ಕಾಫಿ ನಾಡು ಚಂದುರವರ ಮಗ ಪುನೀತ್ ಹೇಗಿದ್ದಾನೆ ಗೊತ್ತಾ? ಟೀಕೆ ಮಾಡುವವರಿಗೆ ಖಡಕ್ ಆಗಿ ಹೇಳಿದ್ದೇನು ಗೊತ್ತಾ?

ಸೋಶಿಯಲ್ ಮೀಡಿಯಾದ ಮೂಲಕ ಸೆಲೆಬ್ರಿಟಿಯಾದವರ ಪೈಕಿ ಕಾಫಿ ನಾಡು ಚಂದು ಕೂಡ (Cofeenadu Chandu) ಒಬ್ಬರು. ಕಳೆದ ವರ್ಷ ಮೀಮ್ ಪೇಜ್ , ಟ್ರೋಲ್ ಪೇಜ್ ಗಳೆಲೆಲ್ಲಾ ಇವರೇ ರಾರಾಜಿಸುತ್ತಿದ್ದರು. ಅಷ್ಟರ ಮಟ್ಟಿಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್​ ಆಗಿರುವ ಕಾಫಿನಾಡು ಚಂದು ಎಲ್ಲರಿಗೂ ಕೂಡ ಚಿರಪರಿಚಿತರಾಗಿ ಹೋಗಿದ್ದಾರೆ.

ಹ್ಯಾಪಿ ಬರ್ತಡೇ ಸಾಂಗ್ ಹೇಳುವ ಮೂಲಕ ವೈರಲ್ ಆಗಿರುವ ಚಂದು, ಪ್ರತಿ ವಿಡಿಯೋದಲ್ಲೂ ನಾನು ಶಿವಣ್ಣನ ಅಭಿಮಾನಿ ಎಂದ್ಹೇಳಿ ಬರ್ತಡೇ ಸಾಂಗ್ ಹಾಡುತ್ತಾರೆ. ಅದಲ್ಲದೇ, ಮನಸ್ಸಿಗೆ ಬಂದಂತೆ ಹಾಡು, ಸಾಹಿತ್ಯ ಹೇಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಈ ಕಾಫಿ ನಾಡು ಚಂದು ಆಟೋ ಡ್ರೈವರ್ (Auto Driver) ಆಗಿ ಕೆಲಸ ಮಾಡುತ್ತಿದ್ದು, ಇವರ ಊರು ಚಿಕ್ಕಮಗಳೂರು (Chikkamanglore) ಜಿಲ್ಲೆಯ ಮೂಡಿಗೆರೆ (Mudigere) ತಾಲೂಕಿನ ಭಾಗಮನೆ (Bhagamane) ಯವರು.

ಈ ಹಿಂದೆಯಷ್ಟೇ ಫೇಮಸ್ ಆಗುತ್ತಿದ್ದಂತೆ ನಿರೂಪಕಿ ಅನುಶ್ರೀ ಅವರಿಗೆ ಚಂದು ಒಂದು ಬೇಡಿಕೆ ಇಟ್ಟಿದ್ದರು. ‘ಜೀ ಕನ್ನಡದಲ್ಲಿ ಆಯಂಕರಿಂಗ್​ ಮಾಡುವ ಅನುಶ್ರೀ ಅಕ್ಕ.. ನನಗೆ ಶಿವಣ್ಣ ಭೇಟಿ ಮಾಡಿಸಿ ಅನುಶ್ರೀ ಅಕ್ಕ.. ಓಹೋ ಅನುಶ್ರೀ ಅಕ್ಕ.. ಆಹಾ ಅನುಶ್ರೀ ಅಕ್ಕ.. ನಾನು ಶಿವಣ್ಣ ಅವರನ್ನು ನೋಡಲೇ ಬೇಕು ಅಕ್ಕ..’ ಎಂದು ಚಂದು ರೀಲ್ಸ್​ ಮಾಡಿದ್ದರು. ಈ ಮೂಲಕ ಅನುಶ್ರೀಯವರಲ್ಲಿ ಮನವಿ ಮಾಡಿಕೊಂಡಿದ್ದರು. ಆದಾದ ಬಳಿಕ ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ ಶೂಟಿಂಗ್​ ವೇದಿಕೆಯಲ್ಲಿ ಶಿವರಾಜ್​ಕುಮಾರ್​ ಮುಂದೆ ಹಾಡು ಹೇಳಲು ಚಂದುಗೆ ಅವಕಾಶ ಸಿಕ್ಕಿತ್ತು.

ಜೀ ಕನ್ನಡ ವಾಹಿನಿಯು ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ (Dance Karnataka Dance) ಶೋಗೆ ಕಾಫಿನಾಡು ಚಂದುರನ್ನು ಅತಿಥಿಯಾಗಿ ಆಹ್ವಾನಿಸಿತ್ತು. ಅದಲ್ಲದೇ ಕಳೆದ ವರ್ಷ ಪುಂಡರು ಕಾಫಿನಾಡು ಚಂದು ಮೇಲೆ ಹ-ಲ್ಲೆ ಮಾಡಿದ್ದರು. ಕೆಲವರು ಚಂದು ಹತ್ತಿರ ಬಂದು ಇದ್ದಕ್ಕಿದ್ದಂತೆ ವಿಡಿಯೋ ಮಾಡು ಅಂತ ಕೇಳಿದ್ದರು. ಆಗ ಚಂದು ನನ್ನ ಕೆಲಸ ಆದ ಮೇಲೆ ಮಾಡಿ ಕೊಡ್ತಿನಿ ಎಂದಿದ್ದರು. ಇದರಿಂದ ಕೋ-ಪಕೊಂಡು ಚಂದು ಮೇಲೆ ಹ-ಲ್ಲೆ ಮಾಡಿದ್ದರು. ಕಾಫಿ ನಾಡು ಚಂದುರವರಿಗೆ ಒಬ್ಬ ಮಗನಿದ್ದಾನೆ.

ಕಾಫಿ ನಾಡು ಚಂದು ಮಗನ ಹೆಸರು ಪುನೀತ್ (Puneeth). ಕಾಫಿ ನಾಡು ಚಂದುವಿನಂತೆ ಅವರ ಮಗ ಕೂಡ ಶಿವಣ್ಣ-ಪುನೀತ್ ಅವರ ದೊಡ್ಡ ಅಭಿಮಾನಿ ಎಂದರೆ ನಿಜಕ್ಕೂ ಶಾಕ್ ಆಗಬಹುದು. ಹೀಗಾಗಿ ಶಿವರಾಜ್ ಕುಮಾರ್ ಮನೆಗೆ ಚಂದು ಮಗ ಪುನೀತ್ ಬಂದಿದ್ದನು. ಆ ಬಳಿಕ ತನ್ನ ಆಸೆ ಕನಸುಗಳನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಪುನೀತ್ ಗೆ ಪೊಲೀಸ್ ಆಗಬೇಕು ಎನ್ನುವ ಆಸೆ. ತನ್ನ ಕನಸನ್ನು ಈಡೇರಿಸಿಕೊಳ್ಳಲು ಕಷ್ಟ ಪಡುತ್ತಿದ್ದಾರೆ. ಪುನೀತ್ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿಲ್ಲ.

ಅಪ್ಪನನ್ನು ಟೀಕೆ ಮಾಡುವವರಿಗೆ ಕಾಫಿ ನಾಡು ಚಂದ್ರು ಮಗ ಪುನೀತ್, ‘ ನಮ್ಮ ಅಪ್ಪನ ಬಗ್ಗೆ ಟೀಕೆ ಮಾಡೋರು ಮಾಡಿಕೊಳ್ಳಲಿ. ನಮ್ಮ ಫ್ಯಾಮಿಲಿ ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲ್ಲ. ಮೊದಲಿಗೆ ಪ್ರೋತ್ಸಾಹದ ಮಾತುಗಳನ್ನ ಆಡಿದ್ದೇ ನಾವು. ನೀವ ರೀಲ್ಸ್ ಮಾಡೋದು ಬಿಡಬೇಡಿ ಅಂತ ಹೇಳಿದ್ವಿ. ಇನ್ನು ನಮ್ಮ ಊರಿನವರು ಸಹ ಸಖತ್ ಸಪೋರ್ಟ್ ಮಾಡ್ತಾರೆ’ ಎಂದಿದ್ದಾನೆ.

Leave a Reply

Your email address will not be published. Required fields are marked *