ಗಂಡನನ್ನು ಕಳೆದುಕೊಂಡು 25 ವರ್ಷಗಳ ಕಾಲ ಒಂಟಿಯಾಗಿದ್ದ 52 ವರ್ಷದ ತಾಯಿಯನ್ನು ನೋಡಿ ಮಗಳು ತೆಗೆದುಕೊಂಡ ನಿರ್ಧಾರ ಏನು ನೋಡಿ! ನೀವೂ ಕೂಡ ಎಮೋಷನಲ್ ಆಗುತ್ತೀರಾ..

Daughter arranged her mother marriage : ಮದುವೆ ಎಂದ ಕೂಡಲೇ ಸಡಗರ ಸಂಭ್ರಮ ತುಂಬಿದ ವಾತಾವರಣ. ಈ ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಈ ಮದುವೆಗೆ ಕೇವಲ ಮನೆಯವರು ಒಪ್ಪಿದರೆ ಸಾಲದು, ಮನೆಯವರ ಒಪ್ಪಿಕೊಳ್ಳಬೇಕು. ಎರಡು ಕುಟುಂಬಗಳು ಎರಡು ಮನಸ್ಸುಗಳು ಒಂದಾಗಬೇಕು. ಮದುವೆ ಮಾಡುವುದು ಅಷ್ಟು ಸುಲಭವಲ್ಲ. ಹಾಗಾಗಿ ಮನೆ ಹಾಗೂ ಮದುವೆ ಮಾಡಿದಾಗಲೇ ಅದರ ಕಷ್ಟ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಆಡಂಬರದ ಮದುವೆಗೆ ಹೆಚ್ಚಾಗುತ್ತಿದೆ.

ಇಂದಿನ ಮದುವೆಯಲ್ಲಿನ ಆಡಂಬರತನವು ಘನತೆಯೂ ಹೌದು. ಹೆಣ್ಣು ಹೆತ್ತವರು ಮಗಳ ಮದುವೆಯನ್ನು ಸಹಜವಾಗಿ ಅದ್ದೂರಿಯಾಗಿಯೇ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಮದುವೆ ಎನ್ನುವ ಮೂರು ಪದಗಳಲ್ಲಿ ಒಂದಷ್ಟು ಬದಲಾವಣೆಗಳು ಬಂದಿದೆ. ಈ ಬದಲಾವಣೆಗೆ ಜನರು ಒಗ್ಗಿಕೊಂಡು ಬಿಟ್ಟಿದ್ದಾರೆ. ಭಾರತೀಯ ಸಂಪ್ರದಾಯಬದ್ಧ ಮದುವೆಯೂ ಅಂದು ನಡೆಯುತ್ತಿದೆ. ಆದರೆ ಇಂದಿನ ಮದುವೆಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯೂ ಬೆರೆತು ಹೋಗಿದೆ. ಹೀಗಾಗಿ ಅದರ ಜೊತೆಗೆ ಮದುವೆ ಎನ್ನುವ ಬಂಧವೇ ಒಂದರ್ಥದಲ್ಲಿ ಅರ್ಥವನ್ನು ಕಳೆದುಕೊಂಡಿದೆ ಎಂದರೆ ತಪ್ಪಾಗಲಾರದು. ಅದಲ್ಲದೆ ಪ್ರತಿಯೊಬ್ಬ ತಂದೆ ತಾಯಿಯೂ ಕೂಡ ತನ್ನ ಮಕ್ಕಳ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕು ಎಂದು ಕನಸು ಕಂಡಿರುತ್ತಾರೆ.

