ʻಶಕ್ತಿʼ ಯೋಜನೆಗೆ ಚಾಲನೆ ನೀಡಿ ಮಹಿಳೆಯರಿಗೆ ಶಕ್ತಿ ತುಂಬಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲರಿಗೂ ಫ್ರೀ ಟಿಕೆಟ್ ಹಂಚಿಕೆ, ಖುಷಿಯಲ್ಲಿ ತೇಲಿದ ಮಹಿಳೆಯರು!!

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ರಾಜ್ಯದ ಸಿಎಂ ಯಾರು ಆಗ್ತಾರೆ ಎನ್ನುವ ಕುತೂಹಲದಲ್ಲಿಯೇ ಸಾಕಷ್ಟು ದಿನಗಳನ್ನು ಕಳೆಯಬೇಕಾಯಿತು. ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ದರಾಮಯ್ಯ (Siddharamayya) ಮತ್ತು ಡಿ.ಕೆ. ಶಿವಕುಮಾರ್ ( DK Shivakumar) ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದರೆ ಕೊನೆಗೂ ಮುಂದಿನ ಸಿಎಂ ಯಾರು ಎನ್ನುವುದು ಅಂತಿಮವಾಗಿತ್ತು.

ದೆಹಲಿಯ ಮಲ್ಲಿಕಾರ್ಜು ಖರ್ಗೆ ಜೊತೆಗಿನ ಮಾತುಕತೆಯ ಬಳಿಕ ರಾಜ್ಯದ ಸಿಎಂ ಆಗಿ ಸಿದ್ದರಾಮಯ್ಯ ಹುದ್ದೆಯನ್ನು ಅಲಂಕರಿಸಿದ್ದು, ಉಪಮುಖ್ಯಮಂತ್ರಿಯಾಗಿ ಡಿಕೆಶಿ ಶಿವಕುಮಾರ್ ತನ್ನ ಕುರ್ಚಿಯನ್ನು ಅಲಂಕರಿಸಿದ್ದು, ಆದಾದ ಬಳಿಕ ರಾಜ್ಯದ ಜನರ ಚಿತ್ತ ಕಾಂಗ್ರೆಸಿಗರು ನೀಡಿದ ಭರವಸೆಯ ಮೇಲಿತ್ತು. ಕೊನೆಗೂ ತಾವು ಕೊಟ್ಟಿದ್ದ ಭರವಸೆಯನ್ನುಈಡೇರಿಸುವುದಾಗಿ ಹೇಳಿದ್ದು, ಯೋಜನೆಗಳ ಬಗ್ಗೆ ಘೋಷಣೆ ಕೂಡ ಮಾಡಿಯಾಗಿದೆ.

ರಾಜ್ಯ ಸರ್ಕಾರದ ಇಂದು ಗ್ಯಾರಂಟಿಗಳಲ್ಲಿ ಒಂದು ʻಶಕ್ತಿʼ ಯೋಜನೆ. ಈ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯ ಲೋಗೋ ಮತ್ತು ಸ್ಮಾರ್ಟ್​​​​ ಕಾರ್ಡ್​​ ಮಾದರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramayya) ಹಾಗೂ ಉಪಮುಖ್ಯ ಮಂತ್ರಿ ಡಿಕೆ ಶಿವಕುಮಾರ್​ (DK Shivakumar) ಬಿಡುಗಡೆ ಮಾಡಿದ್ದಾರೆ. ಈ ವೇಳೆಯಲ್ಲಿ 5 ಜನ ಮಹಿಳೆಯರಿಗೆ ಸಿಎಂ ಹಾಗೂ ಡಿಸಿಎಂ ಸ್ಮಾರ್ಟ್ ಕಾರ್ಡ್​ ವಿತರಿಸಿದ್ದಾರೆ.​​ಅಷ್ಟೇ ಅಲ್ಲದೇ ವಿಧಾನಸೌಧದಿಂದ ಮೆಜೆಸ್ಟಿಕ್‌ವರೆಗೆ​​ BMTC ಬಸ್‌ನಲ್ಲಿ ತೆರಳಿದ ಸಿಎಂ ಹಾಗೂ ಡಿಸಿಎಂ ಅಲ್ಲಿ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಮಹಿಳೆಯರಿಗೆ ಟಿಕೆಟ್‌ ನೀಡಿ ಯೋಜನೆಗೆ ಚಾಲನೆ ನೀಡಿದ್ದಾರೆ.

ಆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಮಹಿಳಾ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ. ಸಾರ್ವಜನಿಕ ವಲಯದಲ್ಲಿ ಮಹಿಳೆಯರು ಹೆಚ್ಚು ಭಾಗಿಯಾಗಬೇಕು. 5 ಗ್ಯಾರಂಟಿಗಳ ಪೈಕಿ 4 ಗ್ಯಾರಂಟಿಗಳಿಂದ ಮಹಿಳೆಯರಿಗೆ ಅನುಕೂಲವಾಗಲಿದ್ದು, ಮಂಗಳಮುಖಿಯರು ಕೂಡ ಉಚಿತವಾಗಿ ಬಸ್‌ನಲ್ಲಿ ಪ್ರಯಾಣ ಮಾಡಬಹುದು. ಜೊತೆಗೆ ಗ್ಯಾರಂಟಿಗಳ ಮೇಲೆ ವಿರೋಧ ಪಕ್ಷಗಳು ಮಾಡೋ ಟೀಕೆಗೆ ನಾವು ತಲೆ ಕೆಡಿಸಿಕೊಳ್ಳೋದಿಲ್ಲ. ಇನ್ನು ಜುಲೈ 1ರಿಂದ ಗೃಹಜ್ಯೋತಿ ಯೋಜನೆಯನ್ನು ಜಾರಿ ಮಾಡುತ್ತಿದ್ದೇವೆ” ಎಂದಿದ್ದಾರೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಮಾತನಾಡಿದ್ದು, “ರಾಜ್ಯಾದ್ಯಂತ ಏಕಕಾಲದಲ್ಲಿ ಶಕ್ತಿ ಯೋಜನೆಗೆ ಚಾಲನೆ ದೊರೆತಿದ್ದು, ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಆಯಾ ಜಿಲ್ಲೆಯ ಸಚಿವರು, ಶಾಸಕರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಇಂದಿನಿಂದ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣವಿರುತ್ತದೆ. ಉಚಿತ ಪ್ರಯಾಣಕ್ಕೆ APL​​, BPL​ ಕಾರ್ಡ್‌ ಅನ್ನೊ ನಿಯಮ ಇಲ್ಲ. ಯಾವುದಾದರೂ ಆಧಾರ್‌ ಅಥ್ವಾ ವೋಟರ್‌ ಐಡಿ ತೋರಿಸಿ ಪ್ರಯಾಣ ಮಾಡಬಹುದು. ಸ್ಮಾರ್ಟ್​ ಕಾರ್ಡ್​ ಮಾಡಿಸೋಕೆ ಯಾರೂ ದುಡ್ಡು ಕೊಡಬೇಕಿಲ್ಲ. ಸ್ಮಾರ್ಟ್ ಕಾರ್ಡ್​​ ಮಾಡಿಸಿಕೊಳ್ಳೋಕೆ 3 ತಿಂಗಳ ಕಾಲಾವಕಾಶವಿದೆ” ಎಂದಿದ್ದಾರೆ.

 

 

Leave a Reply

Your email address will not be published. Required fields are marked *