ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಕುಮಾರ್ ಅವರ ಮುದ್ದಾದ ಕುಟುಂಬ ಹೇಗಿದೆ ಗೊತ್ತಾ? ನೋಡಿ ಒಮ್ಮೆ ಸೂಪರ್ ಫ್ಯಾಮಿಲಿ!!

ಕನ್ನಡ ಕಿರುತೆರೆ ಲೋಕವು ಈಗಾಗಲೇ ಅದೆಷ್ಟೋ ಕಲಾವಿದರಿಗೆ ಅವಕಾಶಗಳನ್ನು ಮಾಡಿಕೊಟ್ಟಿವೆ. ಅದರಲ್ಲಿ ಈ ಕನ್ನಡ ಕಿರುತೆರೆ ಲೋಕದಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ (Reality Show) ಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಹಳ್ಳಿ ಪ್ರತಿಭೆಗಳಿಗೆ ವೇದಿಕೆಯಾದ ಶೋಗಳಿವು. ಕನ್ನಡ ಕಿರುತೆರೆಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು (Comdey Kiladigalu) ರಿಯಾಲಿಟಿ ಶೋ ಮೂಲಕ ಕಿರುತೆರೆ ಪ್ರೇಕ್ಷಕರ ಮನಸ್ಸನ್ನು ಗೆದ್ದ ಪ್ರತಿಭೆಯೆಂದರೆ ಅದುವೇ ಲೋಕೇಶ್​ ಕುಮಾರ್​ ( Lokesh Kumar).

ಕಾಮಿಡಿ ಕಿಲಾಡಿಗಳು ಶೋ ಬಳಿಕ ಸ್ಯಾಂಡಲ್ ವುಡ್ ಗೂ ಎಂಟ್ರಿ ಕೊಟ್ಟ ಇವರಿಗೆ ಸಿನಿಮಾದಲ್ಲಿ ನಟಿಸಲು ಅವಕಾಶಗಳು ಬಂದವು. ಭಾಗ್ಯವಂತರು (Bhagyavantaru) ಎಂಬ ಹೊಸ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಲೋಕೇಶ್ ಜೊತೆಯಲ್ಲಿ ಶ್ರವಂತ್ (Shravanth) ಮತ್ತು ಸೂರಜ್ (Suraj) ಕೂಡ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಲೋಕೇಶ್ ಕುಮಾರ್ ಅವರು ಸ್ಯಾಂಡಲ್ ವುಡ್ ನಲ್ಲಿ ಕೂಡ ಬ್ಯುಸಿಯಾಗಿದ್ದಾರೆ.

ಆದರೆ ಇದೀಗ ಲೋಕೇಶ್ ಕುಮಾರ್ ಅವರ ವೈಯುಕ್ತಿಕ ಜೀವನದ ಫೋಟೋಗಳು ವೈರಲ್ ಆಗಿವೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಕುಮಾರ್ ಅವರ ಮಡದಿ (Wife) ಜೊತೆಗಿನ ಫೋಟೋಗಳು ವೈರಲ್ ಆಗಿವೆ. ಈ ಫೋಟೋದಲ್ಲಿ ಮದುವೆಯ ಕ್ಷಣ, ತಾಯಿಯಾಗುತ್ತಿರುವ ಕ್ಷಣ ಹಾಗೂ ಟ್ರಿಪ್ ಎಂಜಾಯ್ ಮಾಡುತ್ತಿರುವ ಕ್ಷಣಗಳನ್ನು ಈ ಫೋಟೋದಲ್ಲಿ ನೋಡಬಹುದಾಗಿದೆ. ಈ ಫೋಟೋಗೆ ಒಂದು ಸಾವಿರಕ್ಕೂ ಅಧಿಕ ವ್ಯೂಸ್ ಬಂದಿದೆ.