Daughter arranged her mother marriage

 

ಮಗಳು ಅಥವಾ ಮಗನನ್ನು ಮದುವೆ ಮಂಟಪದಲ್ಲಿ ಕಣ್ತುಂಬಿಸಿಕೊಳ್ಳಬೇಕೆಂದು ಕೊಳ್ಳುತ್ತಾರೆ. ಸಾಮಾನ್ಯವಾಗಿ ಮಕ್ಕಳಿಗೆ ತಂದೆ ತಾಯಿ ಮದುವೆ ಮಾಡುವುದನ್ನು ನಾವು ಕೇಳಿರುತ್ತೇವೆ. ಆದರೆ ಇಲ್ಲೊಬ್ಬಳು ತನ್ನ ತಾಯಿಗೆ ಮದುವೆ ಮಾಡಿದ್ದಾಳೆ. ಹೌದು, ಮಗಳೇ ಮುಂದೆ ನಿಂತು, ತಾಯಿಗೆ ಮದುವೆ ಮಾಡಿಸಿದ್ದಾಳೆ. ತಾಯಿ ಇದೀಗ ಎರಡನೇ ಮದುವೆಯಾಗಿ ನೆಮ್ಮದಿಯ ಜೀವನ ಕಂಡುಕೊಳ್ಳುವಲ್ಲಿ ಎಂದು ಈ ರೀತಿ ಮಾಡಿದ್ದಾಳೆ. ಈ ಬಗ್ಗೆ ಬಗ್ಗೆ ರಿಯಾ ಚರ್ಕವರ್ತಿ ಎಂಬಾಕೆ ತನ್ನ ತಾಯಿಗೆ ಎರಡನೇ ಮದುವೆ ಮಾಡಿಸಿ ಖುಷಿ ಪಟ್ಟಿದ್ದಾಳೆ.

ಅಂದಹಾಗೆ, ರಿಯಾ ಚರ್ಕವರ್ತಿ ತಂದೆ ಈ ಹಿಂದೆ ನಿಧನರಾಗಿದ್ದರು. ಇದಾಗಿ ಅನೇಕ ವರ್ಷಗಳ ಕಾಲ ತಾಯಿ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದರು. ಅದೊಂದು ದಿನ ನನಗೆ ಚಿಕ್ಕಮ್ಮನಿಂದ ಕರೆ ಬಂದಿತ್ತು. ಅವರು ಮಾತನಾಡುತ್ತಾ, ತಂದೆಯ ನಿಧನದ ನಂತರ ತಾಯಿ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಇದೀಗ ನಿನ್ನ ತಾಯಿಯನ್ನು ಒಬ್ಬರು ಇಷ್ಟಪಡುತ್ತಿದ್ದಾರೆ.

ವಿವಾಹವಾಗುವ ಬಗ್ಗೆಯೂ ಹೇಳಿಕೊಂಡಿದ್ದಾರೆ ಎಂದಿದ್ದಾರೆ. ಅದರ ಜೊತೆಗೆ ವಿವಾಹ ಮಾಡಿಕೊಟ್ಟರೆ ಇಬ್ಬರೂ ನೆಮ್ಮದಿಯಿಂದ ಇರುತ್ತಾರೆ. ಈ ಬಗ್ಗೆ ಯೋಚಿಸು ಎಂದು ಹೇಳಿದ್ದರಂತೆ. ಚಿಕ್ಕಮ್ಮ ಹೇಳಿದ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡ ರಿಯಾ ತಾಯಿಗೆ ಎರಡನೇ ಮದುವೆ ಮಾಡಲು ಮುಂದಾಗಿದ್ದಾರೆ. ಕೊನೆಗೂ ರಿಯಾ ಅಂದುಕೊಂಡಂತೆ ತಾಯಿಗೆ ಮದುವೆ ಮಾಡಿಸಿ, ಈ ಬಗ್ಗೆ ಸಂತಸವನ್ನು ಹಂಚಿಕೊಂಡಿದ್ದಾಳೆ.


