ಈಗಾಗಲೇ ವರ್ತೂರು ಸಂತೋಷ್ ಅವರನ್ನು ಬಿಗ್ ಬಾಸ್ ಮನೆಯಿಂದ ಅರೆಸ್ಟ್ ಮಾಡಿರುವ ಸುದ್ದಿ ನಿಮಗೆಲ್ಲ ತಿಳಿದೇ ಇದೆ. ಇವರ ಜೊತೆಗೆ ಇನ್ನೂ ಯಾರ್ಯಾರು ಸೆಲೆಬ್ರಿಟಿಗಳ ಸಮೇತ ಹುಲಿ ಉಗುರು ಪೆಂಡೆಂಟ್ ಧರಿಸಿರುವವರ ಮೇಲೆ ತನಿಖೆ ನಡೆಯುತ್ತಿದೆ. ಕಾನೂನು ಎಲ್ಲರಿಗೂ ಒಂದೇ ಯಾರನ್ನು ಬಿಡುವುದಿಲ್ಲ ಎಂದು ಹಠ ಹೊತ್ತು ಕುಳಿತ ಅರಣ್ಯ ಅಧಿಕಾರಿಗಳು.
ಬುಧವಾರ ಮಧ್ಯಾಹ್ನ ಅರಣ್ಯ ಅಧಿಕಾರಿಗಳು ಹುಲಿಯ ಉಗುರಿನ ಪೆಂಡೆಂಟ್ ಧರಿಸಿರುವ ಕಾರಣಕ್ಕೆ ಸೆಲೆಬ್ರಿಟಿಗಳ ಮನೆಯ ಮೇಲು ದಾಳಿಯನ್ನು ನಡೆಸಿದ್ದಾರೆ. ದರ್ಶನ್ ತೂಗುದೀಪ್ ಜಗ್ಗೇಶ್ ನಿಖಿಲ್ ಕುಮಾರಸ್ವಾಮಿ ಹಾಗೂ ರಾಕ್ ಲೈನ್ ವೆಂಕಟೇಶ್ ಅವರ ಮನೆಯ ಮೇಲೆ ದಾಳಿಯನ್ನು ನಡೆಸಿದ್ದಾರೆ ಎನ್ನುವುದಾಗಿ ವರದಿಗಳು ತಿಳಿಸಿವೆ.
ಎಷ್ಟು ದಿನದಿಂದ ಇವರೆಲ್ಲರೂ ಹುಲಿನ ಲಾಕೆಟ್ಅನ್ನು ಹಾಕಿಕೊಂಡು ಓಡಾಡಿದರು ಕೂಡ ಯಾರ ಗಮನಕ್ಕೂ ಬಂದಿರಲಿಲ್ಲ ಹಟತ್ತಾಗಿ ಅರಣ್ಯ ಅಧಿಕಾರಿಗಳ ಈ ನಿರ್ಧಾರ ಎಲ್ಲರಿಗೂ ಭಯವನ್ನು ಹುಟ್ಟಿಸುತ್ತಿದೆ ಕೆಲವು ಸೆಲೆಬ್ರಿಟಿಗಳ ಫೋಟೋವನ್ನು ನೋಡಿದಾಗ ಪುಲಿ ಉಗುರಿನ ಪೆಂಡೆಂಟ್ ಕಂಡು ಬಂದಿದ್ದು, ಅರಣ್ಯ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ.
ರಾಕ್ ಲೈನ್ ವೆಂಕಟೇಶ್ ಅವರು ಮನೆಯಲ್ಲಿ ಇಲ್ಲದ ಸಮಯವನ್ನು ಕೂಡ ಬಿಡದೆ ಅರಣ್ಯಾಧಿಕಾರಿಗಳು ಅವರ ಮನೆಯ ಮೇಲೆ ದಾಳಿಯನ್ನು ನಡೆಸಿದ್ದಾರೆ. ರಾಕ್ ಲೈನ್ ಅವರು ವಿದೇಶಕ್ಕೆ ಹೋಗಿದ್ದು, ಇತ್ತ ಅರಣ್ಯಾಧಿಕಾರಿಗಳು ಮನೆಯನ್ನು ತಡಕಾಡಿದರೂ ಕೂಡ ಏನು ಸಿಗಲಿಲ್ಲವಾದ್ದರಿಂದ ರಾಕ್ ಲೈನ್ ವೆಂಕಟೇಶ್ ಅವರು ವಿದೇಶದಿಂದ ಮರಳಿ ಬರುವವರಿಗೆ ಕಾಯಬೇಕಿದೆ.
ಉಳಿದ ಮೂವರ ಪೆಂಡೆಂಟ್ ಗಳನ್ನು ವಶಕ್ಕೆ ಪಡೆದಿತ್ತು ಅದನ್ನು ನಿಜವಾದ ಹುಲಿ ಉಗುರೇ ಎಂದು ಪರೀಕ್ಷಿಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ರಾಕ್ ಲೈನ್ ವೆಂಕಟೇಶ್ ಮನೆಯಲ್ಲಿ ಅವರ ಮಗ ಅಭಿಲಾಶ್ ಅವರು ಅಪ್ಪ ಬಂದ ನಂತರ ಅರಣ್ಯಾಧಿಕಾರಿಗಳಿಗೆ ಕಾಂಟ್ಯಾಕ್ಟ್ ಮಾಡುತ್ತಾರೆ ಎಂದು ಹೇಳಿದ್ದಾರೆ. ಸರ್ಚ್ ವಾರಕ್ಕ್ ನೊಂದಿಗೆ ಅವರ ಮನೆ ಎಷ್ಟು ಹುಡುಕಾಡಿದರೂ ಕೂಡ ಪೆಂಡೆಂಟ್ ಮಾತ್ರ ಸಿಗಲಿಲ್ಲ.
ಉಳಿದ ಮೂವರ ಮನೆಯಲ್ಲಿ ಪೆಂಡೆಂಟ್ ಸಿಕ್ಕಿದೆ ಆದರೆ ಅದನ್ನು ನಿಜವಾದ ಹುಲಿಯ ಉಗುರು ಅಂತ ಖಾತರಿ ಪಡಿಸಿಕೊಳ್ಳಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮೊದಲ ತಣಿಕೆಯಲ್ಲಿ ದರ್ಶನ್ ನಿಖಿಲ್ ಕುಮಾರಸ್ವಾಮಿ ಮತ್ತು ರಾಕ್ ಲೈನ್ ವೆಂಕಟೇಶ್ ಅವರ ಲಾಕೆಟ್ ಅಸಲಿ ಎಲ್ಲ ಎಂಬುದು ತಿಳಿದು ಬಂದಿದೆ ಆದರೂ ಕೂಡ ಇನ್ನೂ ಹೆಚ್ಚಿನ ಮಾಹಿತಿಗಾಗಿ forensic ರಿಪೋರ್ಟ್ ಬರಬೇಕಿದೆ..
ಜಗ್ಗೇಶ್ ಅವರ ಪೆಂಡೆಂಟ್ ಸ್ವಲ್ಪ ಕೊಳೆತ ಸ್ಥಿತಿಯಲ್ಲಿದೆ. ಇದು ತಮ್ಮ ತಾಯಿ ಕೊಟ್ಟಿರೋದು ನಾವು ಇದನ್ನ ತಾಯಿಯಂತೆ ಪೂಜಿಸಿ ಮನೆಯಲ್ಲಿ ಇಟ್ಟುಕೊಳ್ಳುತ್ತಿದ್ದೇವೆ ಅಂತ ಜಗ್ಗೇಶ್ ಅವರ ಪತ್ನಿ ಪರಿಮಳ ಅವರು ಹೇಳಿದ್ದಾರೆ. ಒಂದು ವೇಳೆ ಈ ಮೂವರ ಪೆಂಡೆಂಟ್ ಹುಲಿಯ ಉಗುರಿನದ್ದೇ ಆಗಿದ್ದರೆ, ಇವರನ್ನು ಕೂಡ ಕರೆಸಿ ವಿಚಾರಣೆ ನಡೆಸಲಾಗುವುದು ಎಂದು ಅರಣ್ಯ ಅಧಿಕಾರಿ ರವೀಂದರ್ ಅವರು ಹೇಳಿದ್ದಾರೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.