ಸೋಶಿಯಲ್ ಮೀಡಿಯಾ ಇಂದು ಕೇವಲ ಮನೋರಂಜನೆಗಾಗಿ ಮಾತ್ರ ಉಳಿದಿಲ್ಲ ಸೋಶಿಯಲ್ ಮೀಡಿಯಾದಿಂದ ಸಾಕಷ್ಟು ಜನ ತಮ್ಮ ವೃತ್ತಿ ಬದುಕನ್ನೇ ಕಟ್ಟಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಂತಹ ಪ್ಲಾಟ್ ಫಾರ್ಮ್ ಗಳು ಸಾಕಷ್ಟು ಯುವಕ ಯುವತಿಯರಿಗೆ ಹಣ ಸಂಪಾದನೆ ಮಾಡುವ ಒಂದು ವೇದಿಕೆಯು ಆಗಿದೆ. ಇನ್ಸ್ಟಾಗ್ರಾಮ್ ನಲ್ಲಿ ಫಾಲೋವರ್ಸ್ ಹೆಚ್ಚಾಗುತ್ತಿದ್ದಂತೆ ಅವರ ಪಾಪ್ಯುಲಾರಿಟಿ ಕೂಡ ಹೆಚ್ಚಾಗುತ್ತದೆ.
ಆಗ ಪ್ರಮೋಶನ್ ವಿಡಿಯೋ ಮಾಡುವುದಕ್ಕೆ ಬೇರೆ ಬೇರೆ ಕಂಪನಿಗಳು ಅಪ್ರೋಚ್ ಮಾಡುತ್ತಾರೆ. ಹೀಗೆ ಪ್ರಮೋಷನ್ ವಿಡಿಯೋಗಳನ್ನು ಮಾಡಿ ತಿಂಗಳಿಗೆ ಲಕ್ಷಾಂತರ ಹಣ ದುಡಿಯುವವರು ಇದ್ದಾರೆ. ಅಂಥವರಲ್ಲಿ ರೀಲ್ಸ್ ಮಾಡುವುದರ ಮೂಲಕವೇ ಹೆಚ್ಚು ಫೇಮಸ್ ಆಗಿ ಇಂದು ಸೋಶಿಯಲ್ ಮೀಡಿಯಾ ಇನ್ಫ್ಲುಎನ್ಸರ್ ಎಂದು ಕರೆಸಿಕೊಳ್ಳುವ ಧನುಶ್ರೀ ಕೂಡ ಒಬ್ಬರು.
ಬಿಗ್ ಬಾಸ್ ಮನೆಗೆ ಸೋಶಿಯಲ್ ಮೀಡಿಯಾದ ಮೂಲಕ ಹೆಸರು ಗಳಿಸಿರುವ ಧನುಶ್ರೀ ಕೂಡ ಸ್ಪರ್ಧಿಯಾಗಿ ಹೋಗಿದ್ದರು. ಆದರೆ ಅವರು ಹೆಚ್ಚು ದಿನ ಬಿಗ್ ಬಾಸ್ ಮನೆಯಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಅಲ್ಲಿರುವವರ ಜೊತೆ ಸರಿಯಾಗಿ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗದೆ ಮೊದಲನೇ ವಾರದಲ್ಲಿಯೇ ಧನುಶ್ರೀ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಾರೆ.
ಸಿನಿಮಾಗಳಲ್ಲಿ ಅಭಿನಯಿಸಬೇಕು, ದೊಡ್ಡ ಹೆಸರು ಮಾಡಬೇಕು ಎನ್ನುವ ಕನಸು ಹೊಂದಿರುವ ಧನುಶ್ರೀ ಸಂದರ್ಶನ ಒಂದರಲ್ಲಿ ತಾವು ಇನ್ಸ್ಟಾಗ್ರಾಮ್ ನಲ್ಲಿ ಹಣ ಮಾಡಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಲಾಕ್ಡೌನ್ ಟೈಮ್ ನಲ್ಲಿ ನಾನು ಕೆಲಸ ಬಿಟ್ಟಿದ್ದೆ ಸ್ವಲ್ಪ ಸೇವಿಂಗ್ಸ್ ಇತ್ತು. ಆದರೂ ಅವೆಲ್ಲವೂ ಖಾಲಿ ಆಗಿತ್ತು, ನಂತರ ಒಂದು ಸಾವಿರ ರೂಪಾಯಿ ಸಿಕ್ಕರೂ ಸಾಕು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆ ಸಮಯದಲ್ಲಿ ನನಗೆ ಇನ್ಸ್ಟಾಗ್ರಾಮ್ ನಿಂದ ಪ್ರಮೋಷನ್ ಮಾಡಿದ್ದಕ್ಕಾಗಿ 25,000 ರೂ. ಬಂದವು. ನನ್ನ ಇನ್ಸ್ಟಾಗ್ರಾಮ್ ಖಾತೆಯನ್ನು ಮಧ್ಯಪ್ರದೇಶದವರು ಹ್ಯಾಂಡಲ್ ಮಾಡುತ್ತಿದ್ದು, ಅವರು ನನಗೆ ಈ ದೊಡ್ಡ ಪ್ರಾಜೆಕ್ಟ್ ಕೊಡಿಸಿದ್ದರು. ಒಂದುವರೆ ಸಾವಿರಕ್ಕೆ ನಾನು ಆ ಪ್ರಮೋಷನ್ ಮಾಡಲು ಒಪ್ಪಿಕೊಂಡಿದ್ದೆ ಆದರೆ ಅವರು ನನಗೆ 25,000ರೂ.ಗಳನ್ನು ಕೊಡಿಸಿದ್ದರು. ಅಲ್ಲಿಂದ ನನಗೆ ಇನ್ಸ್ಟಾಗ್ರಾಮ್ ಮೂಲಕವೂ ಇಷ್ಟೊಂದು ಹಣ ಮಾಡಬಹುದಾ ಎನ್ನುವುದು ಅರಿವಾಯಿತು.
ಆಗಲೇ ಟಿಕ್ ಟಾಕ್ ಮೂಲಕ ಸಾಕಷ್ಟು ರೀಲ್ಸ್ ಮಾಡಿದ ನನಗೆ ಇನ್ಸ್ಟಾಗ್ರಾಮ್ ನಲ್ಲಿ ಇನ್ನಷ್ಟು ಪ್ರಚಾರ ಸಿಕ್ಕಿತ್ತು. ಎಂದು ಧನುಶ್ರೀ ಹೇಳಿಕೊಂಡಿದ್ದಾರೆ. ಇನ್ನು ಸಿನಿಮಾ ರಂಗದಲ್ಲಿ ಹೆಸರು ಮಾಡಲು ಮುಂದಾಗಿರುವ ಧನುಶ್ರೀ ಸಿನಿಮಾದಲ್ಲಿ ಈಗಾಗಲೇ ನಟನೆಗೆ ಆಹ್ವಾನ ಬಂದಿದೆ ಎಂದಿದ್ದಾರೆ. ಇನ್ನು ತಾನು ಎಷ್ಟೇ ದೊಡ್ಡ ಸ್ಟಾರ್ ನಟಿ ಎನಿಸಿಕೊಂಡರು ಕೂಡ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುವುದನ್ನು ಬಿಡುವುದಿಲ್ಲ.
ನನ್ನ ಕಷ್ಟದ ಸಮಯದಲ್ಲಿ instagram ಸಹಾಯ ಮಾಡಿದೆ. ನಾನು ಬೇರೆ ವೃತ್ತಿಯಲ್ಲಿ ಬ್ಯುಸಿ ಆದರೆ ಈಗಿನಷ್ಟು ಮಾಡಲು ಸಾಧ್ಯವಾಗದೇ ಇರಬಹುದು ಆದರೆ ನನ್ನ ಮನಸ್ಸಿನ ಸಂತೋಷಕ್ಕಾದರೂ ರೀಲ್ಸ್ ಮಾಡೋದನ್ನ ಬಿಡುವುದಿಲ್ಲ ಎಂದು ಧನುಶ್ರೀ ಹೇಳಿಕೊಂಡಿದ್ದಾರೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟದ ಪರೀಕ್ಷೆಗೆ ಮುಂದಾಗಿರುವ ಧನುಶ್ರೀ ಮುಂಬರುವ ದಿನಗಳಲ್ಲಿ ಬೇರೆ ಭಾಷೆಗಳಲ್ಲಿಯೂ ಕೂಡ ಅಭಿನಯಿಸಬಹುದು.