Darshan tweet about sudeep : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರಾಂತಿ ಸಿನಿಮಾವು ಬಿಡುಗಡೆಗೂ ಮುನ್ನವೇ ಸಾಕಷ್ಟು ಸುದ್ದಿಯಲ್ಲಿದೆ. . ರಾಜ್ಯದ ಬೇರೆ ಬೇರೆ ಊರುಗಳಲ್ಲಿ ಸಿನಿಮಾ ಒಂದೊಂದೇ ಹಾಡುಗಳನ್ನು ಅಭಿಮಾನಿಗಳ ಸಮ್ಮುಖದಲ್ಲಿ ರಿಲೀಸ್ ಮಾಡುವುದಕ್ಕೆ ತೀರ್ಮಾನಿಸಲಾಗಿತ್ತು. ಕಳೆದ ಭಾನುವಾರ ಸಂಜೆ ಡಿಸೆಂಬರ್ 18 ರಂದು ‘ಕ್ರಾಂತಿ’ ಸಿನಿಮಾದ ಎರಡನೇ ಸಾಂಗ್ ಅನ್ನು ಹೊಸಪೇಟೆಯಲ್ಲಿ ರಿಲೀಸ್ ಮಾಡಿತ್ತು. ಆದರೆ ಈ ವೇಳೆಯಲ್ಲಿ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ‘ಕ್ರಾಂತಿ’ ಸಿನಿಮಾದ ಪೋಸ್ಟರ್‌ಗಳನ್ನು ಹರಿದು ಹಾಕಿ ಆಕ್ರೋಶ ಹೊರಹಾಕಿದ್ದರು.
ಅಲ್ಲದೆ ಪವರ್‌ಸ್ಟಾರ್ ಅಂತ ಘೋಷಣೆಗಳನ್ನು ಕೂಗಿದ್ದರು. ಈ ಮೂಲಕ ದರ್ಶನ್ ಮೇಲೆ ಅಪ್ಪು ಫ್ಯಾನ್ಸ್ ಕೋಪಗೊಂಡಿದ್ದರು. ಕ್ರಾಂತಿ ಸಿನಿಮಾದ ಹಾಡು ಬಿಡುಗಡೆಯ ವೇಳೆಯಲ್ಲಿ ಅಹಿತಕರ ಘಟನೆಯೊಂದು ನಡೆದಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸಪೇಟೆಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಅವರಿಂದಲೇ ಹಾಡನ್ನು ಬಿಡುಗಡೆ ಮಾಡಲು ಮುಂದಾಗಿದ್ದರು. ಹೀಗಾಗಿ ಇಡೀ ಚಿತ್ರತಂಡ ಹೊಸಪೇಟೆಗೆ ತೆರಳಿತ್ತು. ಆದರೆ ಈ ವೇಳೆ ಯಾರೋ ಕಿಡಿಗೇಡಿ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದು, ಈ ದೃಶ್ಯವು ಮೊಬೈಲ್ ನಲ್ಲಿ ಸೆರೆಯಾಗಿದೆ. ಹೌದು, ರಚಿತಾ ರಾಮ್ ಮಾತಾಡಲು ಮುಂದಾಗಿದ್ದು, ಅದೇ ವೇಳೆ ದರ್ಶನ್ ಕೂಡ ಮುಂದೆ ಬಂದಿದ್ದರು.
ಆ ವೇಳೆ ದರ್ಶನ್ ಮೇಲೆ ಚಪ್ಪಲಿ ಬಿದ್ದಿದೆ. ಅಂದಹಾಗೆ, ರಚಿತಾ ರಾಮ್ ವೇದಿಕೆ ಮೇಲೆ ಮಾತಾಡುವಾಗಲೇ ಇಂತಹದೊಂದು ಘಟನೆ ನಡೆದಿದ್ದು, ದರ್ಶನ್ ಮೇಲೆ ಚಪ್ಪಲಿ ಬಿದ್ದರೂ, ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಈ ವೇಳೆಯಲ್ಲಿ ಅಲ್ಲೇ ಇದ್ದ ಕಾನ್‌ಸ್ಟೆಬಲ್ ವೇದಿಕೆ ಮೇಲೆ ಬಿದ್ದ ಚಪ್ಪಲಿಯನ್ನು ಕೆಳಗೆ ಹಾಕಿದ್ದರು. ತಕ್ಷಣವೇ ರಚಿತಾ ರಾಮ್‌ಗೆ ಮಾತು ನಿಲ್ಲಿಸುವಂತೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಸದ್ಯಕ್ಕೆ ಕಿಡಿಗೇಡಿಗಳ ಈ ಕೃತ್ಯವು ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ನೋಡಿ ಡಿ ಬಾಸ್ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.
