ವಿಭಿನ್ನವಾಗಿ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ ಮುದ್ದಾದ ಜೋಡಿ, ಫೋಟೋಗಳು ವೈರಲ್

ಇತ್ತೀಚೆಗಿನ ದಿನಗಳಲ್ಲಿ ಪ್ರತಿಯೊಬ್ಬರು ಕೂಡ ಎಲ್ಲಾ ಕ್ಷಣಗಳನ್ನು ಜೋಪಾನವಾಗಿ ಕೂಡಿಡಲು ಬಯಸುತ್ತಾರೆ. ಹೀಗಾಗಿ ಎಂದಿಗೂ ನೆನಪಿನಲ್ಲಿ ಉಳಿಯುವಂತೆ ಮಾಡಲು ಜನರು ಏನೇನೋ ಹೊಸ ಹೊಸ ಕಾನ್ಸೆಪ್ಟ್ ಪರಿಚಯ ಮಾಡುತ್ತಾರೆ. ಅದರಲ್ಲೂ ಇತ್ತೀಚಿನ ಕೆಲ ವರ್ಷಗಳಿಂದ ಮದುವೆ ಫೋಟೋ ಶೂಟ್ (Wedding Photoshoot), ಪ್ರೀ ವೆಡ್ಡಿಂಗ್ ಫೋಟೋಶೂಟ್ (Pre Wedding Photoshoot), ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್ (Post Wedding Photoshoot), ಬೇಬಿ ಬಂಪ್ ಫೋಟೋ ಶೂಟ್ (Baby Bump Photoshoot)ಎಂದು ಟ್ರೆಂಡ್ ಆಗುತ್ತಿದೆ.

ಅದರಲ್ಲಿಯು ಸೆಲೆಬ್ರಿಟಿಗಳು ಬೇಬಿ ಬಂಪ್ ಫೋಟೋ ಶೂಟ್ ಅನ್ನು ವಿಭಿನ್ನವಾಗಿ ಮಾಡಲು ಬಯಸುತ್ತಾರೆ. ಯಾವುದೇ ಮಹಿಳೆಗೆ ತಾಯಿಯಾಗುವುದು ತುಂಬಾ ಸುಂದರವಾದ ಕ್ಷಣ. ಗರ್ಭಾವಸ್ಥೆಯಲ್ಲಿ, ಭ್ರೂಣದ ಆರೈಕೆ, ಅದರ ಬೆಳವಣಿಗೆಗೆ ಅನುಕೂಲಕರ ವಾತಾವರಣ ಹಾಗೂ ಆಹಾರವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.

ಅದರ ಜೊತೆಗೆ ಗರ್ಭಿಣಿ ಮಹಿಳೆಯರ ಆಸೆ ಹಾಗೂ ಬಯಕೆಯನ್ನು ಕುಟುಂಬದವರು ಈಡೇರಿಸುತ್ತಾರೆಸುತ್ತಾರೆ. ಹೀಗಾಗಿ ಹೆಚ್ಚಿನ ಮಹಿಳೆಯರು ತಾಯಿಯಾಗುವ ಕ್ಷಣವನ್ನು ಜೋಪಾನವಾಗಿ ನೆನಪಿನಲ್ಲಿ ಇರಿಸಲು ಬೇಬಿ ಬಂಪ್ ಫೋಟೋ ಶೂಟ್ (Baby Bump Photoshoot) ಮಾಡಿಸಿಕೊಳ್ಳುತ್ತಾರೆ. ಸೆಲೆಬ್ರಿಟಿಗಳು ಮಾತ್ರವಲ್ಲದೇ ಸಾಮಾನ್ಯ ಜನರು ಕೂಡ ವಿಭಿನ್ನವಾಗಿ ಫೋಟೋ ಶೂಟ್ ಮಾಡಿಸುವುದನ್ನು ನೋಡುತ್ತೇವೆ.

ಆದರೆ ಇದೀಗ ಒಂದು ಜೋಡಿಯ ಬೇಬಿ ಬಂಪ್ ಫೋಟೋ ಶೂಟ್ ಫೋಟೋಗಳು ವೈರಲ್ ಆಗಿವೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಜೋಡಿಯ ಬೇಬಿ ಬಂಪ್ ಫೋಟೋ ಶೂಟ್ ಗಳು ವಿಭಿನ್ನವಾಗಿ ಮಾಡಲಾಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಈ ಫೋಟೋದಲ್ಲಿ ಗರ್ಭಿಣಿ ಮಹಿಳೆಯು ಬ್ಲೌಸ್ ಹಾಕದೇ ಸೀರೆಯನ್ನು ಮೈಗೆ ಸುತ್ತಿಕೊಂಡಿದ್ದಾಳೆ. ಇತ್ತ ಪತಿಯು ಆಕೆಯ ಮೇಲೆ ಪುಷ್ಪಗಳ ಎಸಳು ಕೂಡಿರುವ ನೀರನ್ನು ತಲೆಗೆ ಸುರಿಯುತ್ತಿದ್ದಾನೆ.

ನಿಭಾರಣ ಸುಂದರಿಯಾಗಿದ್ದು ರೆಡ್ (Red) ಹಾಗೂ ಮೆರೂನ್ (Merun) ಬಣ್ಣದ ಸೀರೆ ಉಟ್ಟುಕೊಂಡಿದ್ದಾಳೆ. ಆಕೆಯ ಪತಿಯು ಆರೆಂಜ್ ಕಲರ್ ಶರ್ಟ್ (Orange Colour Shirt) ಹಾಗೂ ವೈಟ್ (White) ಪಂಚೆ ಧರಿಸಿದ್ದು, ವಿಭಿನ್ನ ರೀತಿಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಆದರೆ ಈ ಜೋಡಿಯ ಹೆಸರು ಹಾಗೂ ಎಲ್ಲಿಯವರು ಎನ್ನುವುದು ಮಾತ್ರ ತಿಳಿದಿಲ್ಲ. ಆದರೆ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *