ವೈದ್ಯೆಯನ್ನು ಮದುವೆ ಆಗೋಕೆ ಬಿಎಂಡಬ್ಲ್ಯೂ ಕಾರು ಕೇಳಿದ ಪ್ರೀತಿಸಿದ ಹುಡುಗ, ನಂತರ ಏನಾಯಿತು ಗೊತ್ತಾ? ಕೇಳಿದ್ರೆ ಅಯ್ಯೋ ಹೇಳ್ತೀರಾ

ಮದುವೆ (Marriage) ಎನ್ನುವುದು ಪ್ರತಿಯೊಬ್ಬರ ಜೀವನದ ತಿರುವಿನ ಘಟ್ಟ. ಹೀಗಾಗಿ ಕೆಲವರಿಗೆ ಈ ಮದುವೆ ಹೊಸ ಬದುಕನ್ನು ಕಟ್ಟಿಕೊಟ್ಟರೆ ಕೆಲವರಿಗೆ ನುಂಗಲಾರದ ತುತ್ತಾಗುತ್ತವೆ. ಹೀಗಾಗಿ ತಮಗೆ ಒಪ್ಪುವ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಎಷ್ಟು ಜಾಗ್ರತೆ ವಹಿಸಿದರೂ ಸಾಲುವುದಿಲ್ಲ. ಇಲ್ಲೊಂದು ಕಡೆ ಮದುವೆಯೂ ಅರ್ಧಕ್ಕೆ ನಿಂತಿದೆ. ಈ ಕಾರಣದಿಂದ ವೈದ್ಯೆಯೊಬ್ಬರು ಆ-ತ್ಮಹತ್ಯೆ ಮಾಡಿಕೊಂಡಿದ್ದಾರೆ ಈ ಘಟನೆ ನಡೆಸಿರುವುದು ಕೇರಳ (Kerala) ದಲ್ಲಿ ನಡೆದಿದೆ.

ತಾನು ಪ್ರೀತಿಸಿದ ಹುಡುಗನ ಜೊತೆಗೆ ವೈದ್ಯೆಯೊಬ್ಬಳು ಮದುವೆಯಾಗಲು ನಿರ್ಧಾರ ಮಾಡಿದ್ದಳು. ಎಲ್ಲರ ಒಪ್ಪಿಗೆ ಪಡೆದು ಪ್ರಿಯಕರನ ಜೊತೆಗೆ ಮದುವೆ ನಿಶ್ಚಯವಾಗಿತ್ತು. ಹೀಗಿರುವಾಗ ವರದಕ್ಷಿಣೆಯ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಗಳ ನಡೆದಿದ್ದು, ಮದುವೆಯಾಗಲ್ಲ ಎಂದು ಮನ ಮೆಚ್ಚಿದ ಹುಡುಗನು ಹೇಳಿದ್ದಾನೆ. ಇದರಿಂದ ತೀರಾ ನೊಂ-ದ ಯುವತಿ ಸಹನಾ (Sahana) ಳು ಜೀ-ವ ಕಳೆದುಕೊಂಡಿದ್ದಾಳೆ.

ಹುಡುಗನಿಗೆ ವ-ರದಕ್ಷಿಣೆಯಾಗಿ 150 ಚಿನ್ನದ ನಾಣ್ಯಗಳು, 15 ಎಕರೆ ಭೂಮಿ ಮತ್ತು ಬಿಎಂಡಬ್ಲ್ಯು ಕಾರಿಗೆ ಬೇಡಿಕೆ ಇಟ್ಟಿದ್ದರಂತೆ. ಅಷ್ಟು ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಂತೆ ಮದುವೆಯನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದರಂತೆ. ಈ ವಿಚಾರದಿಂದಾಗಿ ವೈದ್ಯೆ ಸಹನಾಳು ಮಾ-ನಸಿಕವಾಗಿ ಕು-ಗ್ಗಿದ್ದು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ.

ಈ ಘಟನೆಗೆ ಸಂಬಂಧ ಪಟ್ಟಂತೆ ಆಕೆಯ ಪ್ರಿಯಕರನ ವಿರುದ್ಧ ಪ್ರಕರಣ ಕಾಯ್ದೆಯಡಿ ವರದಕ್ಷಿಣೆ ಬೇಡಿಕೆ, ಆತ್ಮಹತ್ಯೆಗೆ ಪ್ರಚೋದನೆ ಸೇರಿದಂತೆ ಪ್ರಕರಣ ದಾಖಲು ಮಾಡಲಾಗಿದೆ. ಈ ಘಟನೆಗೆ ಸಂಬಂಧ ಪಟ್ಟಂತೆ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ (Veena George) ಪ್ರತಿಕ್ರಿಯಿಸಿದ್ದಾರೆ.

ತನಿಖೆಗೆ ಆದೇಶ ನೀಡಿದ್ದು, ಇದೇ ಡಿಸೆಂಬರ್ 14ರೊಳಗೆ ಸಂಪೂರ್ಣ ವರದಿಯೊಂದಿಗೆ ಆಯೋಗದ ಮುಂದೆ ಹಾಜರಾಗುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದ್ದಾರೆ. ತನಿಖೆ ಬಳಿಕವಷ್ಟೇ ಈ ಘಟನೆಗೆ ಸಂಬಂಧ ಪಟ್ಟಂತೆ ಅಸಲಿ ವಿಚಾರಗಳು ಹೊರ ಬೀಳಲಿದ್ದು, ಆದರೆ ವ-ರದಕ್ಷಿಣೆ ಭೂ-ತಕ್ಕೆ ಬದುಕಿ ಬಾಳಬೇಕಾಗಿದ್ದ ಯುವತಿ ಜೀ-ವ ಕಳೆದುಕೊಂಡಿದ್ದು ನಿಜಕ್ಕೂ ನೋವಿನ ಸಂಗತಿ.

Leave a Reply

Your email address will not be published. Required fields are marked *