ಹ್ಯೂಮನ್ಸ್ ಆಫ್ ಬಾಂಬೆಯ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಈ ಹೃದಯಸ್ಪರ್ಶಿ ಕಥೆಯನ್ನು ಹಂಚಿಕೊಂಡಿದ್ದು ಕಥೆಯಲ್ಲಿ ದೇಬ್ ಆರ್ತಿ ರಿಯಾ ಚಕ್ರವರ್ತಿ ಮತ್ತು ಅವರ ತಾಯಿ ಮೌಶುಮಿಯೇ ಮುಖ್ಯ ಪಾತ್ರಗಳು. ಈ ಪೋಸ್ಟ್ ನಲ್ಲಿ “ಕಳೆದ ವರ್ಷ, ಒಂದು ಸಂಜೆ ನನ್ನ ಚಿಕ್ಕಮ್ಮನಿಂದ ನನಗೆ ಕರೆ ಬಂತು. ಅವರು ಹೇಳಿದರು, ‘ನಿಮ್ಮ ತಾಯಿಯನ್ನು ಇಷ್ಟಪಡುವ ಒಬ್ಬ ವ್ಯಕ್ತಿ ಇದ್ದಾನೆ.

‘ಆಗ ನಾನು ಉತ್ಸುಕಳಾಗಿದ್ದೆ. ನನ್ನ ಅಮ್ಮ ಮತ್ತೆ ಪ್ರೀತಿಯನ್ನು ಕಂಡುಕೊಂಡಿದ್ದನ್ನು ನಾನು ಇಷ್ಟಪಟ್ಟೆ, “ಎಂಬ ಶೀರ್ಷಿಕೆಯಿಂದ ಕಥಥೆಯೂ ಆರಂಭವಾಗುತ್ತದೆ. ” ನಮ್ಮ ತಂದೆಯ ಮರಣದ ನಂತರ ನಾವು ನಾನಿಯ ಮನೆಗೆ ತೆರಳಿದೆವು ಮತ್ತು ನಾನು ಅಲ್ಲಿಯೇ ಬೆಳೆದೆ. ನನಗೆ ಕೇವಲ 2 ವರ್ಷ ಮತ್ತು ಮಾಮಿಗೆ 25 ವರ್ಷ. ಈ ವೇಳೆ ಅಲ್ಲಿ ಎಲ್ಲರೂ, ನೀನು ಮರುಮದುವೆ ಮಾಡಿಕೊಳ್ಳಬೇಕು ಎಂದು ಹೇಳುತ್ತಿದ್ದರು. ಆದರೆ ಅಮ್ಮ ನಿರಾಕರಿಸಿದಳು.

ಕಾರಿನ ಹೊರಮೈ ಸುತ್ತ ಸಗಣಿಯನ್ನು ಬಳಿದುಕೊಂಡು ಓಡಾಡುತ್ತಿರುವ ಮಹಿಳೆ…ಇದರ ಹಿಂದಿನ ರಹಸ್ಯ ತಿಳಿದರೆ ನೀವು ಅಚ್ಚರಿಪಡ್ತೀರಾ..!

ಮರುಮದುವೆಯಿಂದ ನಾನು ಪ್ರೀತಿಯನ್ನು ಕಂಡುಕೊಳ್ಳುತ್ತೇನೆ, ಆದರೆ ನನ್ನ ಮಗಳಿಗೆ ತಂದೆಯ ಪ್ರೀತಿ ಸಿಗುವುದಿಲ್ಲ ” ಎಂದು ಹೇಳಿದ್ದಾರೆ. “ಮಾ ನಿಮಗಾಗಿ ಒಬ್ಬ ಸಂಗಾತಿಯನ್ನು ಹುಡುಕಿದ್ದೇನೆ ಮತ್ತು ನಾನು ಕೂಡ ತಂದೆಯನ್ನು ಕಂಡುಕೊಂಡೆ” ಎಂದು ಚಕ್ರವರ್ತಿ ಹೇಳಿರೋದಾಗಿ ಪೋಸ್ಟ್ ನಲ್ಲಿ ತಿಳಿಸಲಾಗಿದೆ. ಒಟ್ಟಿನಲ್ಲಿ ತಾಯಿ ಸುಖವಾಗಿ ಇರಲು ಮಗಳೇ ಮುಂದೆ ನಿಂತು ಎರಡನೇ ಮದುವೆ ಮಾಡಿಸಿದ್ದು ಅಚ್ಚರಿಗೆ ಕಾರಣವಾಗಿದೆ.

Leave a Reply

Your email address will not be published. Required fields are marked *