ರಾಶಿ ಚಕ್ರದಲ್ಲಿ ಗ್ರಹಗಳು, ನಕ್ಷತ್ರಗಳ ಸ್ಥಾನ ಪಲ್ಲಟವು ರಾಶಿಗಳ ಮೇಲೆ ಧನಾತ್ಮಕ (Positive) ಹಾಗೂ ಋಣಾತ್ಮಕ (Negative) ಬದಲಾವಣೆಗಳನ್ನು ತರುತ್ತದೆ. ಸೆಪ್ಟೆಂಬರ್ 18, 2023 ರಿಂದ ಬುಧ ಮತ್ತು ಶನಿದೇವ ಏಳನೇ ಅಂಶದಲ್ಲಿ ಪರಸ್ಪರ ಸಂಯೋಗವಾಗಿದ್ದಾರೆ. ಈ ಸಂಯೋಗದಿಂದ ಧನ ರಾಜಯೋಗ (Dhana Rajayoga) ವೂ ರೂಪುಗೊಂಡಿದ್ದು, ಇದು ಎಲ್ಲಾ ರಾಶಿಗಳ ಜನರ ಮೇಲೆ ಪರಿಣಾಮವನ್ನು ಬೀರುತ್ತಿದೆ.
ಹೀಗಾಗಿ ಶನಿದೇವನ ಪ್ರಭಾವ ಸಾಮಾನ್ಯವಾಗಿ ಒಂದೂವರೆ ವರ್ಷಗಳ ಕಾಲ ರಾಶಿಗಳ ಇರಲಿದ್ದು, 3 ರಾಶಿಗಳ ಜನರಿಗೆ ಭಾರಿ ಲಾಭ (Profit) ವನ್ನು ನೀಡುತ್ತದ. ಹಾಗಾದ್ರೆ ಶನಿಯ ದಯೆಯು ಯಾವ ರಾಶಿಗಳ ಮೇಲೆ ಇದೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

ಮೇಷ ರಾಶಿ : ಶನಿ ಮತ್ತು ಬುಧನ ಸಂಯೋಗದಿಂದ ಉಂಟಾ ಗಿರುವ ಈ ಧನ ರಾಜಯೋಗವು ಮೇಷ ರಾಶಿಯವರಿಗೆ ಶುಭ ಫಲಗಳನ್ನು ನೀಡುತ್ತವೆ. ಈ ಜನರು ಕೆಲಸ ಕಾರ್ಯಗಳಲ್ಲಿ ಯಶಸ್ವಿಯಾಗುತ್ತಾರೆ. ಈ ಧನರಾಜಯೋಗದಿಂದ ಶುಭ ಸುದ್ದಿಗಳನ್ನು ಕೇಳಲಿದ್ದಾರೆ. ಯಾವುದೇ ಕೆಲಸ ಕಾರ್ಯಗಳಿಗೆ ಕೈ ಹಾಕಿದರೂ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನಬಹುದು.
ವೃಷಭ ರಾಶಿ : ಈ ಧನ ರಾಜಯೋಗವು ವೃಷಭ ರಾಶಿಯವರಿಗೆ ಲಾಭದಾಯಕವಾಗಿರಲಿದೆ. ಹೊಸ ಉದ್ಯೋಗವನ್ನು ಅರಸುತ್ತಿರಬಹುದು. ಬಡ್ತಿಯಿಂದ ಸಂಬಳವು ಹೆಚ್ಚಾಗಿ ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ. ಎಲ್ಲಾ ಸಮಸ್ಯೆಗಳು ದೂರವಗು ಕುಟುಂಬದಲ್ಲಿ ಸುಖ ಶಾಂತಿ, ನೆಮ್ಮದಿ ಹಾಗೂ ಸಂತೋಷ ನೆಲೆಸಿರುತ್ತದೆ.
ತುಲಾ ರಾಶಿ : ತುಲಾ ರಾಶಿಯವರಿಗೂ ಈ ಧನ ರಾಜಯೋಗವು ದಿನವನ್ನು ಉತ್ತಮವಾಗಿಡುವಂತೆ ಮಾಡುತ್ತದೆ. ಬುಧ ಮತ್ತು ಶನಿಯ ಕೃಪೆಯಿಂದ ಈ ರಾಶಿಯವರು ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುತ್ತಾರೆ. ಹಳೆಯ ಹೂಡಿಕೆಯಿಂದ ಉತ್ತಮ ಲಾಭವನ್ನು ಪಡೆಯಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭವನ್ನು ಪಡೆಯಲಿದ್ದಾರೆ. ಅದಲ್ಲದೇ ಆದಾಯದ ಮೂಲಗಳು ಹೆಚ್ಚಾಗಲಿದೆ.