ದುಬೈನಲ್ಲಿ ಖ್ಯಾತ ಕ್ರಿಕೆಟಿಗ ಕ್ರಿಸ್ ಗೇಲ್ ಜೊತೆ ನಾಗಿಣಿ ದೀಪಿಕಾ ದಾಸ್ ಫೋಟೋ ವೈರಲ್ ಆದ ಬೆನ್ನಲ್ಲೇ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ ನಟಿ! ಕಾರಣ ಇಷ್ಟೇ ನೋಡಿ!!

ಬಿಗ್ ಬಾಸ್ ಸೀಸನ್ 9 ಮುಕ್ತಾಯವಾಗಿತ್ತು. ಕನ್ನಡ ಬಿಗ್​ ಬಾಸ್ ಸೀಸನ್ 9ರಲ್ಲಿ ಫೈನಲ್​ಗೆ ತಲುಪಿದ ನಟಿ ದೀಪಿಕಾ ದಾಸ್ ಅವರು ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ವಿನ್ನರ್​ ಆಗುವ ಕನಸು ಕಂಡಿದ್ದ ದೀಪಿಕಾ ದಾಸ್​ 2ನೇ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಆ ಬಳಿಕ ಖಾಸಗಿ ಸುದ್ದಿವಾಹಿನಿಗಳ ಜೊತೆಗೆ ಸಂದರ್ಶನದಲ್ಲಿ ಭಾಗಿಯಾಗಿದ್ದ ನಟಿ ದೀಪಿಕಾ ದಾಸ್ ಮದುವೆಯ ಬಗ್ಗೆ ಮಾತನಾಡಿದ್ದರು.

ಈ ವೇಳೆಯಲ್ಲಿ ಸಂಬರಗಿ ಹಾಗೂ ಅರುಣ್ ಸಾಗರ್ ಅಣ್ಣನ ಸ್ಥಾನದಲ್ಲಿ ನಿಂತು ದೀಪಿಕಾಗೆ ಗಂಡು ಹುಡುಕೋ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಅವರ ಪ್ರೀತಿಗೆ ನಾನು ಖುಷಿ ಪಡುತ್ತೇನೆ. ಖಂಡಿತಾ ಮದುವೆಯಾಗುತ್ತೇನೆ ಎಂದು ಹೇಳಿದ್ದರು. ಹೌದು, ಸಂದರ್ಶನದಲ್ಲಿ ಮದುವೆಯ ಬಗ್ಗೆ ಮಾತನಾಡಿದ್ದ ನಟಿ ದೀಪಿಕಾ ದಾಸ್, ‘ ಬಿಗ್​ ಬಾಸ್​ ಮನೆಯಿಂದಲೇ ಹೇಳ್ತಾನೇ ಬಂದಿದ್ದಾರೆ. ಅಣ್ಣನ ಸ್ಥಾನದಲ್ಲಿ ನಿಂತು ನನ್ನ ಮದ್ವೆ ಮಾಡ್ಸಿತ್ತೀವಿ.

ಮನೆಗೆ ಬಂದಾಗ ನಮ್ಮಮ್ಮ ಮುಂದೇನೂ ಒಳ್ಳೆ ಹುಡ್ಗನಾ ನೋಡಿ ನಾನೇ ಮದ್ವೇ ಮಾಡ್ತೀನಿ ಎಂದಿದ್ದಾರೆ. ಆದರೆ, ಮದ್ವೆ ಬಗ್ಗೆ 2023ಕ್ಕೆ ಏನಾದ್ರೂ ಫ್ಯಾನ್ಸ್​ಗೆ ಗುಡ್​ ನ್ಯೂಸ್​ ಕೊಡ್ತೀರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು.. ಇಲ್ಲ ಇಲ್ಲ ಸಿರಿಯಸ್ಲೀ ಆ ಥರಾ ಅನ್ಕೋಬೇಡಿ. ನಾ ಒಬ್ಳೆ ಇರೋದು ಇಷ್ಟ ಇಲ್ವಾ? ಸಿಂಗಾಲಿಗೆ ತಾನೇ ಈ ಥರಾ ಅಚೀವ್​ ಮಾಡೋಕೆ ಆಗೋದು. ಡಬಲ್​ ಆದ್ರೆ ಕಷ್ಟ ಆಗುತ್ತೆ ಎಂದು ನಕ್ಕರು.

ಬಟ್​ ಐ ಹೋಪ್​ ಇನ್ನು 3-4 ವರ್ಷ ಮದ್ವೆ ಬೇಡ. ಮದ್ವೆ ಅಂದ್ರೆ ಭಯ ಇಲ್ಲ. ಇನ್ನೂ ಅಷ್ಟೂ ವಯಸ್ಸು​ ಆಗಿಲ್ಲ. ಇನ್​ ಡೈರೆಕ್ಟ್​ ಆಗಿ ಹೇಳ್ತಿದ್ದೀನಿ’ ಎಂದು ಹೇಳಿದ್ದರು.ಈ ವೇಳೆ ತಾನು ಮದುವೆಯಾಗುವ ಹುಡುಗ ಹೇಗಿರಬೇಕು ಎಂದು ಹೇಳಿದ್ದು ದೀಪಿಕಾ ದಾಸ್, ‘ ಹುಡ್ಗ ಬಗ್ಗೆ ತುಂಬಾ ಹೆಚ್ಚಿನ ನಿರೀಕ್ಷೆ ಏನೂ ಇಲ್ಲ. ಚಿಕ್ಕ ಚಿಕ್ಕ ಆಸೆಗಳಿವೆ. ಫಸ್ಟ್​ ಹುಡುಗ ಪ್ರಾಮಾಣಿಕನಾಗಿರಬೇಕು. ಸುಳ್ಳು ಹೇಳಬಾರದು.

ಅವನು ಏನೇ ಮಾಡಿದ್ರೂ ನನಗೆ ಹೇಳಿ ಮಾಡಿದ್ರೆ ಐ ವಿಲ್​ ಸಪೋರ್ಟ್​ ಹಿಮ್. ಸುಳ್ಳು ಹೇಳಿ ಚಿಕ್ಕ ಕೆಲ್ಸಾ ಮಾಡಿದ್ರೂ ನನಗೆ ಆಗಲ್ಲ. ಬೇಜರಾಗುತ್ತೆ. ಆ ನಂಬಿಕೆ ಒಮ್ಮೆ ಹೋದ್ರೆ ಅಷ್ಟೇ ನನ್ನ ಜೊತೆ ಅವನು ಇರೋದೇ ವೇಸ್ಟ್​. ಲುಕ್​ ಆಗಿ ಇರಬೇಕಂತಿಲ್ಲ. ಹಾರ್ಟ್​ ಆಗಿ ಫುಲ್​ ಗುಡ್​ ಆಗಿದ್ರೆ ಸಾಕು. ಅಂಡರ್​ಸ್ಟಾಂಡ್​ ಹಾಗೂ ಸಮವಾಗಿ ರೆಸ್ಪೆಕ್ಟ್​ ಕೊಡಬೇಕು. ನಾನೂ ಏನೇ ಮಾಡಿದ್ರೂ ಸಪೋರ್ಟ್​ ಕೊಡುವಂತಿರಬೇಕು.

ನಾನೂ ಕೂಡ ಅದೇ ರೀತಿ ಇರ್ತೀನಿ. ಅದರಲ್ಲಿ ಡೌಟ್​ ಬೇಡ. ಒಂಚೂರು ಇದು ಅಂದ್ರೆ ಇದು ಅನ್ನೋ ಥರಾ ಸ್ಟ್ರೀಕ್ಟ್​ ಆಗಿ ಇರ್ತೀನಿ. ಅದಕ್ಕೆ ಒಂಚೂರು ಅಜೆಸ್ಟ್​ ಮಾಡಿಕೊಳ್ಳಲೇಬೇಕು. ಫನ್​ ಆಯಂಡ್​ ಲವಿಂಗ್​ ಕ್ಯಾರೆಕ್ಟರ್​ ಆಗಿರಬೇಕು. ಅವನು ಜಾಸ್ತಿ ನನ್ನ ಜೊತೆ ಟ್ರಾವೆಲಿಂಗ್​ ಮಾಡಬೇಕು’ ಎಂದಿದ್ದರು. ಬಿಗ್ ಬಾಸ್ ಶೋಯಿಂದ ಹೊರ ಬಳಿಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ದೀಪಿಕಾ ದಾಸ್ ಇತ್ತೀಚೆಗಷ್ಟೇ ದುಬೈ ಪ್ರವಾಸ ಕೈಗೊಂಡಿದ್ದರು.

ನಟಿ ದೀಪಿಕಾ ದಾಸ್ ದುಬೈನಲ್ಲಿ ಕ್ರಿಕೆಟಿಗ ಕ್ರಿಸ್ ಗೇಲ್ ಅವರೊಂದಿಗಿನ ವಿಶೇಷ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಹೌದು, ನಟಿ ದುಬೈನಲ್ಲಿ ಊಟ ಮಾಡುತ್ತಿದ್ದ ಅದೇ ರೆಸ್ಟೋರೆಂಟ್ನಲ್ಲಿ ತನ್ನ ನೆಚ್ಚಿನ ಕ್ರಿಕೆಟಿಗನನ್ನು ಭೇಟಿಯಾಗಿದ್ದಾರೆ. ದೀಪಿಕಾ ತನ್ನ ನೆಚ್ಚಿನ ಕ್ರೀಡಾಪಟುವಿನೊಂದಿಗೆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು.

“ಇದು ಗೇಲ್ ಕ್ಷಣ…ಅತ್ಯಂತ ಅನಿರೀಕ್ಷಿತ ಭೇಟಿ, ನಮ್ಮ ಆರ್ಸಿಬಿ ಡೇಸ್ ಅನ್ನು ನೆನಪಿಸಿತು ಎಂದು ಬರೆದುಕೊಂಡಿದ್ದಾರೆ. ಕ್ರಿಸ್ ಗೇಲ್ ಅವರನ್ನು ಭೇಟಿಯಾದ ದೀಪಿಕಾ ಅವರ ಸಂತೋಷಕ್ಕೆ ಯಾವುದೇ ಮಿತಿಯಿಲ್ಲ ಈ ಫೋಟೋಗಳಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಂಡು ನಟಿ ದೀಪಿಕಾ ದಾಸ್ ಸದಾ ಸುದ್ದಿಯಲ್ಲಿರುತ್ತಾರೆ.

Leave a Reply

Your email address will not be published. Required fields are marked *