College couple on road : ಇತ್ತೀಚಿಗೆ ಪ್ರೇಮಿಗಳ ಕಾಟ ಜೋರಾಗಿದೆ ಪಬ್ಲಿಕ್ ನಲ್ಲಿ ನೂರು ರಸ್ತೆಯಲ್ಲಿ ಕೂಡ ಪ್ರೇಮಿಗಳ ಹೆಚ್ಚಾಗುತ್ತಿದೆ. ಇವರಿಗೆ ಹೇಳುವವರು ಕೇಳುವವರು ಯಾರು ಇಲ್ಲ ಎಂಬಂತಾಗಿದೆ. ಅದರಲ್ಲೂ ಕಾಲೇಜಿಗೆ ಹೋಗುವ ಯುವಕ ಯುವತಿಯರ ನಡು ರಸ್ತೆಯ ರೋಮ್ಯಾನ್ಸ್ ಸಿಕ್ಕಾಪಟ್ಟೆ ವೈರಲಾಗುತ್ತಿದೆ.
ಬೆಂಗಳೂರಿನಲ್ಲಿ ಯುವಕ ಮತ್ತು ಯುವತಿ ಬೈಕ್ ಓಡಿಸಿಕೊಂಡು ನಡುರಸ್ತೆಯಲ್ಲಿ ಯಾರಿಗೂ ಎದೆಗುಂದದೆ ಪ್ರೇಮ ಪ್ರಣಯದಲ್ಲಿ ಮುಳುಗಿರುವ ದೃಶ್ಯ ಕಂಡು ಬಂದಿದೆ. ಬೈಕ್ ಅನ್ನು ಯುವತಿ ಚಲಾಯಿಸುತ್ತಿದ್ದು.. ಬೈಕ್ ಹಿಂದೆ ಕೂತ ಪ್ರಿಯಕರ ನಡು ರಸ್ತೆಯಲ್ಲಿ ನಡೆದುಕೊಂಡ ಅಸಭ್ಯ ವರ್ತನೆ ಇದೀಗ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇತ್ತೀಚಿಗಷ್ಟೇ ಆಂಧ್ರಪ್ರದೇಶದಲ್ಲಿ ಇಂಥ ಒಂದು ಘಟನೆ ನಡೆದಿತ್ತು.ಬೈಕ್ ಓಡಿಸಿಕೊಂಡು ಕಾಲೇಜ್ ಹುಡುಗಿಯನ್ನು ಟ್ಯಾಂಕರ್ ಮೇಲೆ ಕುಳಿಸಿಕೊಂಡು, ಒಬ್ಬರಿಗೊಬ್ಬರು ಕಿ-ಸ್ ಕೊಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು. ಈ ವಿಡಿಯೋ ಕೂಡ ಎಲ್ಲಾ ಕಡೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಕಾಲೇಜು ಹೋಗುವ ಹುಡುಗ ಹುಡುಗಿಯರು ಕಾಲೇಜಿಗೆ ಹೋಗದೆ ನಡು ರಸ್ತೆಯಲ್ಲಿ ಇಂತಹದು ಸಮಾಜಕ್ಕೆ ಕೆಟ್ಟ ಸಂದೇಶವನ್ನು ರವಾನೆ ಮಾಡುತ್ತಿದೆ. ಬೆಂಗಳೂರಿನ ಆರ್ ಆರ್ ನಗರದ ಫ್ಲೈ ಓವರ್ ಮೇಲೆ ಈ ಒಂದು ಘಟನೆ ನಡೆದಿದೆ. ಹುಡುಗಿ ಗಾಡಿ ಓಡಿಸುತ್ತಿದ್ದಳು. ಬೈಕ್ ನ ಹಿಂದಿನ ಸೀಟಿನಲ್ಲಿ ಹುಡುಗ ಕುಳಿತುಕೊಂಡು ಹುಡುಗಿಯ ಕೆನ್ನೆಗೆ ಮುತ್ತಿನ ಸುರಿಮಳೆ ಸುರಿಸಿದ್ದಾನೆ.
ಗಾಡಿ ಓಡಿಸುತ್ತಿದ್ದ ಪ್ರಿಯತಮೆಗೆ ಮುತ್ತಿನ ಸುರಿಮಳೆ ಸುರಿಸಿರುವ ಫೋಟೋವನ್ನು ಹಿಂದೆಯೆ ಇದ್ದ ಕಾರಿನ ಚಾಲಕನೊಬ್ಬ ಕ್ಲಿಕ್ಕಿಸಿದ್ದಾನೆ. ಅಷ್ಟೇ ಅಲ್ಲದೆ ಗಾಡಿ ಓಡಿಸುತ್ತಿದ್ದ ಹುಡುಗಿ ಮತ್ತು ಹಿಂದೆ ಕುಳಿತಿದ್ದ ಪ್ರಿಯತಮ ಇಬ್ಬರು ಹೆಲ್ಮೆಟ್ ಕೂಡ ಹಾಕಿರಲಿಲ್ಲ. ಹೆಲ್ಮೆಟ್ ಹಾಕದೆ ನಡು ರಸ್ತೆಯಲ್ಲಿ ಈ ರೀತಿಯ ವರ್ತನೆ ತೋರುವುದು ಕಾನೂನಿಗೆ ವಿರುದ್ಧವಾದ ಕ್ರಮ.
ಮೊನ್ನೆ ಆಂಧ್ರಪ್ರದೇಶದಲ್ಲಿ ನಡೆದಿದ್ದ ಹುಡುಗ ಹುಡುಗಿಯ ವರ್ತನೆಗೆ ಪೊಲೀಸರು ಕೇಸ್ ಹಾಕಿ ಪಾಠವನ್ನು ಕಲಿಸಿದ್ದರು.ಅಂದ್ರ ಪ್ರದೇಶದಲ್ಲಿ ನಡು ರಸ್ತೆಯಲ್ಲಿ ಆದ ಘಟನೆಯನ್ನು ನೋಡಿ ಪೊಲೀಸರು ತಂದೆ ತಾಯಿಯನ್ನು ಕರೆದುಕೊಂಡು ಅವರಿಗೆ ಪಾಠ ಹೇಳಿದರು. ಗಾಡಿಯನ್ನು ವಶಪಡಿಸಿಕೊಂಡರು. ಇದೀಗ ಈ ಬೆಂಗಳೂರಿನ ಜೋಡಿಗೆ ಕೂಡ ಪೊಲೀಸರು ಪಾಠವನ್ನು ಕಲಿಸುತ್ತಾರಾ ಎಂಬುದನ್ನು ನೋಡಬೇಕಾಗಿದೆ.