ಈ ಘಟನೆಯ ಬೆನ್ನಲ್ಲೇ ಚಂದನವನದ ನಟ ನಟಿಯರು ದರ್ಶನ್ ಅವರ ಪರವಾಗಿ ನಿಂತಿದ್ದಾರೆ.ಕಿಚ್ಚ ಸುದೀಪ್ ಸಹ ಟ್ವೀಟ್ ಮಾಡುವ ಮುಖಾಂತರ ದರ್ಶನ್ ಪರ ನಿಂತಿದ್ದಾರೆ ಕಿಚ್ಚ ಸುದೀಪ್ ಅವರು ಮಾಡಿರುವ ಟ್ವೀಟ್ ನಲ್ಲಿ, ” ನಮ್ಮ ನೆಲ, ಭಾಷೆ ಮತ್ತು ಸಂಸ್ಕೃತಿ ಎಲ್ಲವೂ ಪ್ರೀತಿ ಮತ್ತು ಗೌರವದಿಂದ ಕೂಡಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಚಪ್ಪಲಿ ಎಸೆತ, ದರ್ಶನ್ ಪರವಾಗಿ ನಿಂತ ಕಿಚ್ಚ ಸುದೀಪ್
ಪ್ರತಿಯೊಂದು ಸಮಸ್ಯೆಯೂ ಒಂದು ಪರಿಹಾರವನ್ನು ಹೊಂದಿದೆ ಮತ್ತು ಪ್ರತಿ ಪರಿಹಾರವನ್ನು ಕಂಡುಕೊಳ್ಳಲು ಹಲವಾರು ವಿಧಾನಗಳಿವೆ. ಪ್ರತಿಯೊಬ್ಬ ವ್ಯಕ್ತಿಯೂ ಘನತೆಯಿಂದ ವರ್ತಿಸಲು ಅರ್ಹರಾಗಿದ್ದಾರೆ ಮತ್ತು ಯಾವುದೇ ಸಮಸ್ಯೆಯನ್ನು ಶಾಂತ ರೀತಿಯಲ್ಲಿ ಪರಿಹರಿಸಬಹುದು. ನಾನು ನೋಡಿದ ವೀಡಿಯೋ ತುಂಬಾ ಆಘಾತಕಾರಿಯಾಗಿತ್ತು. ಈ ಘಟನೆ ವೇಳೆ ಸಿನಿಮಾದ ನಾಯಕಿ ಹಾಗೂ ಚಿತ್ರ ತಂಡದವರು ಅಲ್ಲಿದ್ದರು.
@KicchaSudeep ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು 🙂
— Darshan Thoogudeepa (@dasadarshan) December 21, 2022
ಈ ರೀತಿ ಸಾರ್ವಜನಿಕವಾಗಿ ಅವಮಾನಿಸುವಂತಹ ಪ್ರತಿಕ್ರಿಯೆಗಳಿಂದ ನಾವು ಕನ್ನಡಿಗರೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.ದರ್ಶನ್ ಹಾಗೂ ಪುನೀತ್ ಅಭಿಮಾನಿಗಳ ನಡುವೆ ಉತ್ತಮ ಭಾಂದವ್ಯ ಇಲ್ಲದಿರುವುದನ್ನು ಒಪ್ಪುತ್ತೇನೆ. ಆದರೆ ಇದು ಪುನೀತ್ ಅವರೇ ಮೆಚ್ಚಿ ಬೆಂಬಲಿಸುವ ಘಟನೆಯೇ? ಇದಕ್ಕೆ ಉತ್ತರ ಬಹುಶಃ ಅವರ ಪ್ರತಿಯೊಬ್ಬ ಪ್ರೀತಿಯ ಅಭಿಮಾನಿಗಳಿಗೆ ತಿಳಿದಿರುವ ವಿಷಯ” ಬರೆದು ಕೊಂಡಿದ್ದಾರೆ.