ನಮ್ಮ ಸಂಪದ್ರಾಯ ಹಾಗೂ ಸಂಸ್ಕೃತಿಯನ್ನು ಮರೆತು ವಿದೇಶಿ ಸಂಸ್ಕೃತಿಯನ್ನು ಬೆನ್ನತ್ತಿ ಹೋಗುವ ಜನರ ನಡುವೆ ಈ ಆಟಗಾರ ನಿಜಕ್ಕೂ ಮಾದರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೌದು, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಖ್ಯಾತ ಆಲ್‌ರೌಂಡರ್ ಹಾಗೂ ಆರ್‌ಸಿಬಿ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ (Glen Maxell) ಅವರು ತನ್ನ ಮಡದಿಗೆ ಭಾರತೀಯ ಸಂಪ್ರದಾಯ ದಂತೆ ಸೀಮಂತ ಶಾಸ್ತ್ರ ಮಾಡಿ ಸುದ್ದಿಯಾಗಿದ್ದಾರೆ.
ಗ್ಲೆನ್ ಮ್ಯಾಕ್ಸ್‌ವೆಲ್ (Glen Maxell) ಶೀಘ್ರದಲ್ಲೇ ತಂದೆಯಾಗುತ್ತಿದ್ದು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತನ್ನ ಮುದ್ದಿನ ಮಡದಿ ಭಾರತ ಮೂಲದ ಅವರ ಪತ್ನಿ ವಿನಿ ರಾಮನ್‌ಗೆ (Vini Maxwell) ಇತ್ತೀಚೆಗೆ ಭಾರತೀಯ ಸಾಂಪ್ರದಾಯದಂತೆ ಸೀಮಂತ ಮಾಡಿದ್ದಾರೆ. ಭಾರತ ಮೂಲದ ವಿನಿ ರಾಮನ್ ಅವರು ಆಸ್ಟ್ರೇಲಿಯಾದಲ್ಲೇ ಹುಟ್ಟಿ ಬೆಳೆದಿದ್ದು, ಆದರೆ ಸೀಮಂತವನ್ನು ತನ್ನ ತಾಯಿ ನಾಡ ರೀತಿಯಲ್ಲಿ ಮಾಡಿಸಿಕೊಂಡಿದ್ದಾರೆ.

ಈ ಸೀಮಂತದ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಅವರು, ಸಂಪ್ರದಾಯದಂತೆ ನಡೆದ “ವಲೈಕಾಪ್ಪು” ಬಗ್ಗೆ ಬರೆದುಕೊಂಡಿದ್ದಾರೆ. ತಮಿಳಿನಲ್ಲಿ ವಲೈಕಾಪ್ಪು ಎಂದರೆ ಸೀಮಂತ ಎನ್ನುವ ಅರ್ಥವನ್ನು ನೀಡುತ್ತದೆ. ಅದಲ್ಲದೇ ಪತಿ ಗ್ಲೆನ್ ಮ್ಯಾಕ್ಸ್‌ವೆಲ್ ಜೊತೆಗಿನ ಫೋಟೋವನ್ನು ಸಹ ವಿನಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ವಿನಿ ರಾಮನ್ ಅವರ ಸೀಮಂತ ಶಾಸ್ತ್ರದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ಮಿನಿಯವರು ನೀಲಿ ಬಣ್ಣದ ರೇಷ್ಮೆ ಸೀರೆ ಉಟ್ಟು, ಕೈತುಂಬಾ ಗಾಜಿನ ಬಳೆಗಳನ್ನು ತೊಟ್ಟಿದ್ದಾರೆ. ಪತಿ ಮ್ಯಾಕ್ಸಿ ಬೂದು ಬಣ್ಣದ ಕುರ್ತಾ ಧರಿಸಿದ್ದಾರೆ. ಈ ಮೂಲಕ ತನ್ನ ಮುದ್ದಿನ ಮಡದಿಗೆ ಪ್ರೀತಿಯ ಉಡುಗೊರೆಗಳನ್ನು ನೀಡಿದ್ದಾರೆ. ಸೀಮಂತ ಶಾಸ್ತ್ರಗಳಲ್ಲಿ ವಿನಿ ಕುಟುಂಬದವರು ಹಾಜರಾಗಿದ್ದಾರೆ.
ಕಳೆದ ಮೇ 11ರಂದು, ಗ್ಲೆನ್ ಮತ್ತು ವಿನಿ ಹೃದಯಸ್ಪರ್ಶಿ ಪೋಸ್ಟ್‌ನೊಂದಿಗೆ ತಂದೆ ತಾಯಿಯಾಗುತ್ತಿರುವ ವಿಚಾರವನ್ನು ರಿವೀಲ್ ಮಾಡಿದ್ದು, ತಾಯಿಯಾಗುವ ತಮ್ಮ ಪ್ರಯಾಣವು ಸುಲಭವಾಗಿರಲಿಲ್ಲ ಎಂದಿದ್ದರು. ಕಳೆದ ವರ್ಷ ಅಂದರೆ 2022ರಲ್ಲಿ ಜೋಡಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 2022 ರ ಮಾರ್ಚ್ 27 ರಂದು ಚೆನ್ನೈ (Chennai) ನಲ್ಲಿ ವಿನಿ ಅವರನ್ನು ಮ್ಯಾಕ್ಸ್‌ವೆಲ್ ಮದುವೆ ಮಾಡಿಕೊಂಡಿದ್ದರು.