ಮಾಲಾಶ್ರೀ ಹುಟ್ಟು ಹಬ್ಬಕ್ಕೆ ಮನೆಗೆ ಬಂದು ಸರ್ಪ್ರೈಸ್ ಕೊಟ್ಟ ಡಿಬಾಸ್! ನೆಚ್ಚಿನ ನಟಿಗೆ ಡಿಬಾಸ್ ಕೊಟ್ಟ ಗಿಫ್ಟ್ ಏನು ಗೊತ್ತಾ.? ಆ ಖುಷಿಯ ಕ್ಷಣ ಹೇಗಿತ್ತು ನೋಡಿ

darshan and malashree together

darshan and malashree together : ಪ್ರೀತಿಯ ವೀಕ್ಷಕರೆ, ಅಂದು ಕನ್ನಡ ಸಿನೆಮಾಕ್ಷೇತ್ರದಲ್ಲಿ ರಾಣಿಯಂತೆ ಮೆರೆದು ಸಿನಿ ಪ್ರೇಕ್ಷಕರ ಕನಸಿನ ರಾಣಿಯಾಗಿ ಇಂದಿಗೂ ಅವರ ಸಿನೆಮಾಗಳನ್ನು ನೋಡಿ ಎಂಜಾಯ್ ಮಾಡುತ್ತಿರುವ ಅವರ ಸಹಸ್ರರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ನಟಿ ಮಾಲಾಶ್ರೀ ಅವರು ಜನಿಸಿದ್ದು ಆಗಸ್ಟ್ 10, 1973 ರಲ್ಲಿ. ಇವರು ಮೊದಲಿಗೆ ಬಾಲ ನಟಿಯಾಗಿ ಸಿನೆಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು. ಇದುವರೆಗೂ ಸುಮಾರು 34 ಸಿನೆಮಾಗಳಲ್ಲಿ ಬಾಲನಟಿಯಾಗಿ ನಟಿಸಿ ಹೆಸರು ಮಾಡಿದ್ದಾರೆ.
ಇವರು 1989 ರಲ್ಲಿ ಸರ್ವಕಾಲಿಕಾ ಜನಪ್ರಿಯಾ “ನಂಜುಂಡಿ ಕಲ್ಯಾಣ” ಚಿತ್ರದಲ್ಲಿ ಒಬ್ಬ ಅಹಂಕಾರಿ, ಗಂಡುಬೀರಿ ಹೆಣ್ಣಾಗಿ ಅವರ ನಟನೆ ಅಪಾರ ಕೀರ್ತಿ ತಂದುಕೊಟ್ಟಿತು. ಗಜಪತಿ ಗರ್ವಭಂಗ, ಪ್ರತಾಪ್, ಕಿತ್ತೂರು ಹುಲಿ ಮತ್ತು ತವರುಮನೆ, ಚಾಮುಂಡಿ, ಕಿರಣ್ ಬೇಡಿ, ಶಕ್ತಿ, ವೀರ ಸೇರಿದಂತೆ ಇನ್ನು ಹಲವು ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವುಗಳಲ್ಲಿ ಹಲವು ಸಿನೆಮಾಗಳು ಇವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟವು. ಹೀಗೆ ಕನ್ನಡ ಚಿತ್ರರಂಗದ ಪ್ರಸಿದ್ದ ನಟಿಯಾಗಿರುವ ಇವರು ನಾಯಕನ ಪಾತ್ರಗಳಲ್ಲಿ ನಟಿಸುವುದು ಇವರ ವಿಶೇಷವಾಗಿದೆ.

ಇದರಿಂದ ಇವರ ಅಭಿನಯಕ್ಕೆ ಹಲವಾರು ಪ್ರಶಸ್ತಿಗಳು ದೊರಕಿದೆ. ಅಂದಹಾಗೆ ಮೊನ್ನೆ ಮಾಲಾಶ್ರೀ ಅವರ ಹುಟ್ಟುಹಬ್ಬ ಅದ್ದೂರಿಯಾಗಿ ಆಚರಿಸಿಕೊಂಡರು. ನಟಿ ಮಾಲಾಶ್ರೀ ಅವರ ಹುಟ್ಟುಹಬ್ಬಕ್ಕೆ ನಟ ದರ್ಶನ್ ಅವರು ವಿಶೇಷವಾದ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ. ಆ ವಿಶೇಷ ಉಡುಗೊರೆಯ ಬಗ್ಗೆ ತಿಳಿದರೆ ನಿಮಗೆ ಆಶ್ಚರ್ಯಆಗೋದು ಗ್ಯಾರಂಟಿ. ಮಾಲಾಶ್ರೀ ಅವರ ಪತಿಯ ಅಗಲಿಕೆಯ ನಂತರ ತನ್ನ ಇಬ್ಬರೂ ಮಕ್ಕಳ ಜವಾಬ್ದಾರಿಯನ್ನು ತಾವೇ ತೆಗೆದುಕೊಂಡಿದ್ದಾರೆ.

ಮಕ್ಕಳ ಜವಾಬ್ದಾರಿಯ ಜೊತೆಗೆ ಸಿನಿ ಕೆರೆಯರ್ ನತ್ತ ಕೂಡ ಗಮನ ಹರಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಮಗಳನ್ನು ಸಿನೆಮಾರಂಗಕ್ಕೆ ಪರಿಚಯಿಸಿದ್ದಾರೆ. ಮೊದಲಿನಿಂದಲೂ ದರ್ಶನ್ ಹಾಗೂ ಮಾಲಾಶ್ರೀ ಅವರು ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದಾರೆ. ಇನ್ನೊಂದು ಖುಷಿಯಾ ವಿಚಾರ ಅಂದರೆ ಮಾಲಾಶ್ರೀ ಅವರ ಮಗಳು ಡಿಬಾಸ್ ಅವರ ಜೊತೆಗೆ ಮೊದಲ ಬಾರಿಗೆ ಸಿನೆಮಾರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹೌದು ದರ್ಶನ್ ಅವರ ಡಿ56 ಚಿತ್ರಕ್ಕೆ ನಟಿ ಮಾಲಾಶ್ರೀ ಅವರ ಮಗಳು ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಹೌದು ಆಗಸ್ಟ್ 05 ರಂದು ವರಮಹಾಲಕ್ಷ್ಮಿ ಹಬ್ಬದ ಶುಭ ದಿನದಂದೆ ಹೊಸ ಚಿತ್ರದ ನಾಯಕಿ ಯಾರೂ ಎಂಬುದು ರಿವೀಲ್ ಆಗಿದೆ. ಸಿನೆಮಾರಂಗಕ್ಕೆ ರಾಧಾನ ರಾಮ್ ಎಂಬ ಹೆಸರಿನಿಂದ ಪರಿಚಯವಾಗಿದ್ದರೆ. ಅದರ ಜೊತೆಗೆ, ವರಮಹಾಲಕ್ಷ್ಮಿ ಹಬ್ಬದ ದಿನ ಈ ಬಗ್ಗೆ ಸ್ವತಃ ಮಾಲಾಶ್ರೀ ಅವರೇ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ‘ನನ್ನ ಮುದ್ದಿನ ಮಗಳು ಇಂದು ನನಗೆ ಅಪಾರ ಪ್ರೀತಿ ಹಾಗೂ ಬದುಕು ಕಟ್ಟಿಕೊಟ್ಟ ಚಿತ್ರರಂಗಕ್ಕೆ ಕಲಿಡುತ್ತಿದ್ದಾಳೆ.

ನನಗೆ ನೀಡಿದ ಪ್ರೀತಿ ಮತ್ತು ಆಶೀರ್ವಾದ ಅವಳ ಮೇಲೂ ಇರಲಿ ಎಂದು ಆಶಿಸುತ್ತೇನೆ’ ಎಂದು ಟ್ವಿಟ್ಟರ್ ನಲ್ಲಿ ಮಾಲಾಶ್ರೀ ಬರೆದುಕೊಂಡಿದ್ದಾರೆ. ಇನ್ನು ಮಾಲಾಶ್ರೀ ಮಗಳು ಅನನ್ಯಳು ರಾಧಾನ ರಾಮ್ ಆಗಿ ಸಿನೆಮಾರಂಗಕ್ಕೆ ಎಂಟ್ರಿ ಕೊಟ್ಟಿರುವುದು ಮಾಲಾಶ್ರೀ ಅವರಿಗೆ ಸಂತಸವನ್ನು ನೀಡಿದೆ. ಹೌದು ಮಾಲಾಶ್ರೀ ಅವರ ಮಗಳಿಗೆ ಇನ್ನು ಚಿಕ್ಕ ವಯಸ್ಸು. ಕೇವಲ 20 ವರ್ಷ ವಯಸ್ಸು ಅಗಿದ್ದು ಸಿನೆಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ನಟಿ ಮಾಲಾಶ್ರೀಯವರಿಗೆ ಮೊನ್ನೆ ಹುಟ್ಟುಹಬ್ಬದ ಸಂಭ್ರಮ.

ತನ್ನ ಇಬ್ಬರೂ ಮಕ್ಕಳ ಜೊತೆಗೆ ಮಾಲಾಶ್ರೀಯವರು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇನ್ನು ಮಾಲಾಶ್ರೀಯವರ ಹುಟ್ಟುಹಬ್ಬ ಎಂದು ತಿಳಿಸಿದ ಕೂಡಲೇ ದರ್ಶನ್ ಅವರು ನೇರವಾಗಿ ಮಾಲಾಶ್ರೀ ಅವರ ಮೆನೆಗೆ ಬಂದು ಸುರ್ಪ್ರೈಸ್ ನೀಡಿದ್ದಾರೆ. ಮಾಲಾಶ್ರೀಯವರನ್ನು ತಬ್ಬಿಕೊಂಡು ಕೆನ್ನೆ ಹಿಂಡಿದ್ದಾರೆ. ತನ್ನ ನೆಚ್ಚಿನ ನಟಿಗೆ ಹೂ ಗುಚ್ಛ ನೀಡಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಮಾಹಿತಿ ನಿಮಗೆ ಇಷ್ಟಾವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *