ಬಣ್ಣದ ಲೋಕದಲ್ಲಿ ಸಕ್ರಿಯರಾಗಿರುವ ನಟಿಯರ ಪೈಕಿ ಕಿರುತೆರೆಯ ಬೆಡಗಿ ದೀಪಿಕಾ ದಾಸ್ ಕೂಡ ಒಬ್ಬರು. ನಾಗಿಣಿ (Nagini) ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿಕೊಂಡ ದೀಪಿಕಾ ದಾಸ್ (Deepika Das) ಅವರಿಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗವಿದೆ. ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿರುವುದರ ಜೊತೆಗೆ ಇತ್ತೀಚೆಗಷ್ಟೇ ಕನ್ನಡ ಬಿಗ್ ಬಾಸ್ ಸೀಸನ್ 9 (Big Boss Sisan 9) ರಲ್ಲಿ ಭಾಗವಹಿಸಿ ಫೈನಲ್ಗೆ ತಲುಪಿದ್ದರು. ಆದಾದ ಬಳಿಕ ತನ್ನ ಫ್ಯಾನ್ಸ್ ಫಾಲ್ಲೋರ್ಸ್ ಸಂಖ್ಯೆಯೂ ಮತ್ತಷ್ಟು ಹೆಚ್ಚಾಗಿದೆ.
ನಟನೆಯಲ್ಲಿ ಬ್ಯುಸಿಯಾಗಿದ್ದು ಬಿಡುವು ಮಾಡಿಕೊಂಡು ಟ್ರಿಪ್ (Trip) ಎಂದು ಆಗಾಗ ವಿದೇಶಕ್ಕೆ ತೆರಳುತ್ತಿರುತ್ತಾರೆ. ಅದಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಹಾಲಿ ಡೇ ಎಂಜಾಯ್ ಮಾಡಿದ್ದು, ಇನ್ಸ್ಟಾಗ್ರಾಮ್ (Instagram) ನಲ್ಲಿ ಬೀಚ್ (Beach) ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಸಮುದ್ರ ತೀರದಲ್ಲಿ ವಿಭಿನ್ನ ಶೈಲಿಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದು, ಈ ವಿದೇಶಿ ಟ್ರಿಪ್ ಫೋಟೋ ಶೇರ್ ಮಾಡಿಕೊಂಡು,” ದೀಪಿಕಾ ದಾಸ್, ನೀವು ನಿಜವಾಗಿಯೂ ಬೇಕು ಅನಿಸುವುದನ್ನು ಎಂದಿಗೂ ಬಿಟ್ಟುಕೊಡಬೇಡಿ. ಬಿಟ್ಟುಕೊಟ್ಟ ಬಳಿಕ ಕಾಯುವುದು, ವಿಷಾದಿಸುವುದು ಬಹಳ ಕಷ್ಟ” ಎಂದು ಬರೆದುಕೊಂಡಿದ್ದರು.
ಆದರೆ ಇದೀಗ ಕಿರುತೆರೆ ಲೋಕದ ಬೆಡಗಿ ಮತ್ತೆ ಸುದ್ದಿಯಲ್ಲಿದ್ದಾರೆ. ದೀಪಿಕಾ ದಾಸ್ ಅವರು, ಚಿಕ್ಕಮಗಳೂರಿನ (Chikkamgaluru) ಯುವಕ ಕಿಶನ್ ಬಿಳಗಲಿ (Kishan Bilagali) ಜೊತೆ ರೊಮ್ಯಾಂಟಿಕ್ ಆಗಿ ಸ್ಟೆಪ್ ಹಾಕಿದ್ದಾರೆ. ದೀಪಿಕಾ ದಾಸ್ ಅವರ ಕಿಶನ್ ಬಿಳಗಲಿ (Kishan Bilagali) ಅವರ ಜೊತೆಗೆ ರೋಮ್ಯಾಂಟಿಕ್ ಡಾನ್ಸ್ ಮಾಡಿರುವ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದೆ.
ಹೌದು, ಕಿಶನ್ ಬಿಳಗಲಿ (Kishan Bilagali) ಅವರ ಜೊತೆ ದೀಪಿಕಾ ದಾಸ್ ಅವರು ಶಾಕುಂತಲೆ ಸಿಕ್ಕಳು ಹಾಡಿಗೆ ರೊಮ್ಯಾಂಟಿಕ್ ಆಗಿ ಆಗಿರುವ ವಿಡಿಯೋವನ್ನು ಕಿಶನ್ ಅವರೇ ಇನ್ಸ್ಟಾಗ್ರಾಮ್ (Instagram) ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕಿಶನ್ ಅವರು ರೆಡ್ ಶೂ ಧರಿಸಿಕೊಂಡಿದ್ದು, ದೀಪಿಕಾ ಅವರು ಸ್ಟ್ರೈಪ್ ಸ್ಟೈಲ್ ಡ್ರೆಸ್ ಧರಿಸಿ ಹೀಲ್ಸ್ ಧರಿಸಿದ್ದು ಇಬ್ಬರೂ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಈ ಡ್ಯಾನ್ಸ್ ವಿಡಿಯೋಗೆ 1 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದ್ದು, ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.
ಕೆಲವರು ಸೂಪರ್ ಎಂದು ಕಾಮೆಂಟ್ ಮಾಡಿದರೆ, ಇನ್ನು ಕೆಲವರು ಶೈನ್ ಶೆಟ್ಟಿಯವರ ಹೆಸರನ್ನು ಎಳೆದು ತಂದಿದ್ದಾರೆ. ಹೌದು, ಈ ವಿಡಿಯೋ ನೆಟ್ಟಿಗನು ನೆಟ್ಟಿಗರೊಬ್ಬರು ಶೈನ್ ನೋಡ್ಕೊಳಪ್ಪಾ ಹುಷಾರು ಎಂದು ಕಮೆಂಟ್ ಮಾಡಿದ್ದಾನೆ. ಇನ್ನೊಬ್ಬ ನೀವಿಬ್ಬರೂ ಸೂಪರ್ ಎಂದಿದ್ದಾರೆ. ಇನ್ನೂ ಕೆಲವರು ನಿಮ್ಮ ಫ್ರೆಂಡ್ಶಿಪ್ಗೆ ಯಾರ ದೃಷ್ಟಿಯೂ ಆಗದಿರಲಿ ಎಂದಿದ್ದಾನೆ.
View this post on Instagram