ ಸಂತಸವನ್ನು ಇನ್ನಷ್ಟು ಹೆಚ್ಚು ಮಾಡಿದೆ. ಪ್ರೇರಣಾ ಸರ್ಜಾ ಹಾಗೂ ಮಗುವನ್ನು ನೋಡಲು ಮೇಘನಾ ರಾಜ್​ (Meghana Raj), ಸುಂದರ್​ ರಾಜ್​ (Sundar Raj), ಪ್ರಮೀಳಾ ಜೋಶಾಯ್​ (Pramila Joshay) ಮುಂತಾದವರು ಆಗಮಿಸಿದ್ದಾರೆ.

ಹಿರಿಯ ನಟ ಸುಂದರ್​ ರಾಜ್​ ಅವರು ಮಾಧ್ಯಮದೊಂದಿಗೆ ಮಾತನಾಡಿದ್ದು, ‘ಈಗಾಗಲೇ ಅವರ ಮನೆಗೆ ಗೌರಿ ಬಂದಾಯಿತು. ಈಗ ಗಣೇಶ ಬಂದಿದ್ದಾನೆ. ಯಾವುದೇ ಹೊಸ ಪರ್ವ ಬಂದಾಗ ಕುಟುಂಬಕ್ಕೆ ಸಂತೋಷ ನೀಡುತ್ತದೆ. ಈ ಮಗು ಗಜಕೇಸರಿ ಯೋಗದಲ್ಲಿ (Gajakesari Yoga) ಹುಟ್ಟಿದೆ. ಬಹಳ ದಿನಗಳಿಂದ ನಮ್ಮಲ್ಲಿ ಕವಿದಿದ್ದ ವಾತಾವರಣ ಮರೆಯಾಗಿ, ಬಿಳಿ ಮೋಡಗಳು ಬಂದಿವೆ. ಇದನ್ನು ನಾವು ನಿರೀಕ್ಷಿಸಿದ್ದೆವು. ದೇವರು ಇದ್ದಾನೆ ಎಂಬುದನ್ನು ಇದು ಸೂಚಿಸುತ್ತದೆ’ ಎಂದಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ನಟ ಧ್ರುವ ಸರ್ಜಾ ತಮ್ಮ ಫಾರ್ಮ್‌ ಹೌಸ್‌ (Farm House) ನಲ್ಲಿ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ಮಾಡಿದ್ದರು. ಶ್ರೀಕೃಷ್ಣ ಜನ್ಮಾಷ್ಟಮಿ (Shreekrishana Janmastami) ದಿನ ಅಣ್ಣ ಚಿರಂಜೀವಿ ಸರ್ಜಾ ಸಮಾಧಿ ಇರುವ ಫಾರ್ಮ್‌ ಹೌಸ್‌ನಲ್ಲಿ ಸೀಮಂತ ಶಾಸ್ತ್ರ ಮಾಡಿದ್ದು, ಈ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.

ಈ ವಿಡಿಯೋದ ಜೊತೆಗೆ ನಟ ಧ್ರುವ ಸರ್ಜಾ (Dhruva Sarja)ರವರು “ಐ ಲವ್ ಯು ಮೈ ವೈಫ್‌. ಈ ವರ್ಷ ಕೃಷ್ಣ ಜನ್ಮಾಷ್ಟಮಿ ನಮ್ಮ ಕೊಂಚ ಎಕ್ಸಟ್ರಾ ಸ್ಪೆಷಲ್ ಆಗಿತ್ತು. ಆಪ್ತರು ಈ ಕಾರ್ಯಕ್ರದಲ್ಲಿ ಭಾಗಿಯಾಗಿದ್ದರು’ ಎಂದು ಬರೆದುಕೊಂಡಿದ್ದರು. ಅದಲ್ಲದೆ ಈ ವಿಡಿಯೋ ನೋಡಿದ ನೆಟ್ಟಿಗರು ಜ್ಯೂನಿಯರ್ ಧ್ರುವ ಸರ್ಜಾ ಪಕ್ಕಾ ಎಂದಿದ್ದರು. ಆದರಂತೆ ಸರ್ಜಾ ಕುಟುಂಬಕ್ಕೆ ಮರಿ ಧ್ರುವ ಸರ್ಜಾನ ಆಗಮನವಾಗಿದ್ದು ಈ ಸುದ್ದಿಯು ಫ್ಯಾನ್ಸ್ ಗಳ ಸಂತೋಷವನ್ನು ದುಪ್ಪಟ್ಟು ಮಾಡಿದೆ.

Leave a Reply

Your email address will not be published. Required fields are marked *