ಸರಿಗಮಪ ಖ್ಯಾತಿಯ ರೇವಣಸಿದ್ದ ಫುಲಾರಿಯವರ ಹುಟ್ಟುಹಬ್ಬ ಆಚರಿಸಿ ಗಿಫ್ಟ್ ಕೊಟ್ಟ ಡಿ ಬಾಸ್ ದರ್ಶನ್, ಅಪರೂಪದ ಫೋಟೋಗಳು ವೈರಲ್!!

ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಅವರು ಕನ್ನಡ ಸಿನಿಮಾರಂಗದ ಬಹುಬೇಡಿಕೆಯ ನಟರಾಗಿ ಗುರುತಿಸಿಕೊಂಡಿದ್ದಾರೆ. ಸದ್ಯಕ್ಕೆ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದು ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಸ್ಟಾರ್ ನಟ ಎನ್ನುವುದನ್ನು ಮರೆತು ಸಾಮಾನ್ಯರಂತೆ ಬೆರೆಯುತ್ತಾರೆ. ಕಷ್ಟ ಎಂದು ಯಾರೇ ಬಂದರೂ ತನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುವ ಮನೋಭಾವ ಇವರದ್ದಾಗಿದೆ.

ಡಿ ಬಾಸ್ (D Boss) ಅವರು ಅಭಿಮಾನಿಗಳನ್ನು ದೇವರು ಎಂದು ಕೊಂಡಿದ್ದಾರೆ.ಹೀಗಾಗಿ ಅಭಿಮಾನಿಗಳನ್ನು ದೇವರು ಎಂದು ಕಾಣುವುದಕ್ಕೆ ಈಗಾಗಲೇ ಸಾಕಷ್ಟು ಉದಾಹರಣೆಗಳು ಇವೆ. ಹೌದು, ಅಭಿಮಾನಿಗಳ ಜೊತೆಗೆ ಒಳ್ಳೆಯ ಬಾಂಧವ್ಯ ಹೊಂದಿದ್ದು, ತನ್ನ ಫ್ಯಾನ್ಸ್ ಗಳ ಆಸೆಯನ್ನು ಈಡೇರಿಸುತ್ತಾರೆ.

ಆದರೆ ಇದೀಗ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ ಇವರು ತಮ್ಮ ಅಭಿಮಾನಿಯಾದ ಜೀ ಕನ್ನಡ ಸರಿಗಮಪ (Zee Kannada SARIGAMA) ಖ್ಯಾತಿಯ ಗಾಯಕ ಸೊಲ್ಲಾಪುರ (Sollapuara) ದ ರೇವಣಸಿದ್ದ ಫುಲಾರಿ (Revanasiddha Pulari) ಅವರನ್ನು ತಮ್ಮ ಮನೆಗೆ ಕರೆಸಿಕೊಂಡು ರೇವಣ್ಣನ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ.ತಮ್ಮ ಅಭಿಮಾನಿಗೆ ಹುಟ್ಟುಹಬ್ಬವನ್ನು ಕೋರಿದ್ದಾರೆ. ಈ ಅಪರೂಪದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ನಟ ದರ್ಶನ್ ಅವರ ದೊಡ್ಡ ಗುಣಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕ್ರಾಂತಿ ಸಿನಿಮಾದ ಬಳಿಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ದರ್ಶನ್ ಅವರು ಕಾಟೇರ (Katera) ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.ಅದಲ್ಲದೇ ನಟ ದರ್ಶನ್ ಹಾಗೂ ಜೋಗಿ ಪ್ರೇಮ್ (Jogi Prem) ಕಾಂಬಿನೇಷನ್ನ ಸಿನಿಮಾ ಅನೌನ್ಸ್ ಆಗಿದೆ. ಈ ಚಿತ್ರಕ್ಕೆ ಕೆವಿಎನ್ (KVN) ಸಂಸ್ಥೆ ಬಂಡವಾಳ ಹೂಡಿಕೆ ಮಾಡುತ್ತಿದ್ದು ಈ ಸುದ್ದಿ ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ.

ಈಗಾಗಲೇ ತರುಣ್ ಸುಧೀರ್ (Tarun Sudheer) ನಿರ್ದೇಶನದ ಕಾಟೇರ ಸಿನಿಮಾದ ಶೂಟಿಂಗ್ ಬ್ಯುಸಿಯಾಗಿರುವ ಕಾರಣ, ಶೂಟಿಂಗ್ ಮುಗಿದ ಕೂಡಲೇ ಮಿಲನ ಪ್ರಕಾಶ್ (Milana Prakash) ನಿರ್ದೇಶನದ ಈ ಹೊಸ ಚಿತ್ರದ ತಂಡದ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ.ಈಗಾಗಲೇ ದರ್ಶನ್ ಅವರು ಕೈಗೆತ್ತಿಕೊಂಡಿರುವ.

‘ಕಾಟೇರ’ (Katera) ಸಿನಿಮಾವು, 70ರ ದಶಕದ ಕತೆಯನ್ನು ಒಳಗೊಂಡಿದೆ. ಈ ಸಿನಿಮಾದ ಮೂಲಕ ಮಾಲಾಶ್ರೀ ಮಗಳು ರಾಧನಾ ರಾಮ್ (Radhana Ram) ಸ್ಯಾಂಡಲ್ ವುಡ್ ಗೆ ಲಾಂಚ್ ಆಗುತ್ತಿದ್ದು, ಸದ್ಯಕ್ಕೆ ಸಿನಿಮಾದ ಶೂಟಿಂಗ್ ಬಿರುಸಿನಿಂದ ಸಾಗುತ್ತಿದೆ. ನಟ ದರ್ಶನ್ ಅವರ ಕಾಟೇರ ಸಿನಿಮಾದ ಬಗ್ಗೆ ಬಹುನಿರೀಕ್ಷೆಯಿದೆ.

Leave a Reply

Your email address will not be published. Required fields are marked *