ಇತ್ತೀಚೆಗಿನ ದಿನಗಳಲ್ಲಿ ಮನುಷ್ಯನ ಆದ್ಯತೆಗಳು, ಆಯ್ಕೆಗಳು, ಮನಸ್ಥಿತಿ ಎಲ್ಲವೂ ಬದಲಾಗಿ ಬಿಟ್ಟಿವೆ. ವಿದ್ಯಾವಂತನಾಗಿದ್ದರೂ ಕೂಡ ಸಂಬಂಧದ ಮೌಲ್ಯವು ತಿಳಿಯುತ್ತಿಲ್ಲ. ತನ್ನ ಸಂತೋಷಕ್ಕಾಗಿ ಏನು ಬೇಕಾದರೂ ಸಿದ್ಧವಾಗಿದ್ದು, ಸಮಾಜದಲ್ಲಿ ಕೆಲವು ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ಎಲ್ಲರನ್ನು ಬೆಚ್ಚಿ ಬೀಳಿಸುತ್ತದೆ. ಈ ಹಿಂದೆಯಷ್ಟೇ ಯುವಕನೊಬ್ಬ ತನ್ನ ಗೆಳತಿಯ ಮೇಲೆ ಅನುಮಾನ ಪಟ್ಟು ಕೊಡಲಿಯಿಂದ ಹ-ತ್ಯೆಗೈದಿದ್ದನು.
ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು. ತನ್ನ ಗೆಳತಿಯ ವಾಟ್ಸಾಪ್ ಅನ್ನು ಹ್ಯಾಕ್ ಮಾಡಿದ ನಂತರದಲ್ಲಿ ಯುವಕನು ತನ್ನ ಗೆಳತಿಗೆ ಬೇರೆಯವರ ಜೊತೆಗೆ ಸಂಬಂಧವಿದೆ ಎಂದು ಎಂದು ನಂಬಿದ್ದನು ಎಂದು ವರದಿಯಾಗಿತ್ತು. ಕಳೆದ ವರ್ಷ ಸೆಪ್ಟೆಂಬರ್ 22ರಂದು ಸೇತುವೆಯೊಂದರ ಬಳಿ ಯುವತಿಯ ಶ-ವ ಪತ್ತೆಯಾದಾಗ ಈ ವಿಚಾರವು ಬೆಳಕಿಗೆ ಬಂದಿತ್ತು.
ನಂತರ ಪೊಲೀಸರನ್ನು ಕರೆಸಲಾಗಿತ್ತು. ಘಟನಾ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಈ ಬಗ್ಗೆ ತನಿಖೆ ಆರಂಭಿಸಿದ್ದರು. ಮೃ-ತ ಪಟ್ಟ ಯುವತಿಯನ್ನು 24 ವರ್ಷದ ದೇವಕಿ ಚಕ್ರೇಶ್ ಕಥೆ ಎಂದು ಗುರುತಿಸಲಾಗಿತ್ತು. ಪೊಲೀಸರು ಕೊಡಲಿ, ಸ್ಕೂಟರನ್ನು ವಶಪಡಿಸಿಕೊಂಡಿದ್ದರು. ಈ ವಿಚಾರವನ್ನು ಅಧಿಕಾರಿಗಳು ನಡೆದ ವಿಷಯವನ್ನು ಮೃ-ತ ಯುವತಿಯ ಕುಟುಂಬಕ್ಕೆ ತಿಳಿಸಿದ್ದರು.
ತದನಂತರದಲ್ಲಿ ಕುಟುಂಬ ಸದಸ್ಯರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಮನೋಜ್ ಕುಮಾರ್ ಎಂಬ ವ್ಯಕ್ತಿಯೊಂದಿಗೆ ದೇವಕಿ ಸಂಬಂಧ ಹೊಂದಿದ್ದಳು ಎಂದು ಅಧಿಕಾರಿಗಳಿಗೆ ತಿಳಿಸಿದ್ದರು. ಹೀಗಿರುವಾಗ ಪೊಲೀಸರು ಕುಮಾರ್‌ಗಾಗಿ ಹುಡುಕಾಟ ಆರಂಭಿಸಿದ್ದರು.ಆತನನ್ನು ಪತ್ತೆ ಹ-ಚ್ಚಿದ ಮೇಲೆ ಕುಮಾರ್‌ನನ್ನು ವ-ಶಕ್ಕೆ ಪಡೆಯಲಾಗಿತ್ತು. ವಿಚಾರಣೆ ವೇಳೆ ಯುವತಿಯ ಕಥೆ ಮುಗಿಸಿರುವುದಾಗಿ ಕುಮಾರ್ ಒಪ್ಪಿಕೊಂಡಿದ್ದನು. ಅದಲ್ಲದೇ, ತನಗೂ ದೇವಕಿಗೂ ನಾಲ್ಕು ವರ್ಷಗಳಿಂದ ಸಂಬಂಧವಿತ್ತು. ದೇವಕಿ ಮೊದಲಿಗಿಂತ ಸ್ವಲ್ಪ ಭಿನ್ನವಾಗಿಯೇ ವರ್ತಿಸುತ್ತಿದ್ದಳು.
ಹೀಗಾಗಿ ಮನೋಜ್ ಕುಮಾರ್‌ಗೆ ದೇವಕಿಯ ಮೇಲೆ ಅ-ನುಮಾನ ಶುರುವಾಗಿತ್ತು. ಹೀಗಿರುವಾಗ ಮನೋಜ್ ಕುಮಾರ್ ತನ್ನ ಗೆಳತಿಯ ವಾಟ್ಸಾಪ್ ಅನ್ನು ಹ್ಯಾ-ಕ ಮಾಡಿ ಇನ್ನೊಬ್ಬ ವ್ಯಕ್ತಿಗೆ ಆಕೆಯ ಸಂದೇಶಗಳನ್ನು ಪತ್ತೆ ಮಾಡಿದೆ. ಹೀಗಾಗಿ ಆಕೆಯ ಜೀ-ವ ತೆಗೆಯಲು ಮುಂದಾದೆ ಎಂದು ಪೊಲೀಸರಿಗೆ ತಿಳಿಸಿದ್ದನು.
ಒಂದು ದಿನ ದೇವಕಿಯೊಂದಿಗೆ ಮಾತನಾಡುತ್ತಾ, ಶಾಪಿಂಗ್ ಟ್ರಿಪ್‌ಗಾಗಿ ರಾಯಪುರಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದನು. ಅದರಂತೆ ಮನೋಜ್ ಕುಮಾರ್ ದೇವಕಿಯ ಜೊತೆಗೆ ತೆರಳುತ್ತಿದ್ದ ವೇಳೆಯಲ್ಲಿ ವಾಹನ ನಿಲ್ಲಿಸಿ ಕೊಡಲಿಯನ್ನು ಹೊರತೆಗೆದು ದೇವಕಿಯನ್ನು ಹೊಡೆದು ಜೀ-ವ ತೆ’ಗೆದಿದ್ದನು. ತಕ್ಷಣಕ್ಕೆ ಕೊ-ಡಲಿಯನ್ನು ಎ-ಸೆದು ತನ್ನ ಸ್ಕೂಟರ್‌ನಲ್ಲಿ ಸ್ಥಳದಿಂದ ಪ-ರಾರಿಯಾಗಿದ್ದನು. ಅಕ್ಕಪಕ್ಕದಲ್ಲಿದ್ದ ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಕರೆ ಮಾಡಿದ್ದರು. ಮನೋಜ್ ಕುಮಾರ್ ನನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.