ಮೊದಲನೆಯದಾಗಿ ಮೇಷ ರಾಶಿ ಅಂದ್ರೆ ಅಗ್ನಿತತ್ವ ರಾಶಿ. ಈ ರಾಶಿಯವರಿಗೆ ಹೊಂದುವಂತಹ ರಾಶಿಯವರನ್ನೆ ವಿವಾಹವಾದರೆ ಜೀವನ ಉತ್ತಮವಾಗಿರುತ್ತದೆ. ಮೇಷ ರಾಶಿಗೆ ಹೊಂದಿಕೆಯಾಗುವ ರಾಶಿ ಅಂದ್ರೆ ಸಿಂಹ ಮತ್ತು ಧನು. ಈ ರಾಶಿಯವ ಜೊತೆ ಮದುವೆ ಆದರೆ ಅವರ ದಾಂಪತ್ಯ ಜೀವನ ಉತ್ತಮವಾಗಿ ಇರುತ್ತದೆ.
ವೃಷಭ ರಾಶಿ ಅಂದ್ರೆ ಭೂತತ್ವ ರಾಶಿ ಎನ್ನುತ್ತದೆ ಜೋತಿಷ್ಯ ಶಾಸ್ತ್ರ. ಇವರು ಕನ್ಯಾ ಹಾಗೂ ಮಕರ ರಾಶಿ ಅವರನ್ನು ಮದುವೆಯಾದರೆ ಬಹಳ ಒಳ್ಳೆಯದು. ಇನ್ನು ವಾಯುತತ್ವ ಹೊಂದಿರುವ ಮಿಥುನ ರಾಶಿಯವರು ತುಲಾ ಹಾಗೂ ಕುಂಭ ರಾಶಿಯವರನ್ನೆ ವಿವಾಹವಾದರೆ ಬಹಳ ಉತ್ತಮ. ಸಂಸಾರ ಚೆನ್ನಾಗಿರುತ್ತದೆ. ಅಷ್ಟೇ ಅಲ್ಲ, ಮಿಥುನ ರಾಶಿಯವರು ಮೇಷ ರಾಶಿಯವರನ್ನು ಬಿಟ್ಟು ಯಾವುದೇ ರಾಶಿಯವರನ್ನು ಕೂಡ ಮದುವೆ ಆಗಬಹುದು. ಮೇಷ ರಾಶಿಯವರ ಜೊತೆ ಮಾತ್ರ ಮಿಥುನ ರಾಶಿಯ ಜನ ಹೊಂದಾಣಿಕೆ ಆಗುವುದಿಲ್ಲ.
ಕರ್ಕಾಟಕ ರಾಶಿ ಜಲತತ್ವ ರಶಿಯಾಗಿದೆ. ಇವರು ವೃಶ್ಚಿಕ ಮತ್ತು ಮೀನ ರಾಶಿಯವರನ್ನು ವಿವಾಹವಾದರೆ ಜೀವನ ಬಹಳ ಆರಾಮದಾಯಕವಾಗಿ ಇರುತ್ತದೆ. ಆದಾಗ್ಯೂ ವೃಶ್ಚಿಕ ರಾಶಿಯವರನ್ನು ಮದುವೆಯಾದರೆ ಸಂಸಾರದಲ್ಲಿ ತೊಂದರೆಗಳು ಕಾಣಿಸಿಕೊಳ್ಳಬಹುದು. ಹಾಗಾಗಿ ವೃಶ್ಚಿಕ ರಾಶಿಯವರಿಗಿಂತ ಮೀನ ರಾಶಿಯವರನ್ನು ಮದುವೆಯಾಗುವುದು ಉತ್ತಮ. ಸಿಂಹ ರಾಶಿಯವರು ಅಗ್ನಿ ತತ್ವ ರಾಶಿ. ಇವರು ಮೇಷ ರಾಶಿ ಹಾಗೂ ಧನುಶ್ ರಾಶಿಯವರನ್ನು ವಿವಾಹ ಆಗಬಹುದು.
ಕನ್ಯಾ ರಾಶಿ ಭೂತತ್ವ ರಾಶಿ ಆಗಿದೆ. ಇವರು ವೃಷಭ ಮತ್ತು ಮಕರ ರಾಶಿಯವರ ಜೊತೆ ಸಪ್ತಪದಿ ತುಳಿದರೆ ಜೀವನ ಚೆನ್ನಾಗಿರುತ್ತದೆ. ತುಲಾ ರಾಶಿತನ್ನು ವಾಯು ತತ್ವ ರಾಶಿ ಎನ್ನಲಾಗುತ್ತದೆ. ಇವರು ಮಿಥುನ ರಾಶಿ ಮತ್ತು ಕುಂಭ ರಾಶಿಯವರನ್ನು ವಿವಾಹವಾಗಬೇಕು. ವೃಶ್ಚಿಕ ರಾಶಿಯವರು ಜಲತತ್ವ ರಾಶಿ. ಮೀನ ಹಾಗೂ ಕರ್ಕಾಟಕ ರಾಶಿಯವರನ್ನು ಮದುವೆಯಾಗಬಹುದು, ಆದರೆ ಕರ್ಕಾಟಕ ರಾಶಿಯವರಿಗಿಂತ ಮೀನ ರಾಶಿಯವರನ್ನ ಮದುವೆಯಾದರೆ ಉತ್ತಮ.
ಹೊಸ ವರುಷ 2023ರಲ್ಲಿ ಈ ಆರು ರಾಶಿಯವರಿಗೆ ಒಲಿದು ಬರಲಿದೆ ಮದುವೆಯ ಹರುಷ.. ಕಂಕಣ ಭಾಗ್ಯ ಕೂಡಿ ಬರಲಿರುವ ಈ ಆರು ರಾಶಿ ಯಾವವು?
ಇನ್ನು ಧನು ರಾಶಿಯವರು ಮೇಷ ರಾಶಿ ಹಾಗೂ ಸಿಂಹ ರಾಶಿ ಜೊತೆ ಗುಣ ಚೆನ್ನಾಗಿ ಮ್ಯಾಚ್ ಆಗುತ್ತದೆ. ಹಾಗಾಗಿ ಈ ರಾಶಿಯವರನ್ನ ವಿವಾಹ ಆಗ ಆಗಬಹುದು. ಅಂತೆಯೇ ಮಕರ ರಾಶಿಯವರು ವೃಷಭ ಹಾಗೂ ಕನ್ಯಾ ರಾಶಿಯವರನ್ನು ಮದುವೆಯಾಗುವುದು ಸೂಕ್ತ. ಇನ್ನು ಕುಂಭ ರಾಶಿಯವರು ಮೀನ ಹಾಗೂ ತುಲಾ ರಾಶಿಯವರನ್ನು ಮದುವೆಯಾಗೀ ಹೊಂದಾಣಿಕೆಯ ಜೀವನ ನಡೆಸಬಹುದು. ಮೀನ ರಾಶಿಯವರು ಕರ್ಕಾಟಕ ಹಾಗೂ ವೃಶ್ಚಿಕ ರಾಶಿಯವರನ್ನು ವಿವಾಹವಾದರೆ ವೈವಾಹಿಕ ಜೀವನ ಹಾಲು ಜೇನಿನಂತೆ ಇರುತ್ತದೆ.