ವಿಷಕಾರಿ ಎಂದು ಭಯ ಪಡುವ ಈ ಚೇಳಿನ ವಿಷವೂ ಎಷ್ಟು ದುಬಾರಿ ಗೊತ್ತಾ? ಒಂದು ಲೀಟರ್ ವಿಷಕ್ಕೆ ಎಷ್ಟು ಕೋಟಿ ಗೊತ್ತಾ!!

ಜೀವಜಗತ್ತಿನಲ್ಲಿ ಹಲವಾರು ವಿ-ಷಕಾರಿ ಜೀವಜಂತುಗಳಿವೆ. ಅವುಗಳ ಸಾಲಿನಲ್ಲಿ ಈ ಚೇಳು ಕೂಡ ಸೇರಿಕೊಳ್ಳುತ್ತದೆ. ಸಾಮಾನ್ಯವಾಗಿ ಈ ಚೇಳು ವಿ-ಷಕಾರಿ ಎನ್ನುವುದು ಎಲ್ಲರಿಗೂ ಕೂಡ ತಿಳಿದ ವಿಚಾರ. ಆದರೆ, ಇವುಗಳಲ್ಲಿ 2000 ಜಾತಿಗೆ ಸೇರಿದ ಚೇಳುಗಳಿದ್ದು, ಕೊಂಬಚೇಳುಗಳು ಕಚ್ಚಿದರೆ ಯಾವುದೇ ಮದ್ದಿಲ್ಲ ಎನ್ನುವ ಮಾತಿದೆ. ಸಾಮಾನ್ಯವಾಗಿ ಈ ಕೊಂಬ ಚೇಳುಗಳ ಬದುಕು ಮಾತ್ರ ಸ್ವಲ್ಪ ಭಿನ್ನ.

ತನ್ನ ಮರಿಗಳಿಗೆ ಜನ್ಮ ನೀಡಿದ ಈ ಕೊಂಬ ಚೇಳುಗಳು ಅವುಗಳಿಗಾಗಿ ತನ್ನನ್ನು ತಾನೇ ಅರ್ಪಿಸಿಕೊಳ್ಳುವ ಮೂಲಕ ಮರಿಗಳಿಗೆ ಆಹಾರವಾಗುತ್ತವೆ. ಹೀಗಾಗಿ ಈ ಕೊಂಬ ಚೇಳುಗಳ ಜೀವನ ಕ್ರಮವು ಭಿನ್ನವಾಗಿದೆ. ಆದರೆ ಈ ಚೇಳಿನ ವಿ-ಷಕ್ಕೆ ದುಬಾರಿ ಬೆಲೆಯಿದೆ ಎಂದರೆ ನೀವು ನಂಬಲೇಬೇಕು. ಕಚೇಳುಗಳ ವಿ-ಷವೂ ಕೂಡ ಅಷ್ಟು ದುಬಾರಿಯ ಎಂದೇನಿಸಬಹುದು.

ಹಾವುಗಳ ಹಾಗೆ ಈ ಚೇಳುಗಳ ವಿ-ಷವು ವಿ-ಷಕಾರಿಯಾಗಿದ್ದು ದುಬಾರಿ (Costly) ಕೂಡ ಹೌದು. ಡೆತ್‌ಸ್ಟಾಕರ್ ಚೇಳಿ (Deathstalker Scorpion) ನ ವಿ-ಷವು ತುಂಬಾ ದುಬಾರಿ ಎನ್ನಬಹುದು. ಒಂದು ಚೇಳು ಒಂದು ಬಾರಿಗೆ ಕೇವಲ ಎರಡು ಮಿಲಿಗ್ರಾಂ ವಿ-ಷವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಚೇಳುಗಳ ವಿ-ಷವನ್ನು ಸಂಗ್ರಹಿಸಲು ಬಹಳ ಸಮಯವೂ ತಗಲುತ್ತವೆ.

5 ಲೀಟರ್ ವಿ-ಷವೂ $39 ಮಿಲಿಯನ್ ಬೆಲೆಬಾಳುತ್ತದೆ. ಅಂದರೆ ಭಾರತದಲ್ಲಿ ಸರಿಸುಮಾರು 32 ಕೋಟಿ ರೂಪಾಯಿಯಾಗಿದೆ. ಡೆತ್‌ಸ್ಟಾಕರ್ ವಿ-ಷದ ಒಂದು ಹನಿಯ ಬೆಲೆಯು ಭಾರತೀಯ ರೂಪಾಯಿಗಳಲ್ಲಿ 11,000 ಆಗಿದೆ. ಚೇಳುಗಳು ಕಚ್ಚಿದರೆ ಸಾಯುವ ಪ್ರಮಾಣವೂ ಕಡಿಮೆಯಿದ್ದರೂ ವಿ-ಷಕಾರಿ ಎನ್ನುವುದನ್ನು ಮರೆಯುವಂತಿಲ್ಲ.

ಅದಲ್ಲದೇ, ಈ ಚೇಳಿನ ವಿಷದಿಂದ ಹಲವು ಪ್ರಯೋಜನಗಳು ಇವೆ. ಡೆತ್‌ಸ್ಟಾಕರ್ ಚೇಳಿನ ವಿ-ಷದಲ್ಲಿ ಕ್ಲೋರೊಟಾಕ್ಸಿನ್ ಎಂಬ ಪೆಪ್ಟೈಡ್ ಇದೆ. ಇದನ್ನು ಕ್ಯಾನ್ಸರ್ (Cancer) ಮತ್ತು ಇತರ ಕಾಯಿಲೆಗಳ ಚಿಕಿತ್ಸೆ ಸೇರಿದಂತೆ ಹಲವಾರು ಸಂದರ್ಭದಲ್ಲಿ ಬಳಸಲಾಗುತ್ತವೆ. ಅಷ್ಟೇ ಅಲ್ಲದೇ, ಮೆದುಳಿನ ಗೆಡ್ಡೆಗಳ ಚಿಕಿತ್ಸೆಗೆ ಮತ್ತು ಮಧುಮೇಹದ ಚಿಕಿತ್ಸೆಗೆ ಬಳಸಬಹುದಾಗಿದ್ದು, ವಿ-ಷಕಾರಿ ಜೀವಿಯಾಗಿದ್ದರೂ ಕೂಡ ಪ್ರಯೋಜನಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.

Leave a Reply

Your email address will not be published. Required fields are marked *