deepika padukone remuneration pathan : ಶಾರುಖ್ ಖಾನ್ (Shahrukh Khan) ಅವರ ‘ಪಠಾಣ್’ ಸಿನಿಮಾ ಶೀಘ್ರವೇ ತೆರೆಗೆ ಬರಲಿದ್ದು, ಇದೊಂದು ಅದ್ಧೂರಿ ಆಯಕ್ಷನ್ ಸಿನಿಮಾ ಆಗಿರಲಿದೆ. 2018ರಲ್ಲಿ ʻಜೀರೋ’ ಚಿತ್ರ ತೆರೆಕಂಡ ಬಳಿಕ ಶಾರುಖ್ ಖಾನ್ ʻಪಠಾಣ್ʼ ಸಿನಿಮಾ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾವನ್ನು ಎಂಟು ವಿವಿಧ ದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಸಿನಿಮಾದ ನಿರ್ಮಾಪಕ ಆದಿತ್ಯ ಚೋಪ್ರಾ ಹೇಳಿಕೊಂಡಿದ್ದಾರೆ.
ಇದೀಗ ಪಠಾಣ್ ಸಿನಿಮಾದ ಹಾಡು ಬಿಡುಗಡೆಗೊಂಡಿದ್ದು, ವಿವಾದಕ್ಕೆ ಸಿಲುಕಿದೆ. ಇದರ ಬೆನ್ನಲ್ಲೇ ತಾರೆಯರ ಸಂಭಾವನೆ ರಿವೀಲ್ ಆಗಿದೆ. ದೀಪಿಕಾ ಪಡುಕೋಣೆ ಸಿನಿಮಾದ ʻಬೇಷರಮ್ ರಂಗ್ʼ ಸಾಂಗ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, 15 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಜಾನ್ ಅಬ್ರಹಾಂ ʻಪಠಾಣ್ʼ ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವರದಿಗಳ ಪ್ರಕಾರ, ಈ ಚಿತ್ರಕ್ಕಾಗಿ 20 ಕೋಟಿ ರೂ. ಸಂಭಾವನೆ ಪಡೆದಿದಿದ್ದಾರೆ ಎನ್ನಲಾಗಿದೆ. ವರದಿ ಹೇಳುವಂತೆ ಪಠಾಣ್ ಸಿನಿಮಾಗೆ ಶಾರುಖ್ ಬರೋಬ್ಬರಿ 100 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.
ಪಠಾಣ್ ಸಿನಿಮಾದ ಬೇಷರಂ ರಂಗ್ ಹಾಡಿನಲ್ಲಿ ಕೇಸರಿ ಬಿಕಿನಿ ತೊಟ್ಟಿರುವುದು ಕೆಲವು ವಿವಾದಾತ್ಮಕ ಹೇಳಿಕೆಗಳಿಗೆ ಕಾರಣವಾಗಿ ಕೇಸರಿ ಬಣ್ಣ ಕನ್ನಡದಲ್ಲಿ ನಾಚಿಕೆ ಇಲ್ಲದ ಬಣ್ಣ ಎಂಬ ಅರ್ಥವನ್ನು ಸೂಚಿಸುತ್ತಿದ್ದು, ನೆಟ್ಟಿಗರು ಈ ಬಣ್ಣದ ಕುರಿತು ಕಮೆಂಟ್ ಬಾಕ್ಸ್ನಲ್ಲಿ ಸಿಕ್ಕಾಪಟ್ಟೆ ಕಮೆಂಟ್ಸ್ ಮಾಡುತ್ತಿದ್ದಾರೆ. ಬೈಕಾಟ್ ಪಠಾಣ್ ಟ್ರೆಂಡ್ ಆಗಿದ್ದು, ಹಾಗಾಗಿ ದೀಪಿಕಾ ಪಡುಕೋಣೆ ಧರಿಸಿರುವ ಕೇಸರಿ ಬಿಕಿನಿ ಬಗೆಗಿನ ಮಾತು ಈಗ ಫುಲ್ ವೈರಲ್ ಆಗಿದೆ.
ಈ ಕುರಿತು ನೆಟ್ಟಿಗರು ಅರ್ಥಹೀನ ಬಟ್ಟ್‌ಎ ಎಂದು ಕಮೆಂಟ್ ಮಾಡಿ ಬಹಿಷ್ಕಾರ ಹಾಕುವಂತೆ ಕರೆ ನೀಡಿದ್ಧಾರೆ. ಹಿಂದಿಯಲ್ಲಿ ಟ್ವೀಟ್ ಮಾಡಿರುವ ನರೋತ್ತಮ್ ಮಿಶ್ರಾ, ‘ಮೊದಲ ನೋಟದಲ್ಲಿ ಹಾಡಿನಲ್ಲಿರುವ ವೇಷಭೂಷಣಗಳು ಆಕ್ಷೇಪಾರ್ಹವಾಗಿವೆ. ‘ತುಕ್ಡೆ ತುಕ್ಡೆ ಗ್ಯಾಂಗ್’ ಅನ್ನು ಬೆಂಬಲಿಸುವ ನಟಿ ದೀಪಿಕಾ ಪಡುಕೋಣೆ ಪಠಾಣ್ ಚಿತ್ರದ ಹಾಡಿನಲ್ಲಿದ್ದಾರೆ.

ನಾನು ಜೀವನದಲ್ಲಿ ಮದುವೆ ಅಂತಾ ಆದ್ರೆ ಆ ಒಬ್ಬ ವ್ಯಕ್ತಿಯ ಜೊತೆ ಮಾತ್ರ ಎಂದ ನಟಿ ಅನುಷ್ಕಾ ಶೆಟ್ಟಿ! ಯಾರೂ ಗೊತ್ತಾ ಆ ವ್ಯಕ್ತಿ? ನಿಮ್ಮ ಖುಷಿ ದುಪ್ಪಟ್ಟಾಗುತ್ತೆ ನೋಡಿ!!
ವೇಷಭೂಷಣಗಳು ಹೆಚ್ಚು ಆಕ್ಷೇಪಾರ್ಹವಾಗಿದ್ದು, ಇಂತಹ ಹಾಡನ್ನು ಚಿತ್ರೀಕರಿಸಲಾಗಿದೆ. ಇದೊಂದು ಕೊಳಕು ಮನಸ್ಥಿತಿ. ಹಾಡುಗಳ ದೃಶ್ಯಗಳು ಮತ್ತು ವೇಷಭೂಷಣಗಳನ್ನು ಸರಿಪಡಿಸಬೇಕು. ಇಲ್ಲದಿದ್ದರೆ, ಮಧ್ಯಪ್ರದೇಶದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಅನುಮತಿಸಬೇಕೇ ಅಥವಾ ಬೇಡವೇ ಎಂದು ನಾವು ಪರಿಗಣಿಸುತ್ತೇವೆ’ ಎಂದು ತಿಳಿಸಿದ್ದಾರೆ.