ಮಲ ಮಗಳು ಮತ್ತು ಮಲ ಸೊಸೆಯ ಮೇಲೆ ಕಣ್ಣು ಹಾಕಿದ ಭೂಪ!! ಇದರಿಂದ ಕುಪಿತಗೊಂಡ ಪತ್ನಿ ಹಾಗೂ ಮಲಮಗ ಸೇರಿ ಮಾಡಿದ್ದೇನು ಗೊತ್ತಾ!!

Delhi anjan das : ಶ್ರದ್ಧಾ ವಾಕರ್ ಹ-ತ್ಯೆ ಪ್ರಕರಣವು ಹಸಿಯಾಗಿರುವಾಗಲೇ ಎಲ್ಲರ ಮೈ ಜುಮ್ಮ್ ಎನಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ದೆಹಲಿಯ ತ್ರಿಲೋಕಪುರಿಯಲ್ಲಿ ನಡೆದ ಅಂಜನ್ ದಾಸ್ ಹ-ತ್ಯೆಯನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ. ಅಂಜನ್ ದಾಸ್ ಕಥೆ ಮುಗಿಸಿ ಆತನ ದೇಹವನ್ನು ಶ್ರದ್ಧಾ ಎಂಬಂತೆ ತುಂಡರಿಸಲಾಗಿತ್ತು. ಪೊಲೀಸರಿಗೆ ಸಿಕ್ಕ ಮಾಹಿತಿ ಪ್ರಕಾರ ಅಂಜನ್ ತನ್ನ ಮಲಮಗನ ಹೆಂಡತಿ ಮತ್ತು ವಿಚ್ಛೇದಿತ ಮಲಮಗಳ ಮೇಲೆ ಕಣ್ಣಿಟ್ಟಿದ್ದನು.

ಇದರಿಂದ ಕೋಪಗೊಂಡ ಪತ್ನಿ ಹಾಗೂ ಮಲಮಗ ಸೇರಿ ಕೊಲೆ ಮಾಡಿದ್ದಾರೆ. ಅಂಜನ್ ದಾಸ್ ಕಥೆ ಮುಗಿಸಿ ಮಿಲೇಕಾ ಅವನ ದೇಹವನ್ನು ಹತ್ತು ತುಂಡುಗಳಾಗಿ ಕತ್ತರಿಸಿ ದೆಹಲಿಯ ವಿವಿಧ ಭಾಗಗಳಲ್ಲಿ ಎಸೆದಿದ್ದಾರೆ. ಮೇ 30 ರಂದು ಅಂಜನ್ ದಾಸ್ ಅವರನ್ನು ಅವರ ಪತ್ನಿ ಮತ್ತು ಮಲಮಗ ಕೊ-ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊ-ಲೆಗೂ ಮುನ್ನ ಅಂಜನ್ ಮಾದಕ ದ್ರವ್ಯ ಸೇವಿಸಿದ್ದರು. ಕೆಲವು ಔಷಧಿಗಳನ್ನು ಮದ್ಯದೊಂದಿಗೆ ಬೆರೆಸಿಕೊಡಲಾಗಿತ್ತು.

ಇದರಿಂದ ಆತನಿಗೆ ಪ್ರಜ್ಞೆ ತಪ್ಪಿತ್ತು. ಆ ವೇಳೆಯಲ್ಲಿ ಈ ಇಬ್ಬರೂ ಸೇರಿ ಮೊದಲು ಅಂಜನ್ ತಲೆ ಕ-ತ್ತರಿಸಿದ್ದಾರೆ. ಅಂಜನ್ ದೇಹ ಸಂಪೂರ್ಣವಾಗಿ ರಕ್ತಸ್ರಾವವಾದ ನಂತರ, ಇಬ್ಬರೂ ದೇಹವನ್ನು 10 ತುಂಡುಗಳಾಗಿ ಕ-ತ್ತರಿಸಿ ದೆಹಲಿಯ ವಿವಿಧ ಭಾಗಗಳಲ್ಲಿ ಎಸೆದಿದ್ದಾರೆ.ಡಿಸಿಪಿ (ಅಪರಾಧ) ಅಮಿತ್ ಗೋಯಲ್ ಅವರು ಅಂಜನ್ ದಾಸ್ ಬಿಹಾರ ಮೂಲದವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಂಜನ್ ದಾಸ್ ಅವರಿಗೆ ಆಗಲೇ ಮದುವೆಯಾಗಿತ್ತು.

ಅಂಜನ್ ದಾಸ್ ಲಿಫ್ಟ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲ, ಅಂಜನ್‌ಗೆ ಈಗಾಗಲೇ 8 ಮಕ್ಕಳಿದ್ದರು. ಪೂನಂ ಅವರ ಎರಡನೇ ಪತ್ನಿ. ಪೂನಂ 2011ರಲ್ಲಿ ಅಂಜನ್ ಅವರನ್ನು ಭೇಟಿಯಾಗಿದ್ದು, 2017ರಲ್ಲಿ ಇಬ್ಬರು ಮದುವೆಯಾಗಿದ್ದರು. ಪೂನಂ ಜೊತೆ ಮದುವೆಯಾದ ನಂತರ ಆಕೆಯ ಒಡವೆಗಳನ್ನು ಮಾರಿ ಹಣವನ್ನು ಬಿಹಾರಕ್ಕೂ ಕಳುಹಿಸಿದ್ದರು. ಆದರೆ ಮಲ ಸೊಸೆ (ದೀಪಕ್ ಪತ್ನಿ) ಹಾಗೂ ಮಲ ಮಗಳ ಮೇಲೆ ಕಣ್ಣು ಇಟ್ಟಿದ್ದರಿಂದ ಅಂಜನ್ ನನ್ನು ಕೊ-ಲ್ಲಲು ಸಂಚು ರೂಪಿಸಲಾಗಿತ್ತು.

ಆದರೆ, ದೀಪಕ್ ಅಂಜನ್ ದಾಸ್ ಅಥವಾ ಪೂನಂ ಅವರ ಮಗನಲ್ಲ ಎಂದು ದೆಹಲಿಯ ವಿಶೇಷ ಸಿಪಿ ರವೀಂದ್ರ ಯಾದವ್ ಹೇಳಿದ್ದಾರೆ.ರವೀಂದ್ರರವರು ಹೇಳುವಂತೆ ಪೂನಂ ಕಥೆ ಆರಂಭವಾಗುವುದು ಬಿಹಾರದಿಂದ. ಅವರು 13-14 ವರ್ಷದವಳಿದ್ದಾಗ ಸುಖದೇವ್ ತಿವಾರಿ ಅವರನ್ನು ವಿವಾಹವಾದರು. ಆಕೆಗೆ ಸುಖದೇವ್ ತಿವಾರಿ ಎಂಬ ಮಗಳಿದ್ದಳು. ಪೂನಂ ಅವರನ್ನು ಬಿಟ್ಟು ತಿವಾರಿ ದೆಹಲಿಗೆ ಬಂದಿದ್ದರು. ದೆಹಲಿಗೆ ಬಂದ ನಂತರ ಸುಖದೇವ್ ತಿವಾರಿ ಪೂನಂ ಜೊತೆಗಿನ ಸಂಬಂಧವನ್ನು ಮುರಿದರು.

ಹೀಗಾಗಿ ಪೂನಂ ಅವರನ್ನು ಹುಡುಕಲು ಬಿಹಾರದಿಂದ ದೆಹಲಿಗೆ ಬಂದಿದ್ದರು. ಆದರೆ ಪೂನಂ ಎಲ್ಲಿಯೂ ಸುಖದೇವ್ ತಿವಾರಿಯ ಹುಡುಕಾಟ ನಡೆಸಿದಾಗ ಆಕೆಗೆ ಕಲ್ಲುವಿನ ಪರಿಚಯವಾಗಿದೆ. ಆ ನಂತರ ಅವಳು ಕಲ್ಲು ಜೊತೆ ವಾಸಿಸಲು ಪ್ರಾರಂಭಿಸಿದ್ದು, ಕಲ್ಲು ಅವರಿಗೆ ಮೂವರು ಮಕ್ಕಳಿದ್ದಾರೆ. ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ದೀಪಕ್. ಅಲ್ಲಿ ವಾಸವಾಗಿರುವಾಗಲೇ ಕಲ್ಲೂ ಕುಡಿದ ಅಮಲಿನಲ್ಲಿ ಅನುಚಿತವಾಗಿ ವರ್ತಿಸತೊಡಗಿದನು.

ಆದಾದ ಬಳಿಕ ಅವಳಿಗೆ ಅಂಜನ್ ದಾಸ್ ಪರಿಚಯವಾಯಿತು. ಪೂನಂ ಅಂಜನ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದು, ಆದರೆ ಇತ್ತ ಕಲ್ಲು ಲಿವರ್ ವೈಫಲ್ಯದಿಂದ ಪ್ರಾಣ ಪಕ್ಷಿ ಹಾರಿಹೋಗಿದೆ. ಹೀಗಿರುವಾಗ ಅಂಜನ್ ಜೊತೆ ವಾಸಿಸಲು ಪ್ರಾರಂಭಿಸಿದ್ದು, ಬಿಹಾರದಲ್ಲಿ ಅಂಜನ್‌ಗೆ ಇನ್ನೊಂದು ಕುಟುಂಬವಿದೆ ಎಂದು ಆಕೆಗೆ ತಿಳಿದಿರಲಿಲ್ಲ.

ದೀಪಕ್ ಮದುವೆಯಾದ ಬಳಿಕ ಸಮಸ್ಯೆ ಹೆಚ್ಚಾಯಿತು. ಇದಾದ ನಂತರ ಅಂಜನ್ ದೀಪಕ್ ಪತ್ನಿಯ ಮೇಲೆ ಕಣ್ಣಿಟ್ಟಿದ್ದನು. ದೀಪಕ್‌ನ ವಿಚ್ಛೇದಿತ ಸಹೋದರಿಯ ಮೇಲೂ ಅಂಜನ್‌ನ ಕೆಟ್ಟ ಕಣ್ಣು ಬಿದ್ದಿತ್ತು. ದೀಪಕ್ ತಂಗಿಯೂ ಇಲ್ಲಿಯೇ ವಾಸವಾಗಿದ್ದಳು. ತನ್ನ ಹೆಂಡತಿ ಮತ್ತು ಸಹೋದರಿಯ ಮೇಲೆ ಕೆಟ್ಟ ಕಣ್ಣು ಇಡಲಾರಂಭಿಸಿದ್ದ ಕಾರಣ ದೀಪಕ್ ಅಂಜನ್ ದಾಸ್ ನನ್ನು ಕೊ-ಲ್ಲಲು ಪ್ಲಾನ್ ಮಾಡಿದ್ದ.

ಅಲ್ಲದೆ ಎಲ್ಲ ಸಾಕ್ಷ್ಯಗಳನ್ನು ನಾಶಪಡಿಸಲು ಯೋಜನೆ ರೂಪಿಸಿದ್ದರು. ಪೊಲೀಸರ ಪ್ರಕಾರ ಪೂನಂ ಮತ್ತು ದೀಪಕ್ ಮೊದಲು ಅಂಜನ್ ಕುಡಿದಿದ್ದರು. ನಿದ್ದೆ ಮಾತ್ರೆಗಳನ್ನು ಬೆರೆಸಿ ಪ್ರಜ್ಞೆ ತಪ್ಪಿಸಿದ್ದು, ಜೀವ ತೆಗೆದಿದ್ದಾರೆ. ಇದಾದ ಬಳಿಕ ಮೃ-ತದೇಹವನ್ನು ಚಾಕುವಿನಿಂದ 10 ತುಂಡುಗಳನ್ನಾಗಿ ಮಾಡಲಾಗಿದೆ. ಪೊಲೀಸರು 6 ತುಂಡುಗಳನ್ನು ವಶಪಡಿಸಿಕೊಂಡಿದ್ದು, ಉಳಿದ 4 ತುಂಡುಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *