ಶಕ್ತಿ ಯೋಜನೆ ಪ್ರಾರಂಭವಾದ ಮೂರೇ ದಿನಕ್ಕೆ ಸರ್ಕಾರಕ್ಕೆ ಒದಗಿದ ಒಟ್ಟಾರೆ ವೆಚ್ಚ ಎಷ್ಟು ಕೋಟಿ ಗೊತ್ತಾ? ಅಬ್ಬಬ್ಬಾ!!!

Congress shajti yojana total loss : ಕಾಂಗ್ರೆಸ್ ಸರ್ಕಾರ (Congress Government)ವು ಚುನಾವಣೆಯ ಸಂದರ್ಭದಲ್ಲಿ ಐದು ಭರವಸೆಗಳನ್ನು ನೀಡಿತ್ತು. ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ ಕೂಡ ಒಂದು. ಈ ಶಕ್ತಿ’ ಯೋಜನೆ ಆರಂಭದ ನಂತರ ಸರ್ಕಾರಿ ಸಾರಿಗೆ ಬಸ್‌ (Government Bus) ಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ಮಹಿಳೆಯರಿಗೆ ಬಸ್ ಟಿಕೆಟ್ ಉಚಿತ ಎಂಬ ಘೋಷಣೆಯ ‘ಶಕ್ತಿ’ ಯೋಜನೆ (KSRTC Free Bus for Women) ಜಾರಿ ಬಂದಿದ್ದು, ಮಹಿಳೆಯರು ಖುಷಿಯಾಗಿದ್ದಾರೆ. ಶಕ್ತಿ ಯೋಜನೆ ಜಾರಿಗೆ ಬಂದ ಮೂರೇ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆಯೂ ಅಧಿಕವಾಗಿದೆ. ಮೂರು ದಿನದಲ್ಲಿ 98.58 ಲಕ್ಷ ಮಹಿಳೆಯರು ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಮೂರೇ ದಿನಗಳಲ್ಲಿ ಒಟ್ಟು ಪ್ರಯಾಣದ ಮೊತ್ತ 21.05 ಕೋಟಿ ರು.ಗಳಾಗಿರುವುದು ನಿಜಕ್ಕೂ ಅಚ್ಚರಿ ತಂದಿದೆ.

ಹೌದು ಶಕ್ತಿ ಯೋಜನೆ ಆರಂಭವಾದ ಬಳಿಕ ಬಿಎಂಟಿಸಿ (BMTC) ಮತ್ತು ಕೆಎಸ್ ಆರ್ ಟಿಸಿ (KSRTC) ಬಸ್‌ಗಳಲ್ಲಿ ಹೆಚ್ಚಿನ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಈ ಯೋಜನೆ ಆರಂಭವಾದ ಭಾನುವಾರ (ಜೂ. 11) ನಾಲ್ಕೂ ನಿಗಮಗಳ ಬಸ್‌ಗಳಲ್ಲಿ 5.71 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದರು. ಆದಾದ ಬಳಿಕ ಸೋಮವಾರ (12) 41.34 ಲಕ್ಷ ಹಾಗೂ ಮಂಗಳವಾರ 51.52 ಲಕ್ಷ ಮಹಿಳೆಯರು ಸೇರಿದಂತೆ ಒಟ್ಟು 98.58 ಲಕ್ಷ ಮಹಿಳೆಯರು ಬಸ್ಸಿನಲ್ಲಿ ಪ್ರಯಾಣಿಸಿದ್ದರು. ಪ್ರಯಾಣಿಸಿದ ಮೊತ್ತ ಮೊದಲ ದಿನ 1.40 ಕೋಟಿ ರು., ಎರಡನೇ ದಿನ 8.83 ಕೋಟಿ ರು. ಹಾಗೂ ಮೂರನೇ ದಿನ 10.82 ಕೋಟಿ ರೂಗಳಾಗಿವೆ.

ಬಸ್ಸಿನಲ್ಲಿ ಪ್ರಯಾಣ ಮಾಡುವ ಮಹಿಳೆಯರ ಸಂಖ್ಯೆಯು ಹೆಚ್ಚಾಗುತ್ತಿದೆ. ಹೀಗಾಗಿ ಪ್ರಮುಖ ನಗರಗಳ ರೈಲ್ವೆ ಮತ್ತು ವೋಲ್ವೋ ಬಸ್‌ಗಳ ಟಿಕೆಟ್​​ ಹಣ ಸಂಗ್ರಹಕ್ಕೆ ಬಾರಿ ಹೊಡೆತವೊಂದು ಬಿದ್ದಿದೆ. ಧಾರ್ಮಿಕ ಸ್ಥಳಗಳಿಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ಬಸ್‌ಗಳಲ್ಲಿ ಜನದಟ್ಟಣೆ ಉಂಟಾಗಿದ್ದು,

ಟಿಕೆಟ್ ಕೊಡಲು ಬಸ್ ಕಂಡಕ್ಟರ್ ಹರಸಾಹಸ ಪಡುವ ಘಟನೆಗಳು ನಡೆಯುತ್ತಿದೆ. ಇತ್ತ ​ ಅಫಜಲಪುರದಿಂದ ಬ್ಯಾಡಗಿ ಬಸ್​ನ ಕಂಡಕ್ಟರ್​ ಒಬ್ರು ಸೀಟ್ ಮೇಲೆ ಹತ್ತಿ ಪ್ರಯಾಣಿಕರಿಗೆ ಟಿಕೆಟ್ ಕೊಡುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿವೆ. ಹೀಗೆ ಆದರೆ ಮುಂಬರುವ ದಿನಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

Leave a Reply

Your email address will not be published. Required fields are marked *