ಕಳೆದ ವರ್ಷವಷ್ಟೇ ಲೋಕೇಶ್ ಕುಮಾರ್ ಅವರು ಬಿಗ್​ ಬಾಸ್​ (Big Boss) ಮನೆಯೊಳಗೆ ಹೋಗಿದ್ದರು. ಬಿಗ್​ ಬಾಸ್​ ವೇದಿಕೆ ಮೇಲೆ ಮಾತನಾಡಿದ್ದ ಲೋಕೇಶ್, “ನನ್ನ ಅಪ್ಪನ ಮೊದಲ ಹೆಂಡತಿ ತೀರಿಕೊಂಡ ನಂತರ ಅವರು ಮತ್ತೊಂದು ಮದುವೆ ಆದರಂತೆ. ಆ ತಾಯಿಗೆ ಹುಟ್ಟಿದವನು ನಾನು. ನಾನು ಚಿಕ್ಕ ವಯಸ್ಸಿನಲ್ಲಿಯೇ ಅಂದ್ರೆ 9ನೇ ವಯಸ್ಸಿನಲ್ಲಿಯೇ ಮನೆ ಬಿಟ್ಟು ಹೋಗಿದ್ದೆ. ಆಗೆಲ್ಲಾ ನನ್ನನ್ನು ಕಂದರೆ ಎಲ್ಲರೂ ನೆಗ್ಲೆಟ್ ಮಾಡುತ್ತಿದ್ದರು. ಈಗ ಸೆಲ್ಫೀ ಕೇಳುತ್ತಾರೆ. ಅಲ್ಲದೇ ಮೊದಲಿಗೆ ನಾನು ಭಿಕ್ಷೆ ಬೇಡಿಕೊಂಡು, ಪೇಪರ್ ಆಯ್ದುಕೊಂಡು ಜೀವನ ಮಾಡಿದ್ದೇನೆ. ಅಲ್ಲದೇ ಎಷ್ಟೋ ಸಲ ನಾನೊಬ್ಬ ಮಾತು ಬರದವನು ಎಂದು ದುಡ್ಡು ಕೇಳಿದ್ದೇನೆ” ಎಂದಿದ್ದರು.

“ಆದರೆ ಹೀಗೇ ಮಾಡಿದ ನಟನೆ ಮುಂದೆ ನನ್ನ ಜೀವನದಲ್ಲಿ ಪ್ರಮುಖ ಪಾತ್ರವಹಿಸಿತು. ಆದರೆ ಬಿಕ್ಷೆ ಬೇಡುತ್ತಿದ್ದ ವೇಳೆ ಒಂದು ಟ್ರಸ್ಟ್​​ನವರು ನನ್ನನ್ನು ಕರೆದುಕೊಂಡು ಹೋಗಿ ಆಶ್ರಯ ಕೊಟ್ಟರು. ಅವರಿರದಿದ್ದರೆ ನಾನು ಇಂದು ಇಲ್ಲಿ ಇರುತ್ತಿರಲಿಲ್ಲ ಎಂದು ಹೇಳಿ ಬಾವುಕರಾದರು. ಅಲ್ಲದೇ ಸೆಲೆಬ್ರಿಟಿ ಲೈಫ್ ಕೆಲವೊಮ್ಮೆ ಚುಚ್ಚುತ್ತೆ. ಯಾವ ಪಾತ್ರ ಸಿಕ್ಕರೂ ಮಾಡುತ್ತೇನೆ. ಈ ಒಂದು ಬಿಗ್​ ಬಾಸ್​ ಅವಕಾಶದಿಂದ ನನ್ನ ಜೀವನ ಬದಲಾಗಬಹುದು ಎಂಬ ನಂಬಿಕೆ ಇದೆ” ಎಂದು ಹೇಳಿದ್ದರು. ಸದ್ಯಕ್ಕೆ ತನ್ನ ಪ್ರತಿಭೆಯಿಂದಲೇ ಗುರುತಿಸಿಕೊಂಡಿರುವ ಲೋಕಿಯವರು ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *