ರಾಜ್ಯ ಮಾತ್ರವಲ್ಲದೆ ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿಯು ಸದ್ದು ಮಾಡುತ್ತಿರುವ ವಿಚಾರವೆಂದರೆ ಅದುವೇ ಧರ್ಮಸ್ಥಳದ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಾಳ ಅ-ತ್ಯಾಚಾರ ಮತ್ತು ಕೊ-ಲೆ ಪ್ರಕರಣ (Sowjanya R-ape and M-urder Case) . ಹನ್ನೊಂದು ವರ್ಷಗಳ ನಡೆದ ಈ ಪ್ರಕರಣಕ್ಕೆ ಇನ್ನು ನ್ಯಾಯ ಸಿಕ್ಕಿಲ್ಲ.
ಹೀಗಾಗಿ ಸೌಜನ್ಯಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಕೆಗೆ ನ್ಯಾಯ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಸಾಕಷ್ಟು ಜನರು ಕೈ ಜೋಡಿಸಿದ್ದು ಪ್ರ-ತಿಭಟನೆಗಳು ಹಾಗೂ ಹೋ-ರಾಟಗಳು ನಡೆಯುತ್ತಲೇ ಇದೆ. ಸೌಜನ್ಯಾ ಮೇಲೆ ಅ-ತ್ಯಾಚಾರ ಆರೋಪಿ ಸಂತೋಷ್ ರಾವ್ (Santhosh Rao) ವಿರುದ್ದ ಸಿಬಿಐ ಅಧಿಕಾರಿಗಳು ಆರೋಪ ಸಾಬೀತು ಪಡಿಸಲು ವಿಫಲರಾಗಿದ್ದರು.
ಯಾವುದೇ ಸರಿಯಾದ ಸಾಕ್ಷಿ ಆಧಾರವಿಲ್ಲದ ಕಾರಣ, ಬೆಂಗಳೂರು ಸಿಬಿಐ ಕೋರ್ಟ್ (CBI Court) , ಸಂತೋಷ್‌ರಾವ್‌ನನ್ನು ನಿರ್ದೋಷಿ ಎಂದು ತೀರ್ಪು ನೀಡಿತ್ತು. ಈ ತೀರ್ಪಿನ ಬಳಿಕ ಸಂತೋಷ್ ರಾವ್ ನಿ-ರಾಪರಾಧಿ ಎಂದು ಬಿಡುಗಡೆಯಾಗಿ ಹೊರ ಬಂದಿದ್ದನು.ಆದಾದ ಬಳಿಕ ಸಿಬಿಐಗೆ ಮೇಲ್ಮನವಿ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗಿತ್ತು. ಈ ಅರವತ್ತು ದಿನಗಳು ಆಗಿ ಎರಡು ತಿಂಗಳಿಗೂ ಮೇಲಾಗಿದೆ.
ಇದೀಗ ಧರ್ಮಸ್ಥಳ ಸೌಜನ್ಯ ಅ-ತ್ಯಾಚಾರ ಮತ್ತು ಕೊ-ಲೆ ಪ್ರಕರಣಕ್ಕೆ (Dharmasthala Soujanya R-ape and M-urder case) ಸಂಬಂಧ ಪಟ್ಟಂತೆ ಸಿಬಿಐ ವಿಶೇಷ ಕೋರ್ಟ್ ತೀರ್ಪನ್ನು ಪ್ರಶ್ನಿಸಲಾಗಿದ್ದು, ಮರು ಪರಿಶೀಲನೆ ಮಾಡುವಂತೆ ಮೇಲ್ಮನವಿ ಸಲ್ಲಿಸಲಾಗಿದೆ.ಈ ಪ್ರಕರಣದಲ್ಲಿ ನಿರಪರಾಧಿ ಎಂದು ಬಿಡುಗಡೆ ಯಾಗಿರುವ ಸಂತೋಷ್ ರಾವ್ ಅವರೇ ನಿಜವಾದ ಅ-ಪರಾಧಿ ಎಂದು ಸಿಬಿಐ ಹೇಳಿದ್ದು, ಅವರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಅಗತ್ಯ ಸಾಕ್ಷ್ಯಾಧಾರಗಳನ್ನು ಸಲ್ಲಿಸುವುದಾಗಿ ತಿಳಿಸಿದೆ.
ಸದ್ಯಕ್ಕೆ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ರಾಜ್ಯದಲ್ಲಿ ಪ್ರ-ತಿಭಟನೆಗಳು ನಡೆಯುತ್ತಿದ್ದು ಸಂತೋಷ್ ಅವರೇ ಆರೋಪಿ ಎನ್ನಲಾಗುತ್ತಿದ್ದು, ಮರು ತ-ನಿಖೆಯ ಬಳಿಕವಷ್ಟೇ ಈ ಪ್ರಕರಣ ನಿಜವಾದ ಆ-ರೋಪಿ ಸಂತೋಷ್ ರಾವ್? ಅಥವಾ ಈ ಮೂವರು ನಿಜವಾದ ಆರೋಪಿಗಳಾ ಎನ್ನುವುದನ್ನು ಕಾದು ನೋಡಬೇಕು ಅಷ್ಟೇ.