ರಸ್ತೆಯ ಬದಿಯಲ್ಲಿ ಗೋಲ್ಗಪ್ಪ ಪಾನಿಪುರಿ ಮಾರಾಟ ಮಾಡುವವರ ದಿನದ ಆದಾಯವೆಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ!!!

ಸಂಜೆಯ ಸಮಯದಲ್ಲಿ ಹೊರಗಡೆ ಹೋದರೆ ಸಾಕಷ್ಟು ಚಾಟ್ಸ್ ಶಾಪ್ (Chats Shop) ಗಳು ತನ್ನ ವ್ಯಾಪಾರವನ್ನು ಶುರು ಮಾಡಿಟ್ಟಿರುತ್ತವೆ. ಹೀಗಾಗಿ ಸಂಜೆಯ ವೇಳೆಗೆ ಒಂದು ರೌಂಡ್ ಹಾಕಿಕೊಂಡು ಬರೋಣ ಎಂದು ಹೊರಗಡೆ ಹೋದರೆ ಮೊದಲು ಕಣ್ಣು ಹಾಗೂ ಮನಸ್ಸು ಚಾಟ್ ಅಂಗಡಿಗಳತ್ತ. ಅದರಲ್ಲಿಯೂ ಆಹಾರಪ್ರಿಯರಂತೂ ನಾಲಿಗೆ ರುಚಿ ಚಾಟ್ಸ್ ಫುಡ್ ಗಳನ್ನು ಹೆಚ್ಚು ಇಷ್ಟ ಪಡುತ್ತಾರೆ.

ಅದಲ್ಲದೇ ಈ ಪಾನಿಪುರಿ ಹಾಗೂ ಗೋಲ್ಗಪ್ಪ ಗಳಿಗೆ ಯುವಕ ಯುವತಿಯರು ಫಿದಾ ಆಗಿ ಹೋಗಿದ್ದಾರೆ. ಸಂಜೆಯ ಸಮಯದಲ್ಲಿ ಬೀದಿ ಬದಿಗಳಲ್ಲಿ ಸಾಲು ಸಾಲು ಪಾನಿಪುರಿ ಹಾಗೂ ಗೋಲ್ಗಪ್ಪ ಅಂಗಡಿಗಳು ಕಾಣ ಸಿಗುತ್ತವೆ. 20 ರಿಂದ 30 ರೂಪಾಯಿಗೆ ಸಿಗುವ ಚಾಟ್ಸ್ ಹಾಗೂ ಗೋಲ್ಗಪ್ಪವನ್ನು ಇಷ್ಟ ಪಟ್ಟೆ ಸವಿಯುವವರು ಹೆಚ್ಚು ಎನ್ನಬಹುದು. ಆದರೆ ಈ ಗೋಲ್ಗಪ್ಪ ಅಂಗಡಿಯವನಿಗೆ ದಿನಕ್ಕೆ ಎಷ್ಟು ವ್ಯಾಪಾರವಾಗಬಹುದು ಎನ್ನುವ ಕುತೂಹಲವಿರುತ್ತದೆ.

ಗಂಟೆಗಟ್ಟಲೆ ನಿಂತುಕೊಂಡು ಗ್ರಾಹಕರಿಗೆ ಪಾನಿಪುರಿ ಹಾಗೂ ಗೋಲ್ಗಪ್ಪವನ್ನು ನೀಡುವ ಅಂಗಡಿಯವನಿಗೆ ತನ್ನ ಹೊಟ್ಟೆ ತುಂಬಿಸಿಕೊಳ್ಳುವಷ್ಟು ವ್ಯಾಪಾರವಾಗುತ್ತದೆ ಎಂದೇ ಭಾವಿಸುತ್ತೇವೆ. ಆದರೆ ಈ ವಿಡಿಯೋದಲ್ಲಿ ಅಸಲಿ ವಿಚಾರವೊಂದು ರಿವೀಲ್ ಆಗಿದೆ. ಈ ವಿಡಿಯೋದಲ್ಲಿ ಗೋಲ್ಗಪ್ಪ ಅಂಗಡಿಯವನು ತನ್ನ ದಿನದ ಸಂಪಾದನೆ (Daily Income) ಎಷ್ಟು ಎನ್ನುವುದನ್ನು ರಿವೀಲ್ ಮಾಡಿದ್ದಾನೆ.ಈ ವಿಡಿಯೋವನ್ನು ವಿಜಯ್ (@vijay_vox_) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆ (Instagram Account) ಯಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ವಿಜಯ್ ಅವರು ಬೀದಿಬದಿಯಲ್ಲಿ ಪಾನಿಪುರಿ ಮಾರಾಟ ಮಾಡುವಂತಹ ವ್ಯಾಪಾರಿಯ ಬಳಿಯಲ್ಲಿ ನಿಮ್ಮ ದಿನದ ಸಂಪಾದನೆ ಎಷ್ಟು ಎಂದು ಕೇಳಿದ್ದು, ಆ ವೇಳೆಯಲ್ಲಿ ಪಾನಿಪುರಿ ಮಾರಾಟಗಾರ ನಾನು ಒಂದು ದಿನದಲ್ಲಿ 2500 ರೂ. ಸಂಪಾದನೆ ಮಾಡುತ್ತೇನೆ ಎಂದಿದ್ದಾರೆ.ಈ ವಿಡಿಯೋ ನೋಡಿದ ನೆಟ್ಟಿಗರು ಬಾಯಿಗೆ ಕೈ ಹಿಟ್ಟುಕೊಂಡಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ 42.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 1.6 ಮಿಲಿಯನ್ ಲೈಕ್ಸ್ ಗಳು ಬಂದಿವೆ.

ಇದೇ ಡಿಸೆಂಬರ್ 6 ರಂದು ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ನಾನಾ ರೀತಿಯ ಕಾಮೆಂಟ್ ಗಳು ಹರಿದು ಬಂದಿವೆ. ಕೆಲವರು ಈ ವಿಡಿಯೋ ಕಂಡು, ʼಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯುತ್ತಿದ್ದಾರೆʼ ಎಂದರೆ, ಮತ್ತೊಬ್ಬರು ʼಅವರು ದಿನವಿಡೀ ನಿಂತುಕೊಂಡು ಕಷ್ಟಪಟ್ಟು ಕೆಲಸ ಮಾಡುತ್ತಾರೆ, ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿದೆʼ ಎಂದಿದ್ದಾರೆ. ಹೀಗೆ ನಾನಾ ರೀತಿಯ ಮೆಚ್ಚುಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

Leave a Reply

Your email address will not be published. Required fields are